ತಾಲೂಕಿನಲ್ಲಿ ಸಾಗುವಳಿ ಮಾಡುತ್ತಿರುವವರ ಜಮೀನುಗಳನ್ನು ಜಿಪಿಎಸ್ ಮಾಡಬೇಕು ಹಾಗೂ ಜಿಪಿಎಸ್ ಆಗದ ಜಮೀನಿನಿಂದ ಸಾಗುವಳಿದಾರರ ಮೇಲೆ ಇಲಾಖೆಯವರು ಒಕ್ಕಲೆಬ್ಬಿಸಿಬಾರದೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ಮುಂದಾಳತ್ವದಲ್ಲಿ ಸೋಮವಾರ ಪಟ್ಟಣದ ಹಳಿಯಾಳ ಅರಣ್ಯ ವಿಭಾಗದ ಉಪ-ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕಿನಲ್ಲಿ ಸಾಗುವಳಿ ಮಾಡುತ್ತಿರುವವರ ಜಮೀನುಗಳನ್ನು ಜಿಪಿಎಸ್ ಮಾಡಬೇಕು ಹಾಗೂ ಜಿಪಿಎಸ್ ಆಗದ ಜಮೀನಿನಿಂದ ಸಾಗುವಳಿದಾರರ ಮೇಲೆ ಇಲಾಖೆಯವರು ಒಕ್ಕಲೆಬ್ಬಿಸಿಬಾರದೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ಮುಂದಾಳತ್ವದಲ್ಲಿ ಸೋಮವಾರ ಪಟ್ಟಣದ ಹಳಿಯಾಳ ಅರಣ್ಯ ವಿಭಾಗದ ಉಪ-ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಲಾಯಿತು.ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಅರಣ್ಯ ಜಮೀನು ಸಾಗುವಳಿದಾರರು ಘೋಷಣೆ ಕೂಗಿ ನ್ಯಾಯ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ(ಕೆಂಪು ಸೇನೆ) ರಾಜ್ಯ ಮುಖ್ಯಸ್ಥ ವಿ.ಬಿ. ರಾಮಚಂದ್ರ, ಅರಣ್ಯ ಜಮೀನನನ್ನು ಸಾಗುವಳಿ ಮಾಡುವ ರೈತರ ಜಮೀನು ಜಿಪಿಎಸ್ ಮಾಡಬೇಕೆಂದು ಆಗ್ರಹಿಸಿ 2017ರಿಂದಲೇ ನಾವು ಹೋರಾಟ ನಡೆಸುತ್ತಾ, ಒತ್ತಡ ಹೇರುತ್ತಾ ಬಂದರೂ ಸಾಕಷ್ಟು ಪ್ರಕರಣಗಳು ಹಾಗೆಯೇ ಬಾಕಿ ಉಳಿದಿವೆ. ಅದಕ್ಕಾಗಿ ಇಲಾಖೆಯ ಎದುರು ಹೋರಾಟ ಮಾಡಿ ಅವರಿಗೆ ಪ್ರಚಲಿತ ಸಮಸ್ಯೆಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಸಾಗುವಳಿದಾರರೆಲ್ಲರೂ ಧರಣಿಯನ್ನು ನಡೆಸಲು ತೀರ್ಮಾನಿಸಿದ್ದೆವೆ ಎಂದರು.
ತಾಲೂಕಿನಲ್ಲಿ 700ಕ್ಕೂ ಅಧಿಕ ಸಾಗುವಳಿದಾರರ ಜಮೀನುಗಳನ್ನು ಜಿಪಿಎಸ್ ಮಾಡದೇ ಬಿಡಲಾಗಿದೆ. ಮೇಲಾಗಿ ಇಲಾಖೆಯವರು ಜಿಪಿಎಸ್ ಮಾಡದ ಜಮೀನಿನಿಂದ ರೈತರನ್ನು ಒಕ್ಕಲೆಬ್ಬಿಸುವ ಅವರು ಬೆಳೆದ ಬೆಳೆಯನ್ನು ಹಾಳು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನಾಕಾರರ ಅಹವಾಲು ಆಲಿಸಲು ಬಂದ ಹಳಿಯಾಳ ಡಿಸಿಎಫ್ ಡಾ. ಪ್ರಶಾಂತಕುಮಾರ ಕೆ.ಸಿ. ಅವರಿಗೆ ಮನವಿ ಸಲ್ಲಿಸಲಾಯಿತು.ಎಸಿಎಫ್ ಮಾಜಿ ಬೀರಪ್ಪ, ವಲಯ ಅರಣ್ಯಾಧಿಕಾರಿ ಬಸವರಾಜ ಎಂ. ಹಾಗೂ ವಿವಿಧ ಇಲಾಖೆಯ ವಲಯ ಅರಣ್ಯಾಧಿಕಾರಿಗಳು, ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಇತರರು ಇದ್ದರು. ಪ್ರತಿಭಟನೆಯಲ್ಲಿ ಕೆಂಪು ಸೇನೆಯ ಪ್ರಮುಖರಾದ ಮಂಜುನಾಥ ಹಿರೇಮನಿ, ಬಸ್ತ್ಯಾಂವ್ ಡಿಸೋಜ, ರಾಘವೇಂದ್ರ ಚಲವಾದಿ, ಗೀತಾ ಒಡೆಯರ, ಮೀನಾಕ್ಷಿ ಇರಲಾ, ರಾಜು ಕುರುಬೂರ, ಗಣೇಶ ಅಂಬೋಳಿ, ಮಂಜುನಾಥ ಲಕ್ಕನಗೌಡ್ರ, ಪರಶುರಾಮ ಅಂಗಡಿ, ನಾಗರಾಜ ವಡ್ಡರ, ಚಂದ್ರಕಾಂತ ಅನ್ನೇನ್ನವರ, ಶಕೀಲ ಚೌಕಿದಾರ, ಅಶೋಕ ಕೇಸರೆಕರ, ನಾಗೇಂದ್ರ ಗೌಡಾ, ಜ್ಞಾನೇಶ್ವರ ಹರಿಜನ್, ಮಂಜುನಾಥ ಕಾಮ್ರೇಕರ, ಕಾಶಿನಾಥ ಪೋಪಳೆ, ನಾಗರಾಜ ಕಮ್ಮಾರ, ಸುರಶೇ ಪಾಟೀಲ ಹಾಗೂ ಇತರರು ಇದ್ದರು.