ಕೋಚಿಮುಲ್ ವಿಭಜನೆಯಾಗಿ ಚಿಮೂಲ್ ರಚನೆಯಾಗಿದ್ದು ಚಿಮೂಲ್ ಅಧ್ಯಕ್ಷ ಮಂಜುನಾಥರೆಡ್ಡಿರ ದೂರದೃಷ್ಟಿ, ಸಂಘವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಸಾಕಷ್ಟು ಶ್ರಮಿಸುತ್ತಿದ್ದಾರೆ.
ಚಿಂತಾಮಣಿ: ಹಾಲಿನ ಗುಣಮಟ್ಟದಿಂದ ರೈತರ ಆದಾಯ ಹೆಚ್ಚಾಗುತ್ತದೆ. ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಹಾಗೂ ಹಾಲಿನಲ್ಲಿನ ಗೊಬ್ಬಿನಾಂಶ ಆಧಾರದ ಮೇಲೆ ಹಾಲಿದ ದರ ನಿರ್ಧಾರವಾಗುತ್ತದೆಂದು ಚಿಮೂಲ್ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು ನುಡಿದರು.
ತಾಲೂಕಿನ ಕಸಬಾ ಕ್ಷೇತ್ರ ವ್ಯಾಪ್ತಿಯ ಮುರುಗಮಲ್ಲ ಹೋಬಳಿಯ ಹಾಲು ಉತ್ಪಾದಕರ ಸಂಘಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಚಿಮುಲ್ ವಿಭಜನೆಯಾಗಿ ಚಿಮೂಲ್ ರಚನೆಯಾಗಿದ್ದು ಚಿಮೂಲ್ ಅಧ್ಯಕ್ಷ ಮಂಜುನಾಥರೆಡ್ಡಿರ ದೂರದೃಷ್ಟಿ, ಸಂಘವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಸರ್ಕಾರದ ವತಿಯಿಂದ 2 ರು. ಪ್ರೋತ್ಸಾಹಧನವನ್ನು ಒದಗಿಸಲು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.ಚಿಮೂಲ್ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಹಾಲು ಮತ್ತು ರೇಷ್ಮೆಗೆ ಹೆಸರುವಾಗಿಯಾಗಿರುವ ಅವಿಭಜಿತ ಜಿಲ್ಲೆಯೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಾಗಿದೆ. ಹಾಲಿನ ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಈ ಒಕ್ಕೂಟಕ್ಕೂ ಲಾಭದಾಯಕ ಹಾಗೂ ಹಾಲು ಉತ್ಪಾದಕರಿಗೆ ಲಾಭದಾಯಕವಾಗಿರುತ್ತದೆ ಎಂದರು.
ಮಹಿಳಾ ಚಿಮೂಲ್ ನಿರ್ದೇಶಕಿ ಸುಮಾ ರವಿಚಂದ್ರರೆಡ್ಡಿ ವ್ಯವಸ್ಥಾಪಕ ನಿರ್ದೇಶಕ ಎನ್ ನಾಗೇಶ್, ವ್ಯವಸ್ಥಾಪಕ ಎ. ಮಂಜುನಾಥ್ ಮಾತನಾಡಿದರು. ಪರಿಶೀಲನಾ ಸಭೆಯಲ್ಲಿ ಮೃತಪಟ್ಟ ರಾಸುಗಳ ಫಲಾನುಭವಿಗಳಿಗೆ 7.5 ಲಕ್ಷ ಮೌಲ್ಯದ ಹಣವನ್ನು ಚೆಕ್ ಒದಗಿಸಲಾಯಿತು, ಬಿಎಂಸಿ ಕಟ್ಟಡ ಕಾಮಗಾರಿಗೆ 1ಲಕ್ಷ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಡಿಎಂ. ಡಾ. ಪಿ.ಬಿ.ರಾಜು, ಬಿಎಂಸಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ರೈತಾಪಿ ವರ್ಗದವರು, ಹಾಲು ಉತ್ಪಾದಕರು ಇದ್ದರು.
ಚಿತ್ರಶೀರ್ಷಿಕೆ: ತಾಲೂಕಿನ ಕಸಬಾ ಕ್ಷೇತ್ರ ವ್ಯಾಪ್ತಿಯ ಮುರುಗಮಲ್ಲ ಹೋಬಳಿಯ ಹಾಲು ಉತ್ಪಾದಕರ ಸಂಘಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.