ಮೈಸೂರು : ಗಾಂಧಿ, ಪರಮಹಂಸರ ಪ್ರತಿಮೆ ಸ್ವಚ್ಛತೆಗೊಳಿಸಿ, ಸ್ವಾತಂತ್ರ್ಯ ದಿನಾಚರಣೆ

| Published : Aug 15 2024, 02:04 AM IST / Updated: Aug 15 2024, 11:05 AM IST

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬಿಜೆಪಿಯಿಂದ ದೇಶಾದ್ಯಂತ ಮಹನೀಯರ ಪ್ರತಿಮೆಗಳನ್ನು ಶುಚಿಗೊಳಿಸುವ ಕಾರ್ಯಕ್ರಮ

 ಮೈಸೂರು :  ನಗರದ ನ್ಯಾಯಾಲಯದ ಮುಂಭಾಗ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ಥಳಿ ಹಾಗೂ ಪ್ರತಿಮೆಯನ್ನು ಬಿಜೆಪಿ ನಗರ ಯುವ ಮೋರ್ಚಾದವರು ಬುಧವಾರ ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡಿದರು. 

ಮಾಜಿ ಶಾಸಕ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಹಾಗೂ ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಲೋಹಿತ್, ಮೈಸೂರು ನಗರ ಸಹ ವಕ್ತಾರ ದೇವರಾಜು, ಉಪಾಧ್ಯಕ್ಷ ಪುನೀತ್ ಕುಮಾರ್, ಕಾರ್ಯದರ್ಶಿ ಕಿರಣ್ ನಾಯ್ಡು, ಮುಖಂಡರಾದ ಗಿರಿಧರ್, ಕಿಶೋರ್, ಕಾರ್ಯಕಾರಿಣಿ ಸದಸ್ಯರಾದ ಪವನ್, ಚೇತನ್, ಅರುಣ್, ರಂಗಸ್ವಾಮಿ ಶರತ್ ಇದ್ದರು.

ರಾಮಕೃಷ್ಣ ಪರಮಹಂಸರ ಪ್ರತಿಮೆ14ಎಂವೈಎಸ್ 37ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬಿಜೆಪಿಯಿಂದ ದೇಶಾದ್ಯಂತ ಮಹನೀಯರ ಪ್ರತಿಮೆಗಳನ್ನು ಶುಚಿಗೊಳಿಸುವ ಕಾರ್ಯಕ್ರಮಕ್ಕೆ ಕರೆ ನೀಡಿದ ಹಿನ್ನೆಲೆ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ವ್ಯಾಪ್ತಿಯ ರಾಮಕೃಷ್ಣ ಪರಮಹಂಸರ ಪ್ರತಿಮೆಯನ್ನು ಶುಚಿಗೊಳಿಸಿ ಮಾಲಾರ್ಪಣೆ ಮಾಡಲಾಯಿತು.

ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಎಚ್.ಜಿ ರಾಜಮಣಿ, ಬಿ.ಸಿ. ಶಶಿಕಾಂತ್, ಹಿರಿಯಣ್ಣ, ಕಾರ್ಯದರ್ಶಿ ತುಳಸಿ, ಮೋರ್ಚಾ ಮುಖಂಡರಾದ ಚಂದ್ರಶೇಖರ್ ಸ್ವಾಮಿ, ನಾಗರಾಜ್, ಜನ್ನು, ಶುಭಶ್ರೀ, ಮಂಜುಳಾ, ಪುಟ್ಟಮಣಿ, ಗೋಪಾಲ್, ರಾಮಕೃಷ್ಣನಗರ ವಾರ್ಡ್ ಅಧ್ಯಕ್ಷ ಬಸವಣ್ಣ, ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದ ಗೋಪಿನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದರು.