ನಾಟಕ ಅಕಾಡೆಮಿ ಪ್ರಶಸ್ತಿಗೆ ಅಧ್ಯಾಪಕ ದ್ಯಾಮೇಶ್ ಭಾಜನ

| Published : Aug 09 2024, 12:36 AM IST / Updated: Aug 09 2024, 12:37 AM IST

ಸಾರಾಂಶ

Professor Damesh Bhajan for Natak Akademi Award

ಹೊಸದುರ್ಗ:2024-25ನೇ ಸಾಲಿನ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಅಧ್ಯಾಪಕ, ರಂಗಕರ್ಮಿ ಹೆಚ್ ಎಸ್ ದ್ಯಾಮೇಶ್ ಭಾಜನರಾಗಿದ್ದಾರೆ. ಶ್ರೀಯುತರು ಕಳೆದ ಮೂರು ದಶಕಗಳಿಂದ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ, ಶಿವಸಂಚಾರ, ಭಾರತ ಸಂಚಾರ, ಶಿವದೇಶ ಸಂಚಾರ, ವಚನ ಸಂಚಾರ, ರಂಗಪ್ರಯೋಗಶಾಲೆ ಸೇರಿದಂತೆ ವಿವಿಧ ರಂಗ ಸಂಸ್ಥೆಗಳೊಂದಿಗೆ ಸಂಚಾಲಕರಾಗಿ, ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ಲೇಖಕರಾಗಿ, ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಎಲೆಮರೆಯ ಕಾಯಂತೆ ಕೆಲಸ ಮಾಡುತ್ತಿರುವ ದ್ಯಾಮೇಶ್ ಅವರನ್ನು ಗುರುತಿಸಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತೋಷ ತಂದಿದ್ದು ಅವರು ಪ್ರಶಸ್ತಿಗೆ ಭಾಜನ ರಾಗಿರುವುದಕ್ಕೆ ಪಂಡಿತಾರಾಧ್ಯ ಸ್ವಾಮೀಜಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.

--------ಫೋಟೋ: 8hsd1: ದ್ಯಾಮೇಶ್