ದಾಳಿ: ಬಾಲ ಕಾರ್ಮಿಕನ ರಕ್ಷಣೆ

| Published : Jul 24 2024, 12:17 AM IST

ಸಾರಾಂಶ

ನಗರದ ವೈಲ್ಡ್ ಕ್ರಾಫ್ಟ್ ಕಂಪನಿಯ ಮೇಲೆ ತಹಸೀಲ್ದಾರ್ ಡಾ.ದತ್ತಾತ್ರೆಯ ಗಾದಾ ದಾಳಿ ನಡೆಸಿ ಬಾಲ ಕಾರ್ಮಿಕನನ್ನು ರಕ್ಷಿಸಿದ್ದಾರೆ.

ಶಿರಾ: ನಗರದ ವೈಲ್ಡ್ ಕ್ರಾಫ್ಟ್ ಕಂಪನಿಯ ಮೇಲೆ ತಹಸೀಲ್ದಾರ್ ಡಾ.ದತ್ತಾತ್ರೆಯ ಗಾದಾ ದಾಳಿ ನಡೆಸಿ ಇಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕನನ್ನು ರಕ್ಷಿಸಿ ಜಿಲ್ಲಾ ಬಾಲ ಮಂದಿರಕ್ಕೆ ಹಸ್ತಾಂತರಿಸಿದ್ದಾರೆ. ದೆಹಲಿಯಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಗರದ ಕೈಗಾರಿಕಾ ವಸಹತು ಪ್ರದೇಶದಲ್ಲಿರುವ ವೈಲ್ಡ್ ಕ್ರಾಫ್ಟ್ ಕಂಪನಿಯ ಮೇಲೆ ದಾಳಿ ನಡೆಸಿದ ವೇಳೆ ಛತ್ತೀಸ್‌ಗಡ 16 ವರ್ಷ ವರ್ಷದ ಕುಶಾಲ್ ದಾಸ್ ಎಂಬ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕನನ್ನು ಶ್ರೀ ದುರ್ಗಾ ಟೆಕ್ ಸರ್ವಿಸ್‌ನ ಮಣಿಕಂಠನ್ ಎಂಬ ಗುತ್ತಿಗೆದಾರನಿಂದ ರಕ್ಷಣೆ ಮಾಡಲಾಗಿದೆ. ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಿಸಿ, ವೈಲ್ಡ್ ಕ್ರಾಫ್ಟ್ ಕಂಪನಿಗೆ ನೋಟಿಸ್ ನೀಡಲಾಗಿದೆ.

ತಪಾಸಣಾ ತಂಡದಲ್ಲಿ ತಹಸೀಲ್ದಾರ್ ಡಾ.ದತ್ತಾತ್ರೆಯ ಗಾದಾ, ಮಧುಗಿರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಫೈರೋಜ್ ಫಾಷ, ತಾಲೂಕು ಕಾರ್ಮಿಕ ಅಧಿಕಾರಿ ಅಬ್ದುಲ್ ರವೂಫ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಯತೀಶ್ ಕುಮಾರ್, ತಾಪಂ ಇಒ ಅನಂತರಾಜು, ಕಸಬಾ ಕಂದಾಯ ನಿರೀಕ್ಷಕ ಸುದರ್ಶನ್, ಭೂವನಹಳ್ಳಿ ಭಾಗವಹಿಸಿದ್ದರು.