ಸಾರಾಂಶ
ಬೀದರ್‌ನಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಭಾಲ್ಕಿ ತಾಲೂಕಿನ ಪೊಲೀಸ್ ಉಪಾಧೀಕ್ಷಕರಾಗಿ ಶಿವಾನಂದ ಪವಾಡಶೆಟ್ಟಿ ಅಧಿಕಾರ ವಹಿಸಿಕೊಂಡಾಗಿನಿಂದ ತಾಲೂಕಿನಾದ್ಯಂತ ನಿರಂತರವಾಗಿ ದಲಿತರ ಮೇಲೆ ಹಲ್ಲೆ ನಡೆಯುತ್ತಿವೆ ಎಂದು ಆರೋಪಿಸಿ ಶುಕ್ರವಾರ ಬೀದರ್‌ನಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.ಶಿವಾನಂದ ಪವಾಡಶೆಟ್ಟಿಯವರ ಅಧಿಕಾರ ಅವಧಿಯಲ್ಲಿ ದಲಿತರ ಮೇಲೆ ಆಗಿರುವ ಘಟನೆಗಳನ್ನು ತನಿಖೆಗೆ ಒಳಪಡಿಸಿ, ಘಟನೆಗಳಲ್ಲಿ ನೊಂದಿರುವ ಅಮಾಯಕ ದಲಿತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಇಬ್ಬರನ್ನು ಈ ಕೂಡಲೆ ಬಂಧಿಸುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ರಾಜಕುಮಾರ ಗುನಳ್ಳಿ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬರೀಶ ಕುದುರೆ, ಮಹೇಶ ಗೋರನಾಳಕರ್, ಸಂತೋಷ ಏಣಕೋರೆ, ಪ್ರಕಾಶ, ಅವಿನಾಶ ದೀನೆ, ವೈಜಿನಾಥ ಶಿಂಧೆ, ಗೌತಮ್ ಪ್ರಸಾರ, ಮಾರುತಿ ಸೂರ್ಯವಂಶಿ, ಪ್ರದೀಪ ಬಾವಿಕಟ್ಟಿ, ಉತ್ತಮ ಕುಂದೆ, ಜಗನ್ನಾಥ ಹೊನ್ನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.