ಮದ್ದೂರು:

ರೈತರು ತಮ್ಮ ಆರ್ಥಿಕ ಭದ್ರತೆಗೆ ಜಾನುವಾರುಗಳನ್ನು ಕಾಲುಬಾಯಿ ರೋಗಗಳಿಂದ ರಕ್ಷಣೆ ಮಾಡಬೇಕು ಎಂದು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ 9ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕುರಿತ ಬಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿ, ಹೈನುಗಾರಿಕೆ ಉದ್ಯಮ ಸಾಕಷ್ಟು ಲಾಭದಾಯಕವಾಗಿದೆ. ಇದನ್ನು ಅರಿತು ರೈತರು ಇಂತಹ ರೋಗಗಳು ಬಾರದಂತೆ ತಡೆಯಲು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಆದ್ಯತೆ ನೀಡಬೇಕು ಎಂದರು.

ಈ ವೇಳೆ ಪಶುಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ತಾಲೂಕು ಸಹಾಯಕ ನಿರ್ದೇಶಕ ಡಾ.ಟಿ.ಎಚ್.ಗೋವಿಂದ, ಡಾ.ಕಾರ್ತಿಕ್, ಡಾ.ರವಿಶಂಕರ್, ಡಾ.ಮಂಜೇಶ್ ಇದ್ದರು.ಮೊಬೈಲ್ ಕ್ಷ ಕಿರಣ ಯಂತ್ರಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ

ಮದ್ದೂರು:


ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶಾಸಕ ಕೆ.ಎಂ.ಉದಯ್ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನದ ಅಂಗವಾಗಿ ಮೊಬೈಲ್ ಕ್ಷ-ಕಿರಣ ಯಂತ್ರಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ತಾಲೂಕಿನಲ್ಲಿ 100 ಗ್ರಾಮಗಳು ಆಯ್ಕೆ ಆಗಿದ್ದು, ಎಲ್ಲಾ ಗ್ರಾಮಗಳಲ್ಲಿ ಮೊಬೈಲ್ ಕ್ಷ-ಕಿರಣ ಯಂತ್ರದ ಮೂಲಕ ಸಾರ್ವಜನಿಕರಿಗೆ ಎಕ್ಸ್ ರೇ ಮಾಡಿಸಿ ಸಮಸ್ಯೆ ಕಂಡು ಬಂದರೆ ಪರೀಕ್ಷೆ ಮಾಡಿಸಿ ಕ್ಷಯ ರೋಗ ಪತ್ತೆಯಾದರೆ ಅವರಿಗೆ ಉಚಿತ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು ಎಂದರು.

ನಂತರ ಕ್ಷಯ ರೋಗಿಗಳಿಗೆ ಫುಡ್ ಕಿಟ್ ವಿತರಿಸಿ ಚಿಕಿತ್ಸೆ ಪಡೆದುಕೊಳ್ಳುವವರಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ದಾನಿಗಳು ರೋಗಿಗಳನ್ನು ದತ್ತು ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ಕಳೆದ 33 ತಿಂಗಳಿನಿಂದ ಪ್ರತಿ ತಿಂಗಳು 50 ಫುಡ್ ಕಿಟ್ ನೀಡುತ್ತಿರುವ ಸೋಮನಹಳ್ಳಿ ಹೈ ಟೆನ್ ಫಾಸ್ಟನರ್ ಕಂಪನಿಯವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.