ಸೋಗಾನೆ ಕಾರಾಗೃಹದಲ್ಲಿ ನಿಷೇಧಿತ ವಸ್ತು ಪತ್ತೆ

| Published : Jul 31 2024, 01:05 AM IST

ಸೋಗಾನೆ ಕಾರಾಗೃಹದಲ್ಲಿ ನಿಷೇಧಿತ ವಸ್ತು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರತಾ ಪಡೆ ಕಣ್ಗಾವಲಿದ್ದೂ ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಭಾರೀ ಲೋಪವಾಗಿದ್ದು,ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಸಾಗರ

ನಗರದ ಹೊವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕಪ್ಪು, ಹಸಿರು, ನೀಲಿ ಬಣ್ಣದ ಗಮ್ ಪಟ್ಟಿಯನ್ನು ಸುತ್ತಿರುವ ಅನುಮಾನಾಸ್ಪದವಾದ ವಸ್ತು ಪತ್ತೆಯಾಗಿವೆ. ಜೈಲಿನ ಕುಮದ್ವತಿ ವಿಭಾಗದ ಕೊಠಡಿ ಸಂಖ್ಯೆ 50ರ ಹಿಂಭಾಗದಲ್ಲಿದ್ದು, ಸಿಸಿ ಟಿವಿಯನ್ನು ಪರಿಶೀಲಿಸುವಾಗ ಪತ್ತೆಯಾಗಿದೆ. ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳು ನಿಷೇಧಿತ ವಸ್ತುಗಳು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಕಾರಾಗೃಹಕ್ಕೆ ಕೈಗಾರಿತ ಭದ್ರತಾ ಪಡೆಗಳ ಕಣ್ಗಾವಲಿದ್ದರೂ ಕಾರಾಗೃಹದ ಪರಿಮಿತಿಯ ಒಳಗೆ ನಿಷೇಧಿತ ವಸ್ತು ಪತ್ತೆಯಾದ ಬಗ್ಗೆ ಪ್ರಶ್ನೆ ಮೂಡಿದೆ. ಕಾರಾಗೃಹದ ಗೋಡೆಯ ಒಳಗೆ ಕಪ್ಪು, ಹಸಿರು ಮತ್ತು ನೀಲಿ ಬಣ್ಣದ ಪಟ್ಟಿ ಸುತ್ತಿರುವ 4 ಸಂಖ್ಯೆಯ ಅನುಮಾನಾಸ್ಪದವಾದ ವಸ್ತು ಎಸೆಯಲಾಗಿದೆ. ಈ ರೀತಿ ಮಾಡಿದವರನ್ನ ಪತ್ತೆ ಮಾಡಿ ಕೂಲಂಕುಶವಾಗಿ ತನಿಖೆ ಮಾಡುವಂತೆ ಜೈಲಿನ ಸೂಪರಿಂಟೆಂಡೆಂಟ್‌ರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆದರೆ, ಈ ನಿಷೇಧಿತ ವಸ್ತು ಯಾವುದು ಎಂಬುದರ ಬಗ್ಗೆ ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ. ಹೊರವಲಯದಲ್ಲಿರುವ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನ ಕಪ್ಪು, ಹಸಿರು, ನೀಲಿ ಬಣ್ಣದ ಗಮ್ ಪಟ್ಟಿಯನ್ನು ಸುತ್ತಿರುವ ಅನುಮಾನಾಸ್ಪದವಾದ ವಸ್ತುಗಳು ಜೈಲಿನ ಕುಮಧ್ವತಿ ವಿಭಾಗದ ಕೊಠಡಿ ಸಂಖ್ಯೆ 50ರ ಹಿಂಭಾಗದಲ್ಲಿದ್ದು ಇದು ಸಿಸಿ ಟಿವಿಯನ್ನು ಪರಿಶೀಲಿಸುವಾಗ ಅಲ್ಲಿನ ಸಿಬ್ಬಂದಿಗೆ ಪತ್ತೆಯಾಗಿದೆ.

ಹೊರಗಡೆ ಕೆಎಸ್ಐಎಸ್ ಎಫ್ ಭದ್ರತಾ ಪಡೆಗಳ ಕಣ್ಗಾವಲಿದ್ದರೂ ಕಾರಾಗೃಹದ ಪರಿಮಿತಿಯ ಒಳಗೆ ನುಸುಳಿ ಕಾರಾಗೃಗದ ಒಳಗೆ ನಿಷೇಧಿತ ವಸ್ತುಗಳನ್ನು ಸಾಗಿಸುವ ಉದ್ದೇಶದಿಂದ ಕಾರಾಗೃಹದ ಗೋಡೆಯ ಒಳಗೆ ಕಪ್ಪು, ಹಸಿರು ಮತ್ತು ನೀಲಿ ಬಣ್ಣದ ಪಟ್ಟಿ ಸುತ್ತಿರುವ 4 ಸಂಖ್ಯೆಯ ಅನುಮಾನಾಸ್ಪದವಾದ ವಸ್ತು ಎಸೆಯಲಾಗಿದೆ ಎನ್ನಲಾಗಿದೆ.

ಈ ರೀತಿ ಮಾಡಿದವರನ್ನ ಪತ್ತೆ ಮಾಡಿಕೊಡುವಂತೆ ಮತ್ತು ಕೂಲಂಕಷವಾಗಿ ತನಿಖೆ ಮಾಡುವಂತೆ ಜೈಲಿನ ಸೂಪರಿಂಟೆಂಡೆಂಟ್ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮುರಿದು ಬಿದ್ದ ಮದುವೆ: ಗಾಂಜಾ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ

ಸಾಗರ: ಪಟ್ಟಣದ ಕೆಳದಿ ರಸ್ತೆಯಲ್ಲಿ ಮನೆಯೊಂದರ ಕಾಂಪೋಂಡಿನೊಳಗೆ ಗಾಂಜಾ ಪೊಟ್ಟಣ ಎಸೆದು ಹೋಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ಸಹಾಯಕ ಅಭಿಯಂತರ ಶಾಂತಕುಮಾರಸ್ವಾಮಿ ವಿರುದ್ಧ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಜುಲೈ ೧೪ ರಂದು ಕೆಳದಿ ರಸ್ತೆಯ ವಿದ್ಯಾನಗರ ಲೇಔಟ್‌ನ ಸಿವಿಲ್ ಇಂಜಿನಿಯರ್ ಜಿತೇಂದ್ರ ಎಂಬಾತನಿಂದ ತನ್ನ ವೈಷಮ್ಯ ಕಾರಣಕ್ಕೆ ನಮ್ಮನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರು ನೀಡಿದ್ದರು. ಜು.೧೩ರಂದು ರಾತ್ರಿ ೧೦-೪೦ರ ಸುಮಾರಿಗೆ ತಮ್ಮ ಮನೆಯ ಕಾಂಪೋಂಡಿನೊಳಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾವನ್ನು ಎಸೆದು ಹೋಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಜಿತೇಂದ್ರ ದೂರಿನಲ್ಲಿ ಒತ್ತಾಯಿಸಿದ್ದರು.ಜಿತೇಂದ್ರ ಅವರು ಸಿ.ಸಿ.ಕ್ಯಾಮರಾ ಕ್ಲಿಪ್ಪಿಂಗ್ ಪರಿಶೀಲನೆ ನಡೆಸಿದಾಗ ಯಾರೋ ಕಪ್ಪು ಪೊಟ್ಟಣ ಎಸೆದು ಹೋಗಿರುವುದು ಪತ್ತೆಯಾಗಿದೆ. ಅದು ಬಿಡಿಸಿ ನೋಡಿದಾಗ ಗಾಂಜಾ ಎನ್ನುವುದು ಪತ್ತೆಯಾಗಿತ್ತು. ತಮಗೆ ಸಿಕ್ಕಿರುವ ಗಾಂಜಾ ಪೊಟ್ಟಣವನ್ನು ಜಿತೇಂದ್ರ ಪೊಲೀಸರಿಗೆ ಒಪ್ಪಿಸಿದ್ದರು.

ತಮ್ಮ ಮಾವನ ಮಗಳು ಪಲ್ಲವಿ ಮತ್ತು ಶಾಂತಕುಮಾರಸ್ವಾಮಿ ಅವರ ಮದುವೆ ವಿಷಯದಲ್ಲಿ ಹೊಂದಾಣಿಕೆ ಆಗದೆ ಮದುವೆ ಮುರಿದು ಬಿದ್ದಿತ್ತು. ಶಾಂತ ಕುಮಾರಸ್ವಾಮಿ ಈ ದ್ವೇಷದಿಂದಲೇ ತಮ್ಮ ಮೇಲೆ ಗಾಂಜಾ ಕೇಸ್ ಹಾಕಿಸಲು ಯಾರೋ ವ್ಯಕ್ತಿಯನ್ನು ಕಳಿಸಿ ಕಾಂಪೋಂಡಿನೊಳಗೆ ಗಾಂಜಾ ಎಸೆದು ಹೋಗುವಂತೆ ಮಾಡಿದ್ದಾರೆ ಎಂದು ಜೀತೇಂದ್ರ ದೂರಿದ್ದಾರೆ.ದೂರಿನ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಂಜಾ ಎಸೆದು ಹೋದ ಸನಾವುಲ್ಲಾ, ಪ್ರೇರಣೆ ನೀಡಿದ ಶಾಂತಕುಮಾರಸ್ವಾಮಿ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.