ವಾಲ್ಮೀಕಿ ಅಭಯಾರಣ್ಯ ಘೋಷಣೆಗೆ ಪ್ರಸ್ತಾವನೆ: ರೆಡ್ಡಿ

| Published : Oct 29 2023, 01:01 AM IST

ವಾಲ್ಮೀಕಿ ಅಭಯಾರಣ್ಯ ಘೋಷಣೆಗೆ ಪ್ರಸ್ತಾವನೆ: ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ತಾಲೂಕಿನಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ. ಕೂಡಲೇ ಈ ಪ್ರದೇಶವನ್ನು ಮಹರ್ಷಿ ವಾಲ್ಮೀಕಿ ಅಭಯಾರಣ್ಯ ಪ್ರದೇಶವೆಂದು ಘೋಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ: ತಾಲೂಕಿನಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ. ಕೂಡಲೇ ಈ ಪ್ರದೇಶವನ್ನು ಮಹರ್ಷಿ ವಾಲ್ಮೀಕಿ ಅಭಯಾರಣ್ಯ ಪ್ರದೇಶವೆಂದು ಘೋಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ನಗರದ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರೀ ವಾಲ್ಮೀಕಿ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಜನಾದ್ರಿಯಲ್ಲಿ 5 ಸಾವಿರ ಜನರು ಕೂಡುವ ಕನ್ವೆನ್ಶನಲ್‌ ಹಾಲ್ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ. ರಾಜ್ಯ, ರಾಷ್ಟ್ರ ಮಟ್ಟದ ಗಮನ ಸೆಳೆಯುವಂತೆ ಮಾಡಲಾಗುತ್ತದೆ. ನಗರದಲ್ಲಿ ವಾಲ್ಮೀಕಿ ಸಮಾಜದ ಕಲ್ಯಾಣ ಮಂಟಪ ವಸತಿ ನಿಲಯ ಸೇರಿದಂತೆ ಕಾಲೋನಿ ನಿರ್ಮಿಸಲಾಗುತ್ತದೆ ಎಂದರು.

ಮಾಜಿ ವಿಪ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ, ವಾಲ್ಮೀಕಿ ಋಷಿ ಜಗತ್ತಿಗೆ ಆದರ್ಶವಾಗಿದ್ದಾರೆ. ವಾಲ್ಮೀಕಿ ಸಮಾಜ ಹಿಂದುಳಿದಿದೆ. ಜನಪ್ರತಿಗಳು ನ್ಯಾಯ ಒದಗಿಸದೇ ಇರುವುದು ವಿಷಾದಕರ ಸಂಗತಿ. ಈ ಹಿಂದೆ ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಕಲ್ಯಾಣ ಮಂಟಪಕ್ಕೆ ₹1 ಕೋಟಿ ನೀಡಿದ್ದಾರೆ. ಜನಾರ್ದನ ರೆಡ್ಡಿ ಸಹಕಾರ ನೀಡುತ್ತಿದ್ದಾರೆ. ಗುಡ್ಡಗಾಡು ಪ್ರದೇಶವನ್ನು ವಾಲ್ಮೀಕಿ ಅಭಯಾರಣ್ಯವಾಗಿ ಘೋಷಿಸಬೇಕು. ರಸ್ತೆ ಅಭಿವೃದ್ಧಿಯಾಗ ಬೇಕು ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಹಿಂದೆ ತಾವು ನೀಡಿದ ಅನುದಾನದಿಂದ ಹಾಸ್ಟೇಲ್, ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಶಾಸಕರು ಇದನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಸಲಹೆ ನೀಡಿದರು. ಮಹರ್ಶಿ ವಾಲ್ಮೀಕಿ ಆದರ್ಶ ತತ್ವಗಳನ್ನು ಪಾಲಿಸಿರಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ತಿಪ್ಪೇರುದ್ರಸ್ವಾಮಿ, ತಹಸೀಲ್ದಾರ ಮಂಜುನಾಥಸ್ವಾಮಿ, ತಾಪಂ ಇಒ ಲಕ್ಮೀದೇವಿ, ಪಿಐ ಮಂಜುನಾಥಸ್ವಾಮಿ, ಕೃಷ್ಣಪ್ಪ ನಾಯಕ, ಪರಿಶಿಷ್ಟ ಪಂಗಡಗಳ ಇಲಾಖೆಯ ಅಧಿಕಾರಿ ಗ್ಯಾನನಗೌಡ, ವೀರಭದ್ರಪ್ಪ ನಾಯಕ, ಜೋಗದ ಹನುಮಂತಪ್ಪನಾಯಕ, ಜೋಗದ ನಾರಾಯಣಪ್ಪನಾಯಕ, ಅರ್ಜುನ್ ನಾಯಕ, ಮನೋಹರಗೌಡ, ಸೈಯದ್ ಅಲಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೊಸಮಲಿ ಮಲ್ಲೇಶಪ್ಪ ಇದ್ದರು.