ಸಾರಾಂಶ
ವಡಗೇರಾ ಪಟ್ಟಣದ ಶ್ರೀಗುರು ಪ್ರಸನ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮಕ್ಕಳಿಂದ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಶ್ರೀಗುರು ಪ್ರಸನ್ನ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪೂಜಾರಿ ಬಬಲಾದಿ ಹೇಳಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಡಗೇರಾ ಪಟ್ಟಣದ ಶ್ರೀಗುರು ಪ್ರಸನ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಮಕ್ಕಳಿಂದ ಚಾಲನೆ ಕೊಡಿಸಿ ಅವರು ಮಾತನಾಡಿದರು.
ಅರಣ್ಯ ನಾಶದಿಂದ ಪ್ರಕೃತಿ ವಿಕೋಪ ಹೆಚ್ಚಾಗುತ್ತಿವೆ. ಈ ಬಾರಿ ಬೇಸಿಗೆ ಬಿಸಿಲಿನಿಂದ ಅರಣ್ಯನಾಶವಾಗಿದೆ. ಮುಂದಿನ ದಿನಗಳಲ್ಲಿ ಗಾಳಿ ಹಣ ನೀಡಿ ಕೊಂಡುಕೊಳ್ಳುವ ಪರಿಸ್ಥಿತಿ ಬಂದರೂ ಕೂಡ ಅಚ್ಚರಿಪಡಬೇಕಿಲ್ಲ ಎಂದು ಗಂಭೀರ ಎಚ್ಚರಿಕೆ ನೀಡಿದರು.ಮನೆಗೊಂದು ಮಗು, ಮಗುವಿಗೊಂದು ಮರ ಎಂಬ ಗಾದೆಯಂತೆ, ಪ್ರತಿಯೊಬ್ಬರು ತಮ್ಮ ಮನೆ ಸುತ್ತಮುತ್ತ ಹೊಲ-ಗದ್ದೆಗಳಲ್ಲಿ ಸಸಿಗಳನ್ನು ನೆಟ್ಟು ಫೊಷಣೆ ಮಾಡಬೇಕು. ಅಂದಾಗ ಮಾತ್ರ ಒಳ್ಳೆ ಮಳೆ ಬೆಳೆ ಹಾಗೂ ಉತ್ತಮ ವಾತಾವರಣ ನಮಗೆ ಸಿಗುತ್ತದೆ. ವಿದ್ಯಾರ್ಥಿಗಳು ಕೂಡ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಮನೆ ಸುತ್ತಮುತ್ತ ಸಸಿ ನೆಡುವಂತೆ ಸಲಹೆ ನೀಡಿದರು.
ಶಾಲಾ ಶಿಕ್ಷಕರಾದ ಜೋತಿ, ಸಂಗೀತಾ, ಅಜೀರಾಬೇಗಂ, ಆಮ್ಯಾನ್, ಈಶ್ವರಿ, ಮಲ್ಲಿಕಾರ್ಜುನ ತೇಕರಾಳ, ಮಲ್ಲಾರೆಡ್ಡಿ ಜಡ್ಡಿ, ಪಾಲಕರಾದ ನಾಗರಾಜ್ ತುಮಕೂರ್, ಭೀಮರಾಯ ಕೋನಹಳ್ಳಿ ಇತರರಿದ್ದರು.