ವಾಣಿಜ್ಯ ಮಳಿಗೆಗಳನ್ನು ಮೀಸಲಾತಿ ಪ್ರಕಾರ ಹರಾಜು ಮಾಡುವಂತೆ ಆಗ್ರಹಿಸಿ ಅಹಿಂದ ಜನತಾ ಸಂಘ ಹಾಗೂ ಯುಥ್ ಫಾರ್ ಚೇಂಜ್ ವೇದಿಕೆಯಿಂದ ಡಂಬಳ ಗ್ರಾಪಂ ಮುಂದೆ ಬುಧವಾರ ಅಹೋರಾತ್ರಿ ಧರಣಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಡಂಬಳ
ವಾಣಿಜ್ಯ ಮಳಿಗೆಗಳನ್ನು ಮೀಸಲಾತಿ ಪ್ರಕಾರ ಹರಾಜು ಮಾಡುವಂತೆ ಆಗ್ರಹಿಸಿ ಅಹಿಂದ ಜನತಾ ಸಂಘ ಹಾಗೂ ಯುಥ್ ಫಾರ್ ಚೇಂಜ್ ವೇದಿಕೆಯಿಂದ ಡಂಬಳ ಗ್ರಾಪಂ ಮುಂದೆ ಬುಧವಾರ ಅಹೋರಾತ್ರಿ ಧರಣಿ ನಡೆಸಲಾಯಿತು.ಅಹಿಂದ ಜನತಾ ಸಂಘದ ಅಧ್ಯಕ್ಷ ಪ್ರಕಾಶ ಮೇಗೂರ ಮಾತನಾಡಿ, ಗ್ರಾಪಂ ವಾಣಿಜ್ಯ ಮಳಿಗೆ ಹಾಗೂ ಮನೆಗಳನ್ನು ಮೀಸಲಾತಿ ಪ್ರಕಾರ ಹಂಚಿಕೆ ಮಾಡಬೇಕು. ಕಳೆದ ಹಲವು ವರ್ಷಗಳಿಂದ ಹರಾಜು ಆಗಿರುವ ಮಳಿಗೆಗಳಲ್ಲಿ ಅಕ್ರಮವಾಗಿದ್ದು, ಅಧಿಕಾರಿಗಳ ಕುತಂತ್ರದಿಂದ ಹೊಸದಾಗಿ ಮಳಿಗೆಗಳನ್ನು ಹಂಚಿಕೆ ಮಾಡುವುದು ವಿಳಂಬವಾಗುತ್ತಿದೆ. ನಮಗೆ ನ್ಯಾಯ ಸಿಗುವ ತನಕ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 6 ತಿಂಗಳಿನಿಂದ ಈ ಕುರಿತು ಜಿಲ್ಲಾಧಿಕಾರಿ, ತಾಪಂ ಅಧಿಕಾರಿಗಳಿಗೆ ಹಾಗೂ ಇತರರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೇವಲ ನೆಪ ಮತ್ತು ಆಶ್ವಾಸನೆ ಮಾತ್ರ ನೀಡುತ್ತಾರೆ. ಹಾಗಾಗಿ ನಮಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯುತ್ತದೆ ಎಂದರು.ಅಹಿಂದ ಜನತಾ ಸಂಘದ ನಿದೇರ್ಶಕ ವೆಂಕಟೇಶ ಗದಗಿನ ಮಾತನಾಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ತಾಪಂ ಇಒ ವಿಜಯಕುಮಾರ ಬೆಣ್ಣಿ, ಎರಡು ದಿನ ಕಾಲಾವಕಾಶ ನೀಡಿ ನಿಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸುತ್ತೇವೆ. ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಹೋರಾಟಗಾರರು ಒಪ್ಪಲಿಲ್ಲ.ಸಂಘಟನೆಯ ಪದಾಧಿಕಾರಿಗಳಾದ ಮಂಜುನಾಥ ನರಗುಂದ, ಯಾಸೀನ ತಾಂಬೋಟಿ, ಶ್ರೀಕಾಂತ ಸಿರಗೇರಿ, ಭರಮಪ್ಪ ಮಂಗೋಜಿ, ರಾಜಾಭಕ್ಷಿ ಡಾಲಾಯತ, ಆಸೀಫ ತಾಂಬೋಟಿ, ಆದಿತ್ಯ ಗದಗಿನ, ಹರೀಶ ಯಲಬೋವಿ, ಗೋಪಾಲ ಗದಗಿನ, ಸಮೀರ ತಾಂಬೋಟಿ, ದಾವಲ ಬೆನಕೊಪ್ಪ, ಬುಡ್ನೆಸಾಬ ಜಲಾಲನವರ, ಪ್ರವೀಣ ಅಡವಿಸೋಮಾಪುರ, ಶಬ್ಬೀರ ನಮಾಜಿ, ಅರುಣ ಚಿಲಕವಾಡ, ಶ್ರೀಧರ ಮಾಳಗಿ, ಅನೀಸ್ ತಾಂಬೋಟಿ, ಸೋಹಿಲ್ ದೊಡ್ಡಮನಿ, ಸಂತೋಷ ಸೂರಟೂರ, ಮಂಜುನಾಥ ಮಂಗೋಜಿ, ಅರುಣು ಗುಡಿ, ನಿರಂಜನ ಪಟ್ಟಣಶೆಟ್ಟಿ, ರಫೀಕಸಾಬ್ ತಾಂಬೋಟಿ, ರಾಜೇಸಾಬ ಅತ್ತಾರ, ಮುನ್ನಾ ಹಳ್ಳಿಕೇರಿ, ಸಾಹೀಲ್ ದೊಡ್ಡಮನಿ, ಪಕ್ಕುರುಸಾಬ್ ನದಾಫ್, ಅಯ್ಯನ ಗದಗಿನ, ಶ್ರೀನಿವಾಸ ಉಪ್ಪಾರ, ರಾಜು ಬೀಕನಹಳ್ಳಿ, ಭೀಮಪ್ಪ ಬೇದವಟ್ಟಿ, ಅರುಣು ಚಿಲಕವಾಡ, ಮಕ್ತುಮಾ ಮಕಾಂದರ ಇತರರಿದ್ದರು.