ಹುಬ್ಬಳ್ಳಿಯ ಗರ್ಭಿಣಿ ಮಗಳನ್ನು ಮರ್ಯಾದೆಯ ಹೆಸರಿನಲ್ಲಿ ಹತ್ಯೆ ಮಾಡಿರುವ ಘಟನೆ, ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದುವಿನ ಹತ್ಯೆ- ದಾಳಿಗಳು, ಭಾರತದಲ್ಲಿ ಕೈಸ್ತರ ಹಬ್ಬದ ಸಮಯದಲ್ಲಿ ಚರ್ಚ ಮತ್ತಿರರೆಡೆಯಲ್ಲಿ ದಾಳಿಗಳನ್ನು ಖಂಡಿಸಿ ಪ್ರಗತಿ ಪರ ಮತ್ತು ಜೀವ ಪರ ಸಂಘಟನೆಗಳು ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಕ್ಯಾಂಡಲ್ ಲೈಟ್ ಪ್ರತಿಭಟನೆಯನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರುಹುಬ್ಬಳ್ಳಿಯ ಗರ್ಭಿಣಿ ಮಗಳನ್ನು ಮರ್ಯಾದೆಯ ಹೆಸರಿನಲ್ಲಿ ಹತ್ಯೆ ಮಾಡಿರುವ ಘಟನೆ, ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದುವಿನ ಹತ್ಯೆ- ದಾಳಿಗಳು, ಭಾರತದಲ್ಲಿ ಕೈಸ್ತರ ಹಬ್ಬದ ಸಮಯದಲ್ಲಿ ಚರ್ಚ ಮತ್ತಿರರೆಡೆಯಲ್ಲಿ ದಾಳಿಗಳನ್ನು ಖಂಡಿಸಿ ಪ್ರಗತಿ ಪರ ಮತ್ತು ಜೀವ ಪರ ಸಂಘಟನೆಗಳು ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಕ್ಯಾಂಡಲ್ ಲೈಟ್ ಪ್ರತಿಭಟನೆಯನ್ನು ನಡೆಸಲಾಯಿತು. ಹಿರಿಯ ಚಿಂತಕ ಪ್ರೊ. ದೊರೈರಾಜು ಮಾತನಾಡಿ ಸಮಾಜದಲ್ಲಿ ನಿತ್ಯ ಹೆಚ್ಚುತ್ತಿರುವ ಈ ಅಸಹಿಷ್ಣುತೆಯ ಘಟನೆಗಳು, ಕೊಲ್ಲುವ ಪವೃತ್ತಿಗಳು ತಡೆಯುವುದು ಸರ್ಕಾರಗಳ ಕೆಲಸ , ಸಮಾಜವು ಇದನ್ನು ಸಹಿಸಿ ಮೌನವಾಗಿದ್ದರೆ ನಾಳೆ ಸಮಾಜ ಕೊಲೆಗಡುಕರ ಸಮಾಜವಾದಿತು. ನಾವು ಈ ಬಗ್ಗೆ ಎಚ್ಚರ ವಹಿಸುವುದು ನಾಗರಿಕ ಸಮಾಜದ ಕರ್ತವ್ಯವೆಂದರು.ಪರಿಸರವಾದಿ ಸಿ. ಯತಿರಾಜು ಮಾತನಾಡಿ ಜೀವ ಪರರು ಮತ್ತಷ್ಟು ಹಚ್ಚಬೇಕಾಗಿದೆ ಮತ್ತು ಸಮಾಜದಲ್ಲಿನ ಅನ್ಯಾಯ ದಬ್ಬಾಳಿಕೆಗಳನ್ನು ತೀವ್ರತರವಾಗಿ ಪ್ರತಿಭಟಿಸಬೇಕಾಗಿದೆ ಎಂದರು. ಕಸಾಪ ಮಾಜಿ ಅಧ್ಯಕ್ಷೆ ಬಾ.ಹ ರಮಾ ಕುಮಾರಿ ಮಾತನಾಡಿ, ಸಮಾಜದಲ್ಲಿ ಒಂದು ವರ್ಗ ಹಿಂಸೆಯನ್ನುಕೊಲೆಗಡುಕುತನವನ್ನು ಬೆಂಬಲಿಸುತ್ತಿರುವುದು ಜೀವ ಪರರಿಗೆ ಮಾತ್ರವಲ್ಲ ನಾಗರಿಕ ಸಮಾಜಕ್ಕೆ ಆತಂಕ ಉಂಟುಮಾಡುವ ಬೆಳವಣಿಗೆ ಇದನ್ನು ಸಹಿಸಬಾರದು ಪ್ರತಿಭಟಿಸಬೇಕು ಎಂದರು.
ಸಿಐಟಿಯು ಸೈಯದ್ ಮುಜೀಬ್ ಮಾತಾಡಿ ದ್ವೇಷ, ಹಿಂಸೆ, ಕೊಲೆಯ ಕತ್ತಲೆಯತ್ತ ಸಾಗುತ್ತಿರುವ ಸಮಾಜ ಬೆಳಕಿನತ್ತ ಸಾಗಿ, ಶಾಂತಿ , ಸಹಬಾಳ್ವೆ ನೆಮ್ಮದಿ ಜನ ಜೀವನಕ್ಕೆ ಮುಂದಾಗುವುದಕ್ಕೆ ನಾಗರಿಕ ಸಮಾಜ ಚಿಂತಿಸ ಬೇಕಾಗಿದೆ ಎಂದರು. ಸ್ಲಂ ಜನಾಂದೋಲನದ ಅನುಪಮಾ, ಕೊಟ್ಟ ಶಂಕರ್, ಎಪಿಸಿಆರ್ ತಾಜೋದ್ದಿನ್ ಶರೀಫ್, ನಿವೃತ್ತ ನೌಕರ ಸಂಘ, ಬಾಲಕೃಷ್ಣ, ಪ್ರಾಂತ ರೈತ ಸಂಘದ ಬಿ.ಉಮೇಶ್, ವಕೀಲ ರಂಗಧಾಮಯ್ಯ, ಸಿಪಿಎಂ ಎನ್.ಕೆ ಸುಬ್ರಮಣ್ಯ, ದಸಂಸದ ಪಿ.ಎನ್ ರಾಮಯ್ಯ,ಮಾತನಾಡಿದರು. ಪ್ರತಿಭಟನೆಯಲ್ಲಿ ಮೇಳೆಹಳ್ಳಿ ದೇವರಾಜು, ಇನ್ಸಾಪ್ ರಪೀಕ್, ಜೆ.ಎಂ.ಎಸ್ ಟಿ.ಆರ್ ಕಲ್ಪನಾ, ವಕೀಲ ಕಿಶೋರ್. ಅಪ್ಸರ್ ಖಾನ್, ಪುಟ್ಪಾತ್ ವ್ಯಾಪಾರಿಗಳ ಸಂಘದ ವಸೀಮ್ ಅಕ್ರಮ್, ಸಮುದಾಯದ ಅಶ್ವಥಪ್ಪ., ಬಾಬು ಎಸ್. ಮಾನಸೆ, ಉದ್ಯಮಿ ಹನಿ ಹುಸೇನ್ . ಚಂದ್ರಶೇಖರ್, ವಿಜಾನ ಕೇಂದ್ರ ಟಿ.ಜಿ ಶಿವಲಿಂಗಯ್ಯ. ಉಪನ್ಯಾಸಕ ಸುಬ್ರಮಣ್ಯ,ಅರುಣ, ಕೆನಡಿ, ಕೃಷ್ಣಮೂರ್ತಿ, ಪಲ್ಲವಿ, ಶಂಕರಪ್ಪ .ವಕೀಲ ಖಾಲಿದ್, ಹನಿಹೂಸೇನ್,ಆಹ್ಮದ್ ಮುಂತಾದವರು ಇದ್ದರು.