ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ಒಬಿಸಿ ಮೀಸಲಾತಿ ವಿರೋಧಿ ನಿಲುವು ಖಂಡಿಸಿ ಒಬಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಭೀಮರಾಜ ವಡೆಯರ್ ನೇತೃತ್ವದಲ್ಲಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಚಿಕ್ಕೋಡಿ ಗ್ರೆಡ್- 2 ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಮೂಲಕ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ಒಬಿಸಿ ಮೀಸಲಾತಿ ವಿರೋಧಿ ನಿಲುವು ಖಂಡಿಸಿ ಒಬಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಭೀಮರಾಜ ವಡೆಯರ್ ನೇತೃತ್ವದಲ್ಲಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಚಿಕ್ಕೋಡಿ ಗ್ರೆಡ್- 2 ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಮೂಲಕ ಮನವಿ ಸಲ್ಲಿಸಲಾಯಿತು.ಚಿಕ್ಕೋಡಿ ನಗರದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ರ್‍ಯಾಲಿ ಪ್ರಾರಂಭಿಸಿ ಬಸವ ವೃತ್ತದಲ್ಲಿ ಕೆಲ ಸಮಯ ಮಾನವ ಸರ್ಪಳಿ ನಿರ್ಮಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.2010 ರಿಂದ 2000 24ರ ವರೆಗೆ ಪಶ್ಚಿಮ ಬಂಗಾಳದಲ್ಲಿ ಒಬಿಸಿ ಕೋಟಾ ಉಪವರ್ಗದಡಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಒಬಿಸಿ ಮೀಸಲಾತಿಯನ್ನು ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯ ತೀರ್ಪನ್ನು ಪಾಲಿಸುವುದಿಲ್ಲವೆಂದು ಹೇಳಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಸ್ಲಿಮರ ಓಲೈಕೆಗಾಗಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ. ಕೊಲ್ಕತ್ತಾ ಸರ್ಕಾರದ ದೋಷಪೂರಿತ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಿದ ಕೊಲ್ಕತ್ತಾ ಹೈಕೋರ್ಟ್ ತೀರ್ಪು ಸ್ವಾಗತರ್ಹಾವಾಗಿದ್ದು, ಒಬಿಸಿಗೆ ಮೀಸಲಾದ ಮೀಸಲಾತಿಯನ್ನು ಧರ್ಮದ ಹೆಸರಿನಲ್ಲಿ ಮುಸ್ಲಿಂರಿಗೆ ಕೋಡಲು ಹೊರಟಿರುವ ಕಾಂಗ್ರೆಸ್, ಇಂಡಿಯಾ ಕೂಟ ಹಾಗೂ ಮಮತಾ ಬ್ಯಾನರ್ಜಿ ಧೋರಣೆ ಖಂಡಿಸಿದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಒಬಿಸಿ ಜಿಲ್ಲಾ ಅಧ್ಯಕ್ಷ ಭೀಮರಾಜ ವಡೆಯರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ, ಶಿವಾನಂದ ನವಲಿಹಾಳ ಸಂತೋಷ ಪಾಟೀಲ, ಕಾಳಪ್ಪ ಬಡಿಗೇರ, ಬಸವರಾಜ ಮಾಳಗಿ ಹಾಗೂ ರಾಯಬಾಗ ಮಂಡಲದ ಕಲ್ಲಪ್ಪ ಕಮತೆ, ಅಪ್ಪಾಸಾಹೇಬ ಚೌಗಲೆ, ಹನುಮಂತ ಖಂಡಿ, ಅಜಿತ್ ಪವಾರ ಮತ್ತು ಸಂದೀಪ ಗೋಂದಳಿ, ದುರ್ಗಪ್ಪ ಪಾಟೀಲ, ಸದಾಶಿವ ಪೂಜೇರಿ, ಬಸವರಾಜ ಜಗದಾಳ, ವಿಠ್ಠಲ ಪಾಟೀಲ, ಸಂಗಮೇಶ ದುರದುಂಡಿ ಹಾಗೂ ಬಿಜೆಪಿ ಕಾರ್ಯಕರ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು.