ಚನ್ನಗಿರಿ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ

| Published : Jun 27 2024, 01:03 AM IST

ಸಾರಾಂಶ

ತಾಲೂಕು ಗ್ರಾಮ ಪಂಚಾಯಿತಿ ನೌಕರ ಸಂಘ ವತಿಯಿಂದ ತಾಲೂಕಿನ 61 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಪಂ ಕಚೇರಿ ಎದುರು ಬುಧುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕು ಗ್ರಾಮ ಪಂಚಾಯಿತಿ ನೌಕರ ಸಂಘ ವತಿಯಿಂದ ತಾಲೂಕಿನ 61 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಪಂ ಕಚೇರಿ ಎದುರು ಬುಧುವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ನೌಕರರ ಸಂಘ ಜಿಲ್ಲಾಧ್ಯಕ್ಷ ಎಸ್.ಸಿ. ಶ್ರೀನಿವಾಸಾಚಾರ್ ಮಾತನಾಡಿ, ನೌಕರರು ಗ್ರಾ.ಪಂ.ಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದಂತಾಗಿದೆ. ಪ್ರತಿ ನೌಕರರಿಗೆ ಮಾಸಿಕ ₹31000 ವೇತನ ನಿಗದಿಪಡಿಸಬೇಕು. ನೌಕರರಿಗೆ ಹೆಚ್ಚಿನ ಕೆಲಸದ ಹೊರೆ ಇದೆ. ಕೆಲಸದ ಹೊರೆಯನ್ನು ಕಡಿಮೆ ಮಾಡಬೇಕಾಗಿದೆ. ಗ್ರಾಪಂ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ಶಿಫಾರಸು ಮಾಡಬೇಕು ಎಂದರು.

ಈಗಾಗಲೇ ತಾಲೂಕಿನ ಗ್ರಾ.ಪಂ.ಗಳಲ್ಲಿ ಖಾಲಿ ಇರುವ ಕರ ವಸೂಲಿಗಾರ ಹುದ್ದೆಗಳಿಗೆ ವಾಟರ್ ಮ್ಯಾನ್ ಹಾಗೂ ಜವಾನರಿಗೆ ಬಡ್ತಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳಾದ ಚಂದ್ರಪ್ಪ, ಪ್ರಸಾದ್, ರಾಕೇಶ್, ಶಾಂತಪ್ಪ, ಶಿವಯೋಗಿ ಭೀಮಾ ನಾಯ್ಕ್, ಕೃಷ್ಣಮೂರ್ತಿ, ಓಂಕಾರಪ್ಪ, ಮಂಜುನಾಥ್, ಶ್ರೀರಾಮು, ಷಣ್ಮುಖಪ್ಪ, ರವಿಕುಮಾರ್, ಕೆಂಚಪ್ಪ, ಮಲ್ಲೇಶ್ ನಾಯ್ಕ್, ಮಹೇಶ್ ಸೇರಿದಂತೆ ತಾಲೂಕಿನ ಎಲ್ಲ ಗ್ರಾಪಂ ನೌಕರರು ಭಾಗವಹಿಸಿದ್ದರು.

- - - -26ಕೆಸಿಎನ್‌ಜಿ3:

ಗ್ರಾಮ ಪಂಚಾಯಿತಿ ನೌಕರ ಸಂಘದ ತಾಲೂಕು ಸಮಿತಿಯಿಂದ ನೌಕರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಚನ್ನಗಿರಿ ತಾಲೂಕು ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.