ಉದ್ದಗಟ್ಟ ನೆರೆ ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ಪ್ರತಿಭಟನೆ

| Published : Nov 30 2024, 12:48 AM IST

ಉದ್ದಗಟ್ಟ ನೆರೆ ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ ಉದ್ದಗಟ್ಟ ಗ್ರಾಮದ ನೆರೆಹಾವಳಿ ಸಂತ್ರಸ್ತರಿಗೆ ಶೀಘ್ರ ಪುನರ್ವಸತಿ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ಸಂಘ ನೇತೃತ್ವದಲ್ಲಿ ಉದ್ದಗಟ್ಟ ಗ್ರಾಮದ ನೆರೆಹಾವಳಿ ಸಂತ್ರಸ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಹಾಗೂ ತಾಪಂ ಇಒ ಕೆಂಚಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಜಗಳೂರು

ತಾಲೂಕಿನ ಉದ್ದಗಟ್ಟ ಗ್ರಾಮದ ನೆರೆಹಾವಳಿ ಸಂತ್ರಸ್ತರಿಗೆ ಶೀಘ್ರ ಪುನರ್ವಸತಿ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ಸಂಘ ನೇತೃತ್ವದಲ್ಲಿ ಉದ್ದಗಟ್ಟ ಗ್ರಾಮದ ನೆರೆಹಾವಳಿ ಸಂತ್ರಸ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಹಾಗೂ ತಾಪಂ ಇಒ ಕೆಂಚಪ್ಪ ಅವರಿಗೆ ಮನವಿ ಸಲ್ಲಿಸಿದರು.

ಉದ್ದಗಟ್ಟ ನೆರೆ ಹಾವಳಿಯಿಂದ 20 ಕುಟುಂಬಗಳ ಮನೆಗಳಿಗೆ ನೆರೆ ಜೊತೆಗೆ ವಿಷಪೂರಿತ ಹಾವು, ಚೇಳು ಇತ್ಯಾದಿಗಳು ದಾಳಿಯಿಡುತ್ತಿವೆ. ಇದರಿಂದ ದೈನಂದಿನ ಜೀವನ ನಡೆಸಲು ಆತಂಕ, ತೊಂದರೆಯಾಗುತ್ತಿದೆ. ಅನಾಹುತವಾದರೆ ತಾಲೂಕು ಆಡಳಿತ ಹಾಗೂ ಸರ್ಕಾರವೇ ನೇರ ಹೊಣೆ. ಸದರಿ ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ಪುನರ್ವಸತಿ ಜಾಗವನ್ನು ಗುರುತಿಸಲಾಗಿದ್ದು, ಇದುವರೆಗೂ ವಿತರಣೆ ಆಗಿಲ್ಲ. ಕೂಡಲೇ ನೆರೆ ಹಾವಳಿ ಸಂತಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಚಿಕ್ಕಮಲ್ಲನಹೊಳೆ ಚಿರಂಜೀವಿ, ಹಸಿರು ಸೇನೆ ಅಧ್ಯಕ್ಷ ಕಸವನಹಳ್ಳಿ ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ತಾಲೂಕು ಉಪಾಧ್ಯಕ್ಷರಾದ ಸಹದೇವ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಕಾರ್ಯದರ್ಶಿ ಕಾನನಕಟ್ಟೆ ಅನಿಲ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಶರಣಪ್ಪ, ಮಾರನಾಯಕ್, ಉದ್ಗಟ್ಟ ಗ್ರಾಮದ ನೆರೆ ಸಂತ್ರಸ್ತರು ಭಾಗವಹಿಸಿದ್ದರು.

- - - -28ಜೆ.ಜಿ.ಎಲ್.2: