ಜೀವನ ಶಾಶ್ವತವಲ್ಲ. ಮರಣದ ಬಳಿಕ ಬರುವ ಜೀವನವೇ ಶಾಶ್ವತ. ಜನಸೇವೆ ಮಾಡುವ ಮೂಲಕ ದೇವರ ಪ್ರೀತಿಯಿಂದ ಗೌರವಾರ್ಹ ಸ್ಥಾನ ಗಳಿಸಲು ಸಾಧ್ಯವಿದೆ

ಕಾರಟಗಿ: ಜಗತ್ತಿಗೆ ಮಾನವೀಯತೆ ಬೆಳಕು ಪಸರಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ೧೫೦೧ ನೇ ಜನ್ಮ ದಿನಾಚರಣೆ ತಾಲೂಕಿನಾದ್ಯಂತ ಮುಸ್ಲಿಂ ಭಾಂಧವರು ಇಸ್ಲಾಂ ಧರ್ಮದ ಪವಿತ್ರ ಧಾರ್ಮಿಕ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾ ಸ್ಥಳಗಳ ರೂಪಕದ ಭವ್ಯ ಮೆರವಣಿಗೆಯೊಂದಿಗೆ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಮದಿನಾ ಮಜೀದ್ ನಿಂದ ಮೆಕ್ಕಾ ಮತ್ತು ಮದೀನಾ ರೂಪಕದ ಭವ್ಯ ಮೆರವಣಿಗೆ ರಾಜ್ಯ ಹೆದ್ದಾರಿಯ ಮೂಲಕ ಸಾಗಿ ಕನಕದಾಸ ವೃತ್ತಕ್ಕೆ ತಲುಪತ್ತಲೇ ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಕಾಂಗ್ರೆಸ್ ಮುಖಂಡ ರವಿ ತಂಗಡಗಿ ಸೇರಿದಂತೆ ಇಲ್ಲಿನ ವಿವಿಧ ಪಕ್ಷಗಳ ಜನಪ್ರತಿನಿಧಿ, ನಾನಾ ಸಮಾಜ ಮುಖಂಡರು ಮಹಮದ್ ಪೈಗಂಬರ್‌ರ ರೂಪಕಕ್ಕೆ ಪುಷ್ಪಾರ್ಪಣೆ ಮಾಡಿ ಮುಸ್ಲಿಂದ ಬಾಂಧವರಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ವೇಳೆ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿ, ಜೀವನ ಶಾಶ್ವತವಲ್ಲ. ಮರಣದ ಬಳಿಕ ಬರುವ ಜೀವನವೇ ಶಾಶ್ವತ. ಜನಸೇವೆ ಮಾಡುವ ಮೂಲಕ ದೇವರ ಪ್ರೀತಿಯಿಂದ ಗೌರವಾರ್ಹ ಸ್ಥಾನ ಗಳಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಮಹಮ್ಮದ್ ಪೈಗಂಬರ್. ಶಾಂತಿ, ಸೌಹಾರ್ಧತೆ, ಭ್ರಾತೃತ್ವ ಮತ್ತು ಮಾನವೀಯತೆ ಮಂತ್ರ ಸಾರಿದ ಮಹಮ್ಮದ್ ಪೈಗಂಬರ್ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.

ಬಳಿಕ ಕಾಂಗ್ರೇಸ್ ಮುಖಂಡ ರವಿ ತಂಗಡಗಿ ಮಾತನಾಡಿ ಮಾತನಾಡಿ, ಪ್ರೀತಿ, ಅನುಕಂಪ, ಅತ್ಯತ್ತಮ ಒಳಿತಿನ ಮೂಲಕ ದ್ವೇಷ ಜಯಿಸಿ ತೋರಿಸದವರೇ ಪೈಗಂಬರ ಮಹಮ್ಮದ್ ರು. ಅವರ ಬದುಕಿನ ಮಹತ್ವದ ಕ್ಷಣ ಸ್ಮರಿಸುವ ಅವಕಾಶ ಇಂದು ನಮಗೆ ಒದಗಿ ಬಂದ ಸುವರ್ಣಾವಕಾಶ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಮುಖರಾದ ಶಿವರೆಡ್ಡಿ ನಾಯಕ, ನಾಗರಾಜ ಬಿಲ್ಗಾರ ಸೇರಿದಂತೆ ಮುಸ್ಲೀಂ ಸಮಾಜದ ಪ್ರಮುಖರು ಮಾತನಾಡಿ, ಮಹಮ್ಮದ್ ಪೈಗಂಬರ್ ಕುರಿತು. ಗುಣಗಾನ ಮಾಡಿದರು.

ಮೆಕ್ಕಾ ಮದೀನಾ ಸ್ಥಳಗಳ ರೂಪಕದ ಭವ್ಯ ಮೆರವಣಿಗೆ ಮುಖ್ಯೆರಸ್ತೆಯಿಂದ ಹಳೆಬಜಾರ್ ಮಾರ್ಗವಾಗಿ ಮಜೀದ್‌ಗೆ ಬಂದು ತಲುಪಿತು. ಮುಸ್ಲಿಂ ಬಾಂಧವರು ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಕುರಾನ್ ಪಠಣ ಮಾಡಿದರು. ಕೊನೆಗೆ ಮಜೀದ್ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು.

ಈ ಪುರಸಭೆ ಮಾಜಿ ಅಧ್ಯಕ್ಷ ಶರಣೇಶ್ ಸಾಲೋಣಿ, ಉಮೇಶ್ ಭಂಗಿ, ಪ್ರಭುರಾಜ ಬೂದಿ, ಅಬ್ದುಲ್ ಗನಿ ಸಾಬ್, ಡಾ.ಎಂ.ಐ.ಮುದುಗಲ್, ಬಾಬು ಬಳಿಗಾರ್, ಜಿಲಾನಿ ಸಾಬ್ ಗುಜರಿ, ಅಮ್ಜದ್ ಕಪಾಲಿ, ಅಮೃಲ್ ಹುಸೇನ್, ಅಜಗರ್ ಮುಸ್ತಾಪಾ, ಹುಸೇನ್ ಕೆಎಸಾರ್‌ಟಿಸಿ, ಇನಾಯತ್, ಶಾಮಿದ್ ರಾಮನಗರ, ಜಿಲ್ಲು ಬಳಿಗಾರ್, ಗೌಸ್ ಮೋಹಿನುದ್ದಿನ್, ರಬ್ಬಾನಿ, ಮಹಮದ್‌ಅಲಿ ಬಳಿಗಾರ, ಹುಸೇನ್ ಭಾಷಾ, ಸಿರಾಜ್ ಹುಸೇನ್, ಮಹಿಬೂಬ್ ಮೇಸ್ತ್ರಿ, ಮೋಹಿನುದ್ದಿನ್ ಟೀ ಸ್ಟಾಲ್, ಜಹಾಂಗೀರ್ ಸಾಬ್, ಮಹಿಬುಲಿ ಬಳಿಗಾರ್, ಶಂಶುದ್ದೀನ್, ಮೇಸ್ತ್ರಿ, ಭಾಷಾ, ಮುಜಾಹಿದ್ ಕಪಾಲಿ, ರಬ್ಬಾನಿ ಪಟೇಲ್, ಹನೀಫ್ ಮೇಸ್ತ್ರಿ, ದಾದಾ ಕಲಂದರ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.