ಕೋಲಾರ ಬಂದ್‌ಗೆ ಬೆಂಬಲಿಸಲು ದಲಿತಪರ ಸಂಘಟನೆಗಳ ಮನವಿ

| Published : Oct 17 2025, 01:00 AM IST

ಸಾರಾಂಶ

ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಗವಾಯಿ ಮೇಲೆ ಶೂ ಎಸೆದಿರುವ ರಾಕೇಶ್‌ನನ್ನು ತಕ್ಷಣ ಕಾನೂನು ಕ್ರಮಕ್ಕೆ ಒಪ್ಪಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆ ಎತ್ತಿ ಹಿಡಿಯಬೇಕು, ಆದ್ದರಿಂದ ನ್ಯಾಯಾಂಗವನ್ನು ಗೌರವಿಸುವ ಪ್ರತಿಯೊಬ್ಬರೂ ೧೭ರಂದು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಬೇತಮಂಗಲ: ದೇಶದ ಸರ್ವೋಚ್ಚ ನ್ಯಾಯಾಲಯದ ಪೀಠಾಧಿಪತಿ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಅ.೧೭ರಂದು ಸ್ವಯಂ ಪ್ರೇರಿತರಾಗಿ ಕೋಲಾರ ಜಿಲ್ಲಾ ಬಂದ್‌ಗೆ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆ ಕೆಜಿಎಫ್ ತಾಲೂಕಿನಲ್ಲಿ ಬಂದ್‌ಗೆ ಬೆಂಬಲಿಸಲು ಕೋರಿದರು.

ಬೇತಮಂಗಲದ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆ ಮುಂದೆ ಕೆಜಿಎಫ್ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಗವಾಯಿ ಮೇಲೆ ಶೂ ಎಸೆದಿರುವ ರಾಕೇಶ್‌ನನ್ನು ತಕ್ಷಣ ಕಾನೂನು ಕ್ರಮಕ್ಕೆ ಒಪ್ಪಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆ ಎತ್ತಿ ಹಿಡಿಯಬೇಕು, ಆದ್ದರಿಂದ ನ್ಯಾಯಾಂಗವನ್ನು ಗೌರವಿಸುವ ಪ್ರತಿಯೊಬ್ಬರೂ ೧೭ರಂದು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ದಲಿತಪರ ಸಂಘಟನೆಗಳ ಮುಖಂಡರಾದ ಶ್ರೀನಾಥ್ ನಾಸ್ತಿಕ್, ತಂಬರ್ಲ್ಲಹಳ್ಳಿ ಎಂ.ರಾಮಪ್ಪ, ಕಾರಿನ ರಾಧಾಕೃಷ್ಣ, ಬಡಮಾಕನಹಳ್ಳಿ ಕೆಂಚಣ್ಣ, ಸುಬ್ಬರಾಯಪ್ಪ, ಲಕ್ಷ್ಮಪ್ಪ, ಸುಬ್ರಮಣಿ, ಗೋವಿಂದಪ್ಪ, ಲಕ್ಷ್ಮಪ್ಪ, ರಾಮ ಪ್ರಸನ್ನ, ಯಲ್ಲಮ್ಮ, ಚಂದ್ರಯ್ಯ, ಹರೀಶ್ ಇದ್ದರು.