ದಾಬಸ್‍ಪೇಟೆ: ಗ್ಯಾರಂಟಿ ಯೋಜನೆಗಳ ಜತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎನ್ನಲು ನೆಲಮಂಗಲ ಕ್ಷೇತ್ರಕ್ಕೆ 1500 ಕೋಟಿ ರು. ಅನುದಾನ ನೀಡಿರುವುದೇ ಸಾಕ್ಷಿ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ವಿವಿಧ ಹಳ್ಳಿಗಳಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ನೇರವಾಗಿ ಯೋಜನೆಗಳನ್ನು ತಲುಪಿಸುವ ಮೂಲಕ ಸರ್ಕಾರ 3 ವರ್ಷಗಳನ್ನು ಪೂರೈಸಿರುವುದು ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ನಮ್ಮ ಕ್ಷೇತ್ರಕ್ಕೆ 450 ಕೋಟಿಗೂ ಹೆಚ್ಚು ಹಣ ಜನರಿಗೆ ನೇರವಾಗಿ ಸಂದಾಯವಾಗಿದೆ. ಅದರ ಜತೆ 1500 ಕೋಟಿ ರು. ಅನುದಾನ ನೀಡಿದ್ದು ಇಲಾಖೆಗಳಿಂದ ಕೆಲಸ ಕಾರ್ಯಗಳು ವೇಗವಾಗಿ ನಡೆಯುತ್ತಿದೆ. ಮಹಿಳೆಯರನ್ನು ರಂಗೋಲಿ ನೆಪದಲ್ಲಿ ಭೇಟಿ ಮಾಡಿ ಅವರ ಕಷ್ಟ ಸುಖಗಳನ್ನು ಕೇಳುವ, ಪರಿಹಾರ ಕಲ್ಪಿಸುವ ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ ಎಂದರು.ಈ ಸಂದರ್ಭದಲ್ಲಿ ಎನ್‍ಪಿಎ ಅಧ್ಯಕ್ಷ ಎಂ.ಕೆ. ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‍ಗೌಡ, ಶ್ರೀನಿವಾಸಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ಹರೀಶ್‍ಬಾಬು, ನಟರಾಜು, ಸವಿತಾವೆಂಕಟೇಶ್, ಗೋವಿಂದರಾಜು, ಮುಖಂಡರಾದ ಬೆಟ್ಟಸ್ವಾಮಿ, ಸುನೀಲ್, ಮಾರೇಗೌಡ, ಕೃಷ್ಣಪ್ಪ, ಮಹದೇವ್, ಶಿವಣ್ಣ, ಮುನಿರಾಜು, ನಾರಾಯಣಸ್ವಾಮಿ, ಸಿಎಂಗೌಡ, ಮಧು, ದೀಪು, ಶೇಖರ್, ಮನು ಇತರರು ಉಪಸ್ಥಿತರಿದ್ದರು.
ಪೋಟೋ 2 :ನೆಲಮಂಗಲ ತಾಲೂಕಿನಬೈರಸಂದ್ರ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಶಾಸಕ ಎನ್.ಶ್ರೀನಿವಾಸ್ ಬಹುಮಾನ ವಿತರಣೆ ಮಾಡಿದರು. ಎನ್‍ಪಿಎ ಅಧ್ಯಕ್ಷ ಎಂ.ಕೆ. ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‍ಗೌಡ ಇತರರಿದ್ದರು.