ಶಾಸಕ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

| Published : Sep 21 2024, 01:52 AM IST

ಸಾರಾಂಶ

ಕಡೂರು, ಮಹಿಳೆಯರು ಮತ್ತು ದಲಿತ ಸಮುದಾಯ ಕುರಿತು ಅಸಭ್ಯವಾಗಿ ನಿಂದಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರ ರಾಜೀನಾಮೆ ಪಡೆದು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್ಸಿ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ಕಡೂರು

ಮಹಿಳೆಯರು ಮತ್ತು ದಲಿತ ಸಮುದಾಯ ಕುರಿತು ಅಸಭ್ಯವಾಗಿ ನಿಂದಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರ ರಾಜೀನಾಮೆ ಪಡೆದು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್ಸಿ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಸ್ಸಿ ವಿಭಾಗದ ಕಡೂರು ಬ್ಲಾಕ್ ಅಧ್ಯಕ್ಷ ಕೋಡಿಹಳ್ಳಿ ಶ್ರೀನಿವಾಸ್‍ನಾಯ್ಕ ಮಾತನಾಡಿ, ಸಂವಿಧಾನದ ಆಶಯದಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾದ ಮುನ್ನಿರತ್ನ ಮಹಿಳೆ ಯರನ್ನುಈರೀತಿ ಬಳಸಿಕೊಂಡಿರುವುದು, ಪರಿಶಿಷ್ಟ ಸಮುದಾಯಗಳಿಗೆ ಜನಾಂಗೀಯ ನಿಂದನೆ ಮಾಡಿರುವುದು ಅಪರಾಧವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುನಿರತ್ನ ಅವರು ದುರ್ವರ್ತನೆ ತೋರಿರುವುದು ಶೋಭೆ ತರುವಂತಹದ್ದಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂಧಿ ಕಲ್ಲೇಶ್. ಮುಖಂಡರಾದ ಚಿಕ್ಕಂಗಳ ಲಕ್ಷ್ಮಣ್, ಶ್ರೀಕಾಂತ್, ಕಂಸಾಗರ ಸೋಮಶೇಖರ್, ಶ್ರೀಕಂಠ ಒಡೆಯರ್. ರೇವಣ್ಣ, ಕೃಷ್ಣಪ್ಪ, ಮುಬಾರಕ್, ಬಿ.ಟಿ. ಚಂದ್ರಶೇಖರ್, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಕೆ.ವಿ.ಮಂಜುನಾಥ್, ಚಂದ್ರಪ್ಪ, ನಾಗಮ್ಮ, ಚೌಳಹಿರಿಯೂರು ಪ್ರಕಾಶ್ ಮತ್ತಿತರರು ಇದ್ದರು. 20ಕೆಕೆಡಿಯು2.

ಬಿಜೆಪಿ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನದ ರಾಜೀನಾಮೆ ಪಡೆದು ಗಡಿಪಾರು ಮಾಡಬೇಕೆಂದು ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಸ್ಸಿ ವಿಭಾಗದಿಂದ ಒತ್ತಾಯಿಸಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು.