ರತನಾಟ್ಯ ದೇಶೀಯ ಕಲೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂಥ ಕಲೆ ಕಲಿಸುವುದರಿಂದ ಅವರ ಬೌದ್ಧಿಕ ಹಾಗೂ ದೈಹಿಕ ವಿಕಾಸ ಸಾಧ್ಯವಾಗಲಿದೆ.
ಹುಬ್ಬಳ್ಳಿ:
ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳಕ್ಕೆ 50 ವರ್ಷವಾದ ಹಿನ್ನೆಲೆ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಿ ಕಲೆ, ಸಾಹಿತ್ಯ ಪ್ರೋತ್ಸಾಹಿಸುತ್ತಿದೆ ಎಂದು ಹಿರಿಯ ಪತ್ರಕರ್ತ ಬಂಡು ಕುಲಕರ್ಣಿ ಹೇಳಿದರು.ಅವರು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ನೇತೃತ್ವದಲ್ಲಿ ಇಲ್ಲಿನ ಮೂರುಸಾವಿರ ಮಠದ ಸಭಾಂಗಣದಲ್ಲಿ ಗೆಜ್ಜೆನಾದದ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಬಸವರಾಜ ಕಟ್ಟಿಮನಿ ಮಾತನಾಡಿ, ಭರತನಾಟ್ಯ ದೇಶೀಯ ಕಲೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂಥ ಕಲೆ ಕಲಿಸುವುದರಿಂದ ಅವರ ಬೌದ್ಧಿಕ ಹಾಗೂ ದೈಹಿಕ ವಿಕಾಸ ಸಾಧ್ಯವಾಗಲಿದೆ ಎಂದರು.ಶ್ರೀಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮಿಟಿ ಮಾಜಿ ಚೇರ್‌ಮನ್ ಧರಣೇಂದ್ರ ಜವಳಿ ಮಾತನಾಡಿದರು. ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಸಿದ್ದಪ್ಪ ಅಂಗಡಿ, ಸ್ತ್ರೀರೋಗ ಶಾಸ್ತ್ರಜ್ಞೆ ಡಾ. ಅಶ್ವಿನಿ ಕೊಳ್ಳೂರು ಮಾತನಾಡಿದರು. ವಿದುಷಿ ಸುಶ್ಮಾ ಕೊಂಗಿ, ಸ್ಟಿಫನ್ ಲುಂಜಾಳ, ಸುರೇಂದ್ರ ಜಹಾಗೀರದಾರ, ಚಂದ್ರಶೇಖರ ಗಾಣಿಗೇರ ಅವರು ಸಂಗೀತ ಸೇವೆ ನೀಡಿದರು.
ಜೂನಿಯರ್ ವಿಭಾಗದಲ್ಲಿ ಸಾನ್ವಿ ಧಡೇದ (ಪ್ರಥಮ), ಶ್ರೇಯಾ ಹಡಪದ (ದ್ವಿತೀಯ), ವಿಕಾಸ ಯಡವಟ್ಟಿ (ತೃತೀಯ), ಸೀನಿಯರ್ ವಿಭಾಗದಲ್ಲಿ ಅನನ್ಯ ರಾಯಭಾಗಿ (ಪ್ರಥಮ), ಅದಿತಿ ಸಡ್ಲಿ (ದ್ವಿತೀಯ), ಹರ್ಷಿಣಿ ಕಟ್ಟಿ (ತೃತೀಯ) ಬಹುಮಾನ ಪಡೆದರು. ಹಲವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.ಸಾಯಿ ಮೋಟರ್ಸ್ ಎಂಡಿ ಶ್ರೀನಿವಾಸ ಅಂಗಡಿ, ಕಲಾವಿದ ಸಾಯಿನಾಥ ಹಿತ್ತಾಳೆ, ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಎಸ್.ಎಸ್. ಕಮಡೊಳ್ಳಿ ಶೆಟ್ಟರ, ಪ್ರಕಾಶ ಚಳಗೇರಿ, ತನುಜಾ ನಾಯಕ, ಪ್ರಸನ್ನ ಹಿರೇಮಠ, ಚನ್ನಬಸಪ್ಪ ಧಾರವಾಡಶೆಟ್ಟರ, ಅನಿತಾ ಜಡಿ ಸೇರಿ ಹಲವರಿದ್ದರು. ಗಾಯತ್ರಿ ನೆಲ್ಲಿಕೊಪ್ಪ ನಿರೂಪಿಸಿದರು.