ಸಾರಾಂಶ
ಬೆಂಗಳೂರಿನ ಮಧುರ ಉಪಾಧ್ಯ, ಪಣಂಬೂರು ಶಂಕರನಾರಾಯಣ ಕಾರಂತ, ಲಕ್ಷ್ಮಣ ಕುಮಾರ ಮರಕಡ, ರಾಮಪ್ಪಮಯ್ಯ ದಂಪತಿಗಳಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿವೆ. ಇದರಲ್ಲಿ ಕನ್ನಡ ಭಾಷೆ ಅತ್ಯಂತ ಶ್ರೇಷ್ಟವಾದದ್ದು. ಆದ್ದರಿಂದ ಅದನ್ನು ರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವೆಂದು ಹಾವೇರಿಯ ಹಿರಿಯ ಸಾಹಿತಿ, ಚಿಂತಕ ಶೇಖರಗೌಡ ಪಾಟೀಲ ಹೇಳಿದರು. ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಪ್ರಥಮ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಲೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ಯಕ್ಷಗಾನ ಶ್ರೇಷ್ಟವಾದ ಕಲೆ. ಅದನ್ನು ಬೆಳೆಸಿ, ಉಳಿಸುವುದರ ಜೊತೆಗೆ ಗಡಿನಾಡ ಕನ್ನಡ ರಕ್ಷಿಸಿಸಲು ಪ್ರತಿಯೊಬ್ಬ ಕನ್ನಡಿಗರು ಕಂಕಣಬದ್ದರಾಗಿ ನಿಲ್ಲಬೇಕು ಎಂದರು. ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ, ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಲು ಎಲ್ಲರು ಶ್ರಮಿಸಬೇಕು ಎಂದರು. ಸಿರಿಬಾಗಿಲು ವೆಂಕಪ್ಪಯ್ಯ ಟ್ರಸ್ಟಿನ ಅಧ್ಯಕ್ಷ ರಾಮಕೃಷ್ಣಮಯ್ಯ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾಸರಗೋಡು ಕಸಾಪ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ್ ತೊಟ್ಟೆತ್ತೊಡಿ, ಪ್ರಮುಖರಾದಗೋಪಿಕಾ ಸತೀಶ ಮಯ್ಯ, ನರಸಿಂಹ ಮೂರ್ತಿ, ಗೋಪಾಲ ಶೆಟ್ಟಿ ಅರಿಬೈಲು, ಶ್ರೀಧರ ಶೆಟ್ಟಿ, ಮುಖೇಶ್, ಡಾ. ಎಸ್. ಹನುಮಂತಪ್ಪ, ಡಾ. ಗಂಗಯ್ಯ ಕುಲಕರ್ಣಿ, ಕೃಷ್ಣ ಕಾರಂತ, ಎಸ್ ಎನ್ ರಾಮಶೆಟ್ಟಿ, ಶೀನ ಶೆಟ್ಟಿ ಕಜೆ ಇದ್ದರು.
ಈ ಸಂದರ್ಭ ಬೆಂಗಳೂರಿನ ಮಧುರ ಉಪಾಧ್ಯ, ಪಣಂಬೂರು ಶಂಕರನಾರಾಯಣ ಕಾರಂತ, ಲಕ್ಷ್ಮಣ ಕುಮಾರ ಮರಕಡ, ರಾಮಪ್ಪಮಯ್ಯ ದಂಪತಿಗಳಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಬೆಳಗ್ಗೆ ಮಕ್ಕಳಿಂದ ಯಕ್ಷಗಾನ, ಭಜನೆ, ಮುಂತಾದ ವಿಶೇಷ ಪ್ರದರ್ಶನಗಳು ನಡೆಯಿತು.