ಸಾರಾಂಶ
ಅವಕಾಶ ನೀಡಿದ ಶಾಸಕ ಜಿ.ಎಸ್. ಪಾಟೀಲ ಹಾಗೂ ಪಕ್ಷದ ವರಿಷ್ಠರಿಗೆ ಮತ್ತು ಬೆಂಬಲ ಸೂಚಿಸಿದ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ನೀಡುವ ಸಲಹೆ, ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ
ಗಜೇಂದ್ರಗಡ: ಒಲಿದಿರುವ ಅವಕಾಶ ಸದ್ಭಳಿಕೆ ಮಾಡಿಕೊಂಡು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಪುರಸಭೆ ಸ್ಥಾಯಿ ಸಮಿತಿ ನೂತನ ಚೇರಮನ್ ಮುದಿಯಪ್ಪ ಮುಧೋಳ ಹೇಳಿದರು.
ಪುರಸಭೆಯ ಸ್ಥಾಯಿ ಸಮಿತಿ ಚೇರಮನ್‌ರಾಗಿ ಆಯ್ಕೆಯಾದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪುರಸಭೆ ಅಧ್ಯಕ್ಷರ ಹಾಗೂ ಸದಸ್ಯರ ಸಹಕಾರ ಪಡೆದು ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸ್ಥಾಯಿ ಸಮಿತಿ ವ್ಯಾಪ್ತಿಯ ಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಸಿಕ್ಕಿರುವ ಅವಕಾಶ ಸದ್ಭಳಿಕೆ ಮಾಡಿಕೊಂಡು ತ್ವರಿತಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಅವಕಾಶ ನೀಡಿದ ಶಾಸಕ ಜಿ.ಎಸ್. ಪಾಟೀಲ ಹಾಗೂ ಪಕ್ಷದ ವರಿಷ್ಠರಿಗೆ ಮತ್ತು ಬೆಂಬಲ ಸೂಚಿಸಿದ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ನೀಡುವ ಸಲಹೆ, ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.ಇದಕ್ಕೂ ಮುನ್ನ ಸ್ಥಾಯಿ ಸಮಿತಿ ಚೇರಮನ್‌ರಾಗಿ ಆಯ್ಕೆಯಾದ ಮುದಿಯಪ್ಪ ಮುಧೋಳ ಅವರಿಗೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ಅಧಿಕಾರಿಗಳು ಸನ್ಮಾನಿಸಿದರು. ಬಳಿಕ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಸನ್ಮಾನಿಸಿ ಸಿಹಿ ತಿನಿಸಿ ಅಭಿನಂದಿಸಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಲಕ್ಷ್ಮೀ ಮುಧೋಳ, ದ್ರಾಕ್ಷಾಯಿಣಿ ಚೋಳಿನ, ವಿಜಯಾ ಮಳಗಿ, ಕೌಸರಬಾನು ಹುನಗುಂದ, ನಾಮ ನಿರ್ದೇಶಿತ ಸದಸ್ಯರಾದ ಬಸವರಾಜ ಹೂಗಾರ, ಸುಮಗಂಲಾ ಇಟಗಿ, ಉಮೇಶ ರಾಠೋಡ, ಹಾಗೂ ಶ್ರಿಧರ ಬಿದರಳ್ಳಿ ಸೇರಿ ಇತರರು ಇದ್ದರು.