ಖಾಸಗಿ ಬಸ್ ಪಲ್ಟಿ: 25 ಪ್ರಯಾಣಿಕರಿಗೆ ಗಾಯ
KannadaprabhaNewsNetwork | Published : Oct 28 2023, 01:15 AM IST / Updated: Oct 28 2023, 01:16 AM IST
ಖಾಸಗಿ ಬಸ್ ಪಲ್ಟಿ: 25 ಪ್ರಯಾಣಿಕರಿಗೆ ಗಾಯ
ಸಾರಾಂಶ
18 ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ 7 ಪ್ರಯಾಣಿಕರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ
ಆನಂದಪುರ: ಗೋಕರ್ಣದಿಂದ ಗುರುವಾರ ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಆನಂದಪುರ ಸಮೀಪ ಪಲ್ಟಿಯಾಗಿ ಹಲವರಿಗೆ ಗಾಯವಾದ ಘಟನೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದಿದೆ. ಆನಂದಪುರ ಸಮೀಪದ ಐಗಿನ್ ಬೈಲ್ ಕ್ರಾಸ್‌ನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಪಲ್ಟಿಯಾದ ಪರಿಣಾಮ ಬಸ್‌ನಲ್ಲಿದ್ದ 40 ಪ್ರಯಾಣಿಕರಲ್ಲಿ 25 ಮಂದಿಗೆ ಗಾಯವಾಗಿದೆ. 18 ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ 7 ಪ್ರಯಾಣಿಕರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳಿಸಲಾಯಿತು. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬಸ್‌ನಲ್ಲಿದ್ದ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ವಿಷಯ ತಿಳಿಯುತ್ತಿದ್ದಂತೆ ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದರು. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - - - -27ಎಎನ್‌ಪಿ1: