ಶ್ರೀ ರೇವಣಸಿದ್ದೇಶ್ವರ ಸಹಕಾರ ಸಂಘಕ್ಕೆ ₹ 26.73 ಲಕ್ಷ ಲಾಭ

| Published : Sep 29 2024, 01:35 AM IST

ಸಾರಾಂಶ

ತರೀಕೆರೆಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 15.14 ಲಕ್ಷ ಕೋಟಿ ವ್ಯವಹಾರ ನಡೆಸಿ ಸರ್ಕಾರ ನೀಡಬೇಕಿದ್ದ ಬಾಕಿ ₹26.73 ಲಕ್ಷ ಲಾಭಗಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ತಿಳಿಸಿದ್ದಾರೆ.

ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಟಿ.ಎಸ್.ಪ್ರಕಾಶ್ ವರ್ಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 15.14 ಲಕ್ಷ ಕೋಟಿ ವ್ಯವಹಾರ ನಡೆಸಿ ಸರ್ಕಾರ ನೀಡಬೇಕಿದ್ದ ಬಾಕಿ ₹26.73 ಲಕ್ಷ ಲಾಭಗಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ತಿಳಿಸಿದ್ದಾರೆ.2023-24ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ ಪ್ರಸಕ್ತ ಸಾಲಿನಲ್ಲಿ 634 ಜನರಿಗೆ ₹ 9.75 ಕೋಟಿ ಕೆಸಿಸಿ ಬೆಳೆ ಸಾಲ ವಿತರಿಸಿದ್ದು ನಮ್ಮ ಸಂಘದಲ್ಲಿ ದುಡಿಯುವ ಬಂಡವಾಳ 12.32 ಕೋಟಿ ಇದೆ. ಈವರೆಗೂ ಸಂಘದ ಅಡಳಿತದಲ್ಲಿ ₹ 15.14 ಕೋಟಿ ವ್ಯವಹಾರ ನಡೆಸಲಾಗಿದೆ. ನಮ್ಮ ಸಂಘದಲ್ಲಿ ಒಟ್ಟು 2984 ಜನ ಸದಸ್ಯರಿಂದ ₹1.20 ಕೋಟಿ ಷೇರು ಇದ್ದು ವ್ಯಾಪಾರ ಸಾಲವಾಗಿ ₹52 ಲಕ್ಷ, ಬಂಗಾರದ ಅಡಮಾನ ಸಾಲವಾಗಿ ₹85 ಲಕ್ಷ , ವಾಹನ ಸಾಲ ₹ 3.5 ಲಕ್ಷ, ಅಡಕೆ ದಾಸ್ತಾನು ಸಾಲ ₹10.3 ಕೋಟಿ ನೀಡಲಾಗಿದೆ ಎಂದು ತಿಳಿಸಿದರು. ಸಹಕಾರಿ ಕ್ಷೇತ್ರದಲ್ಲಿ ಎಲ್ಲ ಸಹಕಾರಿ ಬಂಧುಗಳು ಸರ್ವ ಸದಸ್ಯರ ಮಹಾಸಭೆಯಲ್ಲಿ ಭಾಗವಹಿಸಿ ಸಲಹೆ ಸಹಕಾರ ಮಾರ್ಗದರ್ಶನದೊಂದಿಗೆ ತಮ್ಮ ಹಕ್ಕನ್ನು ಪ್ರತಿಪಾದಿಸುವ ಸಲುವಾಗಿ ಪ್ರತಿಯೊಬ್ಬ ಸದಸ್ಯರು ಭಾಗವಹಿಸಲೆಂದು ಈ ಬಾರಿ ಭಾಗವಹಿಸಿದವರಿಗೆ ಬಹುಮಾನ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಸಂಖ್ಯೆ ಹೊಂದಿರುವ ಚೀಟಿಯನ್ನು ನೀಡಿ ಸಭೆ ಕೊನೆಯಲ್ಲಿ ಲಾಟರಿ ಎತ್ತುವುದರ ಮುಖಾಂತರ ಮೂವರು ಸದಸ್ಯರಿಗೆ ಸನ್ಮಾನ, ನೆನಪಿನ ಕಾಣಿಕೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಂಘದ ಉಪಾದ್ಯಕ್ಷ ಪರಶುರಾಮ್ ಎಚ್.ಎಂ. ನರೇಂದ್ರ, ಟಿ.ಎಸ್.ರಾಮಚಂದ್ರಪ್ಪ, ಟಿ.ಜಿ.ಸುರೇಶ್, ಟಿ.ವಿ.ಗಿರಿರಾಜ್, ಎಂ.ರಮೇಶ್, ಟಿ.ಆರ್.ಈಶ್ವರ್, ಟಿ.ಜಿ.ಮಂಜುನಾಥ್, ಕಲಾವತಿ ಸೋಮಶೇಖರ್, ರೇಣುಕಮ್ಮ, ಮೇಲ್ವಿಚಾರಕರಾದ ವೆಂಕಟೇಶ್ ಎಸ್. ಸಿಇಒಎಂ ಎಸ್.ಮೋಹನರಾಜ್ ಮತ್ತು ನೌಕರರು ಭಾಗವಹಿಸಿದ್ದರು.

27ಕೆಟಿಆರ್.ಕೆ.12ಃ

ತರೀಕೆರೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ವಹಿಸಿ ಮಾತನಾಡಿದರು.