ಆನ್‌ಲೈನ್ ಮಾರಾಟ ವಿರೋಧಿಸಿ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ತಾಲೂಕು ಔಷಧ ಮಾರಾಟ ವ್ಯಾಪಾರಸ್ಥರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಿರೇಕೆರೂರು: ಆನ್‌ಲೈನ್ ಮಾರಾಟ ವಿರೋಧಿಸಿ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ತಾಲೂಕು ಔಷಧ ಮಾರಾಟ ವ್ಯಾಪಾರಸ್ಥರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಮನವಿಯಲ್ಲಿ ಆನ್‌ಲೈನ್ ಔಷಧ ಮಾರಾಟದಿಂದ ಔಷದ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಜೀವನಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದೆ. ಇದರಿಂದ ರೋಗಿಗಳಿಗೆ ಅನುಕೂಲವಾಗುವ ಬದಲು ಅಪಾಯ ಎದುರಾಗಲಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಆನ್ ಲೈನ್ ಔಷಧ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಗಣಪತಿಣ್ಣ ಜೀವಣ್ಣನವರ, ರುದ್ರೇಶ ಬೇತೂರ, ದೇವರಾಜ ಮರಿಗೌಡ್ರ, ತಿಪ್ಪೇಶ ಬೇತೂರ, ರಾಜು ಮಡಿವಾಳರ, ಚಂದನಾ ಪಟ್ಟಣಶೆಟ್ಟಿ,ರಮೇಶ ಬಾತವ್ವನವರ, ಶ್ರೀನಿವಾಸ ತಿಳವಳ್ಳಿ, ಕೆ.ಎಲ್.ಕಡಗಿ, ಅಂಜು ಹಮ್ಮಿಗಿ,ಅರವಿಂದ ಕುಲಕರ್ಣಿ ಸೇರಿದಂತೆ ಚಿಕ್ಕೇರೂರ. ಹಂಸಭಾವಿ.ಗ್ರಾಮಗಳ ಔಷಧ ವ್ಯಾಪಾರಸ್ಥರು, ಸಂಘದ ಸದಸ್ಯರು ಇದ್ದರು.