ಬೇಡಿಕೆ ಈಡೇರಿಕೆ ಭರವಸೆ: ಧರಣಿ ಅಂತ್ಯ

| Published : Sep 26 2024, 11:40 AM IST

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಮುಖ ಬೇಡಿಕೆ ಈಡೇರಿಸಲಾಗುವುದು ಎಂದು ತಹಸೀಲ್ದಾರ್ ಎಚ್.ಪ್ರಾಣೇಶ ಭರವಸೆ ನೀಡಿದ ಹಿನ್ನೆಲೆ ರೈತ ಸಂಘದವರು ಅನಿರ್ದಿಷ್ಟಾವಧಿ ಧರಣಿ ಹಿಂಪಡೆದರು.

ಕನ್ನಡಪ್ರಭ ವಾರ್ತೆ ಕುಕನೂರು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಮುಖ ಬೇಡಿಕೆ ಈಡೇರಿಸಲಾಗುವುದು ಎಂದು ತಹಸೀಲ್ದಾರ್ ಎಚ್.ಪ್ರಾಣೇಶ ಭರವಸೆ ನೀಡಿದ ಹಿನ್ನೆಲೆ ರೈತ ಸಂಘದವರು ಅನಿರ್ದಿಷ್ಟಾವಧಿ ಧರಣಿ ಹಿಂಪಡೆದರು.

ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರದಿಂದ ಎಪಿಎಂಸಿ ಮುಂಭಾಗದಲ್ಲಿ ಹೋರಾಟಗಾರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ನಂತರ ಎಪಿಎಂಸಿ ಕಚೇರಿಯಲ್ಲಿ ತಹಸೀಲ್ದಾರ್ ಎಚ್.ಪ್ರಾಣೇಶ, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ ಹಾಗೂ ಪಿಎಸ್‌ಐ ಟಿ.ಗುರುರಾಜ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಮುಖಂಡ ದೇವಪ್ಪ ಸೋಭಾನದ್ ಮಾತನಾಡಿ, ಕಳೆದ ೪೦ ವರ್ಷಗಳಿಂದ ಎಪಿಎಂಸಿಯಲ್ಲಿ ಯಾವುದೇ ವರ್ತಕರು ಟೆಂಡರ್ ಕರೆದು ರೈತರ ಬೆಳೆಗಳನ್ನು ತುಂಬಿಕೊಳ್ಳುತ್ತಿಲ್ಲ. ಎಪಿಎಂಸಿ ಕಚೇರಿ ಲೈಸನ್ಸ್ ಹೊಂದಿದ್ದು, ಹೊರಗಡೆ ರೈತರ ಧಾನ್ಯ ತುಂಬಿಕೊಳ್ಳುತ್ತಾರೆ. ಅಧಿಕಾರಿಗಳು ಕೂಡಲೇ ವರ್ತಕರ ಕೆಲವು ಕಾನೂನು ಬಾಹಿರ ಕೆಲಸಗಳನ್ನು ಬಂದ್ ಮಾಡಬೇಕು. ಅವರ ಮೀತಿಮಿರಿದ ಮೋಸಕ್ಕೆ ಕಡಿವಾಣ ಹಾಕಬೇಕೆಂದರು.

ತಹಸೀಲ್ದಾರ್ ಎಚ್. ಪ್ರಾಣೇಶ ಮಾತನಾಡಿ, ತಾಲೂಕಾ ಆಡಳಿತದ ವತಿಯಿಂದ ರೈತರಿಗೆ ವರ್ತಕರಿಂದ ಆಗುತ್ತಿರುವ ಅನ್ಯಾಯ ಗಮನದಲ್ಲಿಟ್ಟುಕೊಂಡು ಎಪಿಎಂಸಿ ಜಿಲ್ಲಾ ಸಹಾಯಕ ನಿರ್ದೇಶಕರೊಂದಿಗೆ ಪಟ್ಟಣದಲ್ಲಿ ವರ್ತಕರೊಂದಿಗೆ ಸಭೆ ನಡೆಸುತ್ತೇವೆ. ಪ್ರಮುಖ ಬೇಡಿಕೆಗಳಾದ ಟೆಂಡರ್ ಪ್ರಕ್ರಿಯ ನಡೆಸುವುದು, ರೈತ ಭವನ ನಿರ್ಮಿಸುವುದು, ಪ್ಲಾಸ್ಟಿಕ್ ಚೀಲ ಬಿಟ್ಟು ಕಾಟನ್ ಚೀಲದಲ್ಲಿ ತೂಕ ಮಾಡಬೇಕು ಸೇರಿ ಪ್ರಮುಖ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುತ್ತೇವೆಂದು ಭರವಸೆ ನೀಡಿದರು.

ಇದೇ ವೇಳೆ ಸಂಘದ ರೈತ ಮುಖಂಡರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ತಾಲೂಕ ಅಧ್ಯಕ್ಷ ಮಂಜುನಾಥ ಚೆಟ್ಟಿ, ನಗರ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಜೆನಿನ, ಮುಖಂಡರಾದ ಭರಮಪ್ಪ ತಳವಾರ, ಬಸವರಾಜ ಸಬರದ್, ಶಿವಪ್ಪ ಸಂದಿಮನಿ, ಹನುಮಂತಪ್ಪ ಮರಡಿ, ಹನುಮಂತಪ್ಪ ಪಲ್ಲೆದ್, ಯಲ್ಲಪ್ಪ ಹೂಗಾರ, ಬಸವರಾಜ ಈಬೇರಿ, ಕಳಕಪ್ಪ ಕುರಿ, ಬಸವರಾಜ ಲಾಳಗೊಂಡರ, ಶಿವಪ್ಪ ಸಬರದ, ಶರಣಪ್ಪ ಯತ್ನಟ್ಟಿ, ಕಳಕಪ್ಪ ಯತ್ನಟ್ಟಿ, ರಾಮಣ್ಣ ಬೆದವಟ್ಟಿ, ಗುದ್ನೇಪ್ಪ ಯತ್ನಟ್ಟಿ, ಬಸವರಾಜ ಮಳಗಿ, ಮಲ್ಲಿಕಾರ್ಜುನ ತಳಬಾಳ, ಬಸಪ್ಪ ಮಂಡಲಗೇರಿ, ವೀರಯ್ಯ ಕಳ್ಳಿಮಠ, ಶರಣಯ್ಯ ಕೋಮಾರ, ಕಳಕಪ್ಪ ಕ್ಯಾದಗುಂಪಿ, ವಜೀರ್‌ಸಾಬ ತಳಕಲ್, ಗಂಗಮ್ಮ ಹುಡೆದ್ ಸೇರಿದಂತೆ ಅನೇಕ ರೈತರು ಇದ್ದರು.