ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಮತಕ್ಷೇತ್ರದಿಂದ ಅಂತಾರಾಜ್ಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.ತಾಲೂಕಿನ ಕುಂಟಿಮರಿ ಕ್ರಾಸ್ ಗಡಿಯಲ್ಲಿ 2023-24ನೇ ಸಾಲಿನ ಎಸ್‌ಎಚ್‌ಡಿಪಿ ಅನುದಾನದಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಮುಧೋಳ-ಯಲಗೇರಾ ರಾಜ್ಯ ಹೆದ್ದಾರಿ ₹10 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿ, ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ₹18 ಕೋಟಿ ಅನುದಾನ ನೀಡಿದ್ದರು, ಇದೀಗ ₹10 ಕೋಟಿ ಬಿಡುಗಡೆಯಾಗಿದ್ದು, ಅಪೆಂಡಿಕ್ಸ್ ಯೋಜನೆಯಡಿ ₹4 ಕೋಟಿ ನೀಡಲಾಗಿದ್ದು ಒಟ್ಟು ₹32.85 ಕೋಟಿ ಕಾಮಗಾರಿಯಾಗಲಿದೆ ಎಂದು ವಿವರಿಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಶ್ರೀಧರ, ಸಹಾಯಕ ಎಂಜಿನೀಯರ್ ಸುನೀಲ ಕುಮಾರ, ವಿನಾಯಕ, ಜಿ.ತಮ್ಮಣ್ಣ, ರಾಜೇಶ್ವರರೆಡ್ಡಿ, ಜ್ಞಾನೇಶ್ವರರೆಡ್ಡಿ, ಮಲ್ಲಿಕಾರ್ಜುನ ಅರುಣಿ, ಅಜಯರೆಡ್ಡಿ ಯಲ್ಹೇರಿ, ವೆಂಕಟೇಶ ನಂದೇಪಲ್ಲಿ ಸೇರಿದಂತೆ ಪ್ರಮುಖರು ಇದ್ದರು.ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು. ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ. ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಲಾಗಿದೆ. ಗುರುಮಠಕಲ್ ತಾಲೂಕಿಗೆ ಪ್ರತ್ಯೇಕ ಬಿಇಓ ಕಚೇರಿ ಆರಂಭಿಸಲು ಸಚಿವರು ಸ್ಪಂದಿಸಿದ್ದಾರೆ. ಕೆಕೆಆರ್‌ಡಿಬಿಯಿಂದ ಮೂಲಸೌಕರ್ಯ ಒದಗಿಸಲು ನಿರ್ಣಯಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿಯೇ 3500 ಶಿಕ್ಷಕರ ಕೊರತೆಯಿದೆ. 800 ಪಿಯು ಉಪನ್ಯಾಸಕರ ನಿಯೋಜನೆಗೆ ಸಚಿವರು ಭರವಸೆ ನೀಡಿದ್ದಾರೆ. ಅಕ್ಷರ ಆವಿಷ್ಕಾರ ಯೋಜನೆಯಡಿ ವಾರ್ಷಿಕ 50 ಶಾಲೆಗಳಿಗೆ ಸಕಲ ಸೌಕರ್ಯ ಕಲ್ಪಿಸಲಾಗುತ್ತಿದೆ, 5 ವರ್ಷಗಳಲ್ಲಿ 250 ಶಾಲೆಗಳಿಗೆ ಸೌಕರ್ಯ ಕಲ್ಪಿಸಲು ಗುರಿ ಹೊಂದಲಾಗಿದೆ.
ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್.