ಜಗನ್ಸಿಂಗ್ ದಲ್ಲೇವಾಲ ರಕ್ಷಣೆ ನೀಡಲು ಆಗ್ರಹಿಸಿ ಪ್ರತಿಭಟನೆ

| Published : Jan 14 2025, 01:04 AM IST

ಜಗನ್ಸಿಂಗ್ ದಲ್ಲೇವಾಲ ರಕ್ಷಣೆ ನೀಡಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ರೈತ ಆಂದೋಲನದ ವೇಳೆ ನೀಡಿದ್ದ ಲಿಖಿತ ಭರವಸೆ ಈಡೇರಿಸುವಂತೆ ಆಗ್ರಹಿಸಿ ಕಳೆದ 48 ದಿನಗಳಿಂದಲೂ ಅಮರಣಾಂತ ಉಪವಾಸ ಕೈಗೊಂಡಿರುವ ರೈತ ನಾಯಕ ಜಗನ್ಸಿಂಗ್ ದಲೈವಾಲ ಅವರ ಪ್ರಾಣ ರಕ್ಷಣೆಗೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಜಗನ್ಸಿಂಗ್ ದಲೈವಾಲ ಅವರ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಐತಿಹಾಸಿಕ ರೈತ ಆಂದೋಲನದ ವೇಳೆ ನೀಡಿದ್ದ ಲಿಖಿತ ಭರವಸೆ ಈಡೇರಿಸುವಂತೆ ಆಗ್ರಹಿಸಿ ಕಳೆದ 48 ದಿನಗಳಿಂದಲೂ ಅಮರಣಾಂತ ಉಪವಾಸ ಕೈಗೊಂಡಿರುವ ರೈತ ನಾಯಕ ಜಗನ್ಸಿಂಗ್ ದಲೈವಾಲ ಅವರ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರವು ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವತ್ತ ಗಮನ ಹರಿಸಬೇಕು. ರೈತ ಆಂದೋಲನದ ವೇಳೆ ನೀಡಿದ್ದ ಭರವಸೆಯನ್ನು ಮರೆಯಬಾರದು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಯಿಂದ ಹೊರ ಬರಬೇಕು. ಕಳೆದ ಬಾರಿ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಮೀನಾ ಮೇಷ ಎಣಿಸಬಾರದು. ಅಲ್ಲದೆ ಜಗನ್ಸಿಂಗ್ದಲೈವಾಲ ಅವರಿಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಉಗ್ರ ನರಸಿಂಹೇಗೌಡ, ಹೊಸೂರು ಕುಮಾರ್, ನೇತ್ರಾವತಿ, ಹೊಸಕೋಟೆ ಬಸವರಾಜು ಸೇರಿದಂತೆ ಅನೇಕರು ಇದ್ದರು.ಡಿಕೆಶಿ ಟೀಕಿಸುವ ನೈತಿಕತೆ ಎಚ್ಡಿಕೆಗೆ ಇಲ್ಲ: ರಾಜೇಶ್ ಕಿಡಿಕನ್ನಡಪ್ರಭ ವಾರ್ತೆ ಮೈಸೂರು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮನಶಾಂತಿ, ಕುಟುಂಬ ಒಳಿತಿಗಾಗಿ ದೇವರ ಮೊರೆ ಹೋಗಿರುವುದನ್ನು ಟೀಕಿಸುವ ನೈತಿಕತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗಿಲ್ಲ ಎಂದು ಕಾಂಗ್ರೆಸ್ ನಗರ ವಕ್ತಾರ ಎಸ್. ರಾಜೇಶ್ ಕಿಡಿಕಾರಿದರು.ಎಚ್.ಡಿ. ಕುಮಾರಸ್ವಾಮಿ ಅವರು ಹಲಗೆವಡ್ಡೇರಹಳ್ಳಿ ಡಿನೋಟಿಫೀಕೇಷನ್ ಹಗರಣ ಮೊದಲಾದವುಗಳಲ್ಲಿ ಸಿಲುಕಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿಗೆ ನೀಡಿರುವ ಕೊಡುಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ, ಸಿದ್ದರಾಮಯ್ಯ ಅವರ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವೃಥಾ ಟೀಕೆ ಮಾಡುವುದನ್ನು ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.ಮುಖಂಡರಾದ ಶಿವಶಂಕರಮೂರ್ತಿ, ಕೇಶವ, ನಂಜುಂಡಸ್ವಾಮಿ, ಓಂಕಾರ್ ರವಿ ಇದ್ದರು.