ಬಿಜೆಪಿಯಿಂದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಪುಣ್ಯ ಸ್ಮರಣೆ

| Published : Jun 24 2024, 01:38 AM IST

ಬಿಜೆಪಿಯಿಂದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಪುಣ್ಯ ಸ್ಮರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನಿನ ಚೌಕಟ್ಟಿನಲ್ಲಿ ದೇಶ ಒಗ್ಗೂಡಿಸಲು, ಎಲ್ಲರೂ ಸ್ವಾವಲಂಬಿಗಳಾಗಿ ಜೀವನ ರೂಪಿಸಿಲೊಳ್ಳಲು ಹಗಲಿರುಳು ಹೋರಾಟ ಮಾಡಿದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಭಾನುವಾರ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಜರುಗಿತು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್‌. ಮಹದೇವಸ್ವಾಮಿ ಅವರು ಶ್ಯಾಮ್‌ಪ್ರಕಾಶ್‌ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಗಿಡನೆಡುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಬಿಜೆಪಿಗೆ ಮುಖರ್ಜಿ ಅವರ ಕೊಡುಗೆ ಅಪಾರ. ಸದಾ ರಾಷ್ಟ್ರದ ಚಿಂತನೆ, ಕಾನೂನಿನ ಚೌಕಟ್ಟಿನಲ್ಲಿ ದೇಶ ಒಗ್ಗೂಡಿಸಲು, ಎಲ್ಲರೂ ಸ್ವಾವಲಂಬಿಗಳಾಗಿ ಜೀವನ ರೂಪಿಸಿಲೊಳ್ಳಲು ಹಗಲಿರುಳು ಹೋರಾಟ ಮಾಡಿದರು. ನಮ್ಮ ಜನಸಂಘದ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು,1901 ರಂದು ಕೊಲ್ಕತ್ತಾ ದಲ್ಲಿ ಜನಿಸಿ 1906ರಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನ ಪ್ರಾರಂಭಿಸಿ 1914ರಲ್ಲಿ‌ಇಚಿಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1921 ರಲ್ಲಿ ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಬಿಎ ವ್ಯಾಸಂಗವನ್ನು ಮುಗಿಸಿದ್ದರು. 1926 ರಲ್ಲಿ ಇಂಗ್ಲೆಂಡ್ ನಲ್ಲಿ ಬ್ಯಾರಿಸ್ಟರ್ ಪದವಿ,ಇಂ ಗ್ಲೆಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಮ್ಮೇಳನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. 1927ರಲ್ಲಿ ಇಂಗ್ಲೆಂಡ್ ನ ಬಾರ್ ಕೌನ್ಸಿಲ್ ನ ಸದಸ್ಯತ್ವ,1929ರಲ್ಲಿ ಮೊದಲ ಬಾರಿಗೆ ಬಂಗಾಳ ವಿಧಾನ ಪರಿಷತ್ತಿಗೆ ಆಯ್ಕೆ,1934ರಲ್ಲಿ ತಮ್ಮ 33ನೇ ವಯಸ್ಸಿಗೆ ಕೊಲ್ಕತ್ತಾ ವಿಶ್ವವಿದ್ಯಾಲಯದ ಕಿರಿಯ ವಯಸ್ಸಿನ ಉಪಕುಲಪತಿಗಳಾಗಿ ನೇಮಕ, ವಿಶ್ವದ ಇತಿಹಾಸದಲ್ಲೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಉಪಕುಲಪತಿಗಳಾಗಿ ಆಯ್ಕೆ, ತಮ್ಮ ಜವಾಬ್ದಾರಿಯ ದಿನಗಳಲ್ಲಿ ಈ ವಿಶ್ವವಿದ್ಯಾಲಯವನ್ನು‌ಶೀಘ್ರ ಮೇಲ್ದರ್ಜೆಗೆ ಏರಿಸಿ ವಿಶ್ವವಿದ್ಯಾಲಯಕ್ಕೆ ಉತ್ತಮ ಹೆಸರು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಗಳಿಗೆ ಹೆಚ್ಚು ಮನ್ನಣೆ ಕೊಡಬೇಕೆಂಬ ಪ್ರತಿಪಾದನೆ. ಆ ಸಂಧರ್ಭದಲ್ಲಿ ಬ್ರಿಟಿಷ್ ಸರಕಾರದ ವಿರೋಧಗಳನ್ನು ಮೆಟ್ಟಿ ನಿಂತು ಹೋರಾಟ, ಇವುಗಳೆಲ್ಲವೂ ಕೂಡ ಅವರ ಮುಂದಿನ ನಿಲುಗಳಿಗೆ ಮತ್ತು ಹೋರಾಟಕ್ಕೆ ಮಾರ್ಗಸೂಚಿಯಾಯಿತು. 1940ರ ವೇಳೆಯಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಕಾರ್ಯಧ್ಯಕ್ಷರಾಗಿ ನೇಮಕವಾದರು. ನಂತರ 1944ರವರೆಗೆ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬ್ರಿಟಿಷ್ ಸರ್ಕಾರ ಹಿಂದೂ ಭಾರತೀಯರನ್ನು ಹಿಂಸಿಸುತ್ತಿರುವ ಸಂದರ್ಭದಲ್ಲಿ ಅಹೋರಾತ್ರಿ ಅವರ ವಿರುದ್ದ ಹೋರಾಟ, ಬಲಿದಾನಗಳಲ್ಲಿ ತಮ್ಮ ಜೀವನವನ್ನು ಪಣಕ್ಕಿಟ್ಟು ಹೋರಾಟ ನಡೆಸಿದರು.

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದ ಸಮಯದಲ್ಲಿ, ಸ್ವತಂತ್ರ ಭಾರತದ ಮೊದಲ ಸರ್ಕಾರದಲ್ಲಿ ಶ್ಯಾಮ್ ಪ್ರಸಾದ್ ಮುಕರ್ಜಿ ಅವರು ದೇಶದ ಮೊದಲ‌ಕೈಗಾರಿಕಾ ಮತ್ತು ಪೂರೈಕೆಯ ಸಚಿವ,1949ರಲ್ಲಿ ನಡೆದ ಬ್ರಿಟೀಷರ ಭೀಕರ ಹಿಂಸೆಯಲ್ಲಿ ಮಹಾತ್ಮ ಗಾಂಧೀಜಿ ಹತ್ಯೆ, ಇದನ್ನರಿತ ಮುಖರ್ಜಿ ರವರು ಹಿಂದೂ ಮಹಾಸಭಾಗೆ ರಾಜೀನಾಮೆ ನೀಡಿ ಹೊರಬಂದರು. ನಂತರದ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸಂಘದ ಸಂಪರ್ಕ ಭಾರತದ ಭವಿಷ್ಯಕ್ಕೆ ಮಾರಕವಾದ ನೆಹರೂ ಸರ್ಕರಾದ ಸರ್ವಾಧಿಕಾರ ಮತ್ತು ತುಷ್ಟೀಕರಣದ ರಾಜಕೀಯ ನಿಲುವುಗಳನ್ನು ಹತ್ತಿಕ್ಕಲು ಹೊಸದೊಂದು ರಾಜಕೀಯ ಪಕ್ಷದ ರಚನೆಯ ಚಿಂತಿಸಿ, ಆಗಿನ‌ಸಂಘದ ಸ್ವಯಂಸೇವಕರಾಗಿದ್ದ ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಸುಂದರ್ ಸಿಂಗ್, ಭಂಡಾರಿ, ಜಗನ್ನಾಥ ರಾವ್ ಜೋಶಿ ಮೊದಲಾದವರೊಡನೆ ಹೊಸ ಪಕ್ಷದ ರಚನೆಯ ಕಾರ್ಯದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದ್ದರು.

ನಂತರ 1951ರಲ್ಲಿ ಜನಸಂಘ ಸ್ಥಾಪಿಸಿ, ಈ ವೇಳೆ ಭಾರತೀಯ ಸಾಂಸ್ಕೃತಿಕ ಚಿಂತನೆ ಭವಿಷ್ಯದ ದೃಷ್ಟಿಯಿಂದ ಜನಸಂಘ ಸ್ಥಾಪಿಸಿ ಸೆ. 7 ರಂದು ಚುನಾವಣ ಆಯೋಗದಿಂದ ಅನುಮತಿ ಪಡೆದು ದೀಪದ ಚಿಹ್ನೆಯನ್ನು ತಮ್ಮ ಪಕ್ಷದ ಚಿಹ್ನೆಯಾಗಿ ಆಯ್ಕೆ ಮಾಡಿದರು.

ಬಳಿಕ ದೆಹಲಿಯಲ್ಲಿ ನಡೆದ ಭಾರತೀಯ ಜನಸಂಘದ ಅಖಿಲ ಭಾರತೀಯ ಮಟ್ಟದ ಸಭೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾಗಿ ಅವರು ತಿಳಿಸಿದರು.

1952 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಇವರೂ ಸೇರಿದಂತೆ ಇನ್ನೂ ಎರಡು ಸ್ಥಾನಗಳಲ್ಲಿ ಜನಸಂಘ ಗೆಲ್ಲುತ್ತದೆ. ಆಗ ಮುಖರ್ಜಿ ಅವರು ತಮ್ಮ ನಿರಂತರವಾಗಿ ಅಧಿವೇಶನಗಳಲ್ಲಿ‌ನೆಹರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರಹು. ನೆಹರೂ ಸರ್ಕಾರ ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸುತ್ತಿದ್ದ ಹಿನ್ನೆಲೆ ಆ ಎಡವಟ್ಟಿನ ನಿರ್ಧಾರಗಳನ್ನು ಅಧಿವೇಶನದಲ್ಲಿ ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದರು. 1953ರ ವೇಳೆಗೆ ಶ್ಯಾಮಪ್ರಸಾದ ಮುಖರ್ಜಿ ಅವರ ಅನುಮಾನಾಸ್ಪದ ಸಾವಾಗುತ್ತದೆ. ಆ ವೇಳೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಭಾರತೀಯರ ಮೇಲಿನ ಹಿಂಸಾಚಾರವನ್ನು ವಿರೋಧಿಸಿ ಜನಸಂಘವು ತೀವ್ರವಾಗಿ ದೇಶವ್ಯಾಪ್ತಿ ಹೋರಾಟಗಳನ್ನು ಮಾಡುತ್ತದೆ ಎಂದರು.

ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್ ನಹೀ ಚಲೇಂಗೆ ನಹಿ ಚಲೇಂಗೆ ಎಂಬ ಶ್ಯಾಮಪ್ರಸಾದ್ ಮುಖರ್ಜಿ ಅವರ ಪ್ರಸಿದ್ದ ಘೋಷಣೆಯೊಂದಿಗೆ ದೇಶವ್ಯಾಪಿ ಆಂದೋಲನ ಶುರುವಾಗುತ್ತದೆ. ಇದೆಲ್ಲದರ ಮುಂದಿನ ಭಾರತ ಭವಿಷ್ಯ ಕಂಡಿದ್ದರಲ್ಲಿ ಅನುಮಾನವಿಲ್ಲ. ಬಲಿಷ್ಠ ಭಾರತ ಕಟ್ಟಲು ಅವರೆಲ್ಲರೂ ಹಾಕಿಕೊಟ್ಟ ಅಡಿಪಾಯವೇ ನಮ್ಮೆಲ್ಲರಿಗೂ ಶ್ರೀರಕ್ಷೆ ಎಂದು ಅವರು ಹೇಳಿದರು.

ನಂಜನಗೂಡು ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗನಾಯಕ, ಕಾರ್ಯದರ್ಶಿ ಬಸವಣ್ಣ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಂದಿನಿ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಾಲಚಂದ್ರು, ನಂಜನಗೂಡು ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಸಿದ್ದರಾಜು, ನಗರಸಭಾ ಸದಸ್ಯರಾದ ಮಹೇಶ್ ಅತ್ತಿಖಾನೆ ಮೊದಲಾದವರು ಇದ್ದರು.