ಸಾರಾಂಶ
ಕನಿಷ್ಠ ವೇತನ₹ 15 ಸಾವಿರ ನಿಗದಿ ಮಾಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಬೇಕು. ಮೊಬೈಲ್ ಆಧಾರಿತ ಕೆಲಸ ಮಾಡಬೇಕೆಂಬ ಆದೇಶ ಕೈಬಿಡಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕನಿಷ್ಠ ವೇತನ₹ 15 ಸಾವಿರ ನಿಗದಿ ಮಾಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಸರ್ದಾರ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಪಂ ಕಚೇರಿಗೆ ಆಗಮಿಸಿ, ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹವು ಹಲವಾರು ಕಾರಣಗಳಿಂದ ಬರುತ್ತಿಲ್ಲ. ರಾಜ್ಯಸರ್ಕಾರದ ನಿಶ್ಚಿತ ಗೌರವಧನ ನಿಗದಿತ ರುಟೀನ್ ಚಟುವಟಿಕೆಗಳ ನಿಶ್ಚಿತ ಗೌರವಧನ ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧವನ್ನು ಒಟ್ಟು ಗೂಡಿಸಿ ಮಾಸಿಕ ₹15 ಸಾವಿರ ಗೌರವಧನ ನಿಗದಿಗೊಳಿಸಬೇಕು. ಹಲವಾರು ವರ್ಷಗಳಿಂದ ಆರ್‌ಸಿಎಚ್ ಪೋರ್ಟಲ್‌ನ ವಿವಿಧ ಸಮಸ್ಯೆಗಳ ಕಾರಣಗಳಿಂದ ಬಾಕಿ ಪ್ರೋತ್ಸಾಹಧನದ ಸರಾಸರ ಮೊತ್ತ ನೀಡುವಂತಾಗುತ್ತಿದೆ. ಜಿಲ್ಲೆ ಯ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ವರ್ಷಗಳಲ್ಲಿ ಇದುವರೆಗೆ ಪಾವತಿಯಾಗದಿರುವ ಎಎನ್‌ಸಿ, ಪಿಎನ್‌ಸಿ ಹಾಗೂ ಎಚ್‌ಬಿಎನ್‌ಇ, ಎಂಆರ್ 1 , ಎಂಆರ್ 2 ಪ್ರೋತ್ಸಾಹಧನವನ್ನು ಲೆಕ್ಕಾಚಾರ ಮಾಡಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್- 19ರ ವಿಶೇಷ ಪ್ರೋತ್ಸಾಹಧನ ನಾನ್ ಎಂಟಿಎಸ್ ₹ 2000 ಹಣ ಬಾರದಿರುವವರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಗೌರವಧನ ಇಲ್ಲದೇ ಪರೀಕ್ಷೆ ಮತ್ತು ಚುನಾವಣೆಗೆ ನಿಯೋಜನೆ ಮಾಡಬಾರದು. ಅನಗತ್ಯ ಸರ್ವೆ ಮತ್ತು ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ತೊಡಗಿಸಕೊಳ್ಳುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಬೇಕು. ಮೊಬೈಲ್ ಆಧಾರಿತ ಕೆಲಸ ಮಾಡಬೇಕೆಂಬ ಆದೇಶ ಕೈಬಿಡಬೇಕು ಎಂದು ಆಗ್ರಹಿಸಿದರು. ಪ್ರೋತ್ಸಾಹಧನ ಇಲ್ಲದೇ ನಮ್ಮನ್ನು ದುಡಿಸಿಕೊಳ್ಳಲಾಗುತ್ತಿದೆ. 3-4 ತಿಂಗಳ ನಿಗದಿತ ಗೌರವಧನ ಬಂದಿಲ್ಲ. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ ಎಂದು ಆರೋಪಿಸಿದರು.
ಹಲವು ಸಮಸ್ಯೆಗಳ ಕುರಿತು 3 ತಿಂಗಳಿಗೊಮ್ಮೆ ಜಿಲ್ಲಾಮಟ್ಟದಲ್ಲಿ ಆಶಾ ಕುಂದುಕೊರತೆ ಸಭೆ ಕರೆಯಬೇಕು. ಆದರೆ, ವರ್ಷಗಳಾದರೂ ಸಭೆ ಕರೆಯುತ್ತಿಲ್ಲ. ಹಲವಾರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ, ಅಧ್ಯಕ್ಷ ಲಕ್ಷ್ಮಣ ಜಡಗನ್ನವರ, ಸುಜಾತ ಕಾಡಮಠ, ರೂಪಾ ಎಂ.ಅಂಗಡಿ, ಗೀತಾ ರಾಯಗೋಳ, ಲತಾ ಜಾಧವ, ಲಕ್ಷ್ಮೀ ಕುರಬೇಟ, ಸುನಂದಾ ಕೋಳಿ ಮೊದಲಾದವರು ಪಾಲ್ಗೊಂಡಿದ್ದರು.-----------