ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ರದ್ಧತಿಗಾಗಿ ಪ್ರತಿಭಟನೆ

| Published : Nov 18 2025, 12:30 AM IST

ಸಾರಾಂಶ

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಏಳು ವರ್ಷಗಳ ಹಿಂದೆ ವಿಷ ಪ್ರಸಾದ ತಿಂದ ವಿವಿಧ ಗ್ರಾಮದ 17 ಜನ ಸಾವನಪ್ಪಿದ್ದಾರೆ.

ಕನ್ನಡ ಪ್ರಭ ವಾರ್ತೆ ಹನೂರು

ಸುಳ್ವಾಡಿ ವಿಷ ದುರಂತ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ವಿರುದ್ಧ ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಸಂತ್ರಸ್ತರಿಂದ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಏಳು ವರ್ಷಗಳ ಹಿಂದೆ ವಿಷ ಪ್ರಸಾದ ತಿಂದ ವಿವಿಧ ಗ್ರಾಮದ 17 ಜನ ಸಾವನಪ್ಪಿದ್ದಾರೆ. 150ಕ್ಕೂ ಹೆಚ್ಚು ವಿಷ ಪ್ರಸಾದ ತಿಂದ ಸಂತ್ರಸ್ತರು ಸಂಪೂರ್ಣವಾಗಿ ಗುಣಮುಖರಾಗದೆ ಭಾದಿತರಾಗಿ ಬಳಲುತ್ತಿರುವ ಪ್ರಕರಣದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಕಿರಿಯ ಸ್ವಾಮೀಜಿಯಾಗಿ ಇದ್ದ ವ್ಯಕ್ತಿ.

ಸುಳ್ಳಾಡಿ ಮಾರಮ್ಮನ ದೇವಾಲಯದಲ್ಲಿ ಭಕ್ತರಿಗೆ ವಿಷ ವಿಕ್ಕಿ ತಿಂದ ಪ್ರಸಾದದಿಂದ ಸಾವನ್ನಪ್ಪಿದ ಮಾರಮ್ಮನ ಭಕ್ತರು 150ಕ್ಕೆ ಹೆಚ್ಚು ಜನ ಭಾದಿತರಾಗಿ ಇನ್ನೂ ಸಹ ಗುಣಮುಖರಾಗದೆ ವಿವಿಧ ನೂನ್ಯತೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದರಿಂದ ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಷ ಪ್ರಸಾದ ಸಂತ್ರಸ್ತರಿಂದ ಭಾರಿ ವಿರೋಧ

ಶ್ರೀ ಕ್ಷೇತ್ರದಲ್ಲಿ ಮಲೆ ಮಾದೇಶ್ವರ ಬೆಟ್ಟ ಶ್ರೀ ಕ್ಷೇತ್ರದಲ್ಲಿ ವಿಷ ಪ್ರಸಾದ ತಿಂದ ಸಂತ್ರಸ್ತರು ಮಾರ್ಟಳ್ಳಿ, ಎಂಜಿ ದೊಡ್ಡಿ, ಬಿದರಳ್ಳಿ, ಸುಳ್ವಾಡಿ ಹಾಗೂ ವಿವಿಧ ಗ್ರಾಮಗಳ ನೂರಾರು ಸಂತ್ರಸ್ತರು ಮಲೆ ಮಾದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ಮೃತಪಟ್ಟವರ ಫೋಟೋ ಇರುವ ಬ್ಯಾನರ್ ಹಿಡಿದು ಮಲೆ ಮಾದೇಶ್ವರ ಬೆಟ್ಟದ ರಾಜಗೋಪುರದಿಂದ ವಿವಿಧೆಡೆ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಪಿ.ಜಿ. ಮಣಿ ಮಾತನಾಡಿ, ರಾಷ್ಟ್ರ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದ ಸುಳ್ಳಾಡಿ ವಿಷ ಪ್ರಸಾದದ ದುರಂತದಲ್ಲಿ ಮಡಿದಂತ 17 ಜನಕ್ಕೆ ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ನಿವೇಶನ ಹಾಗೂ ಜಮೀನು, ಪರಿಹಾರ ಸಮರ್ಪಕವಾಗಿ ಇನ್ನೂ ಸಹ ನೀಡಿಲ್ಲ. 150ಕ್ಕೂ ಹೆಚ್ಚು ಜನ ವಿಷ ಪ್ರಸಾದ ತಿಂದು ಕಳೆದ ಏಳು ವರ್ಷಗಳಿಂದ ಇನ್ನೂ ಸಹ ವಿವಿಧ ನೂನ್ಯತೆಗಳಿಂದ ಭಾದಿತರಾಗಿ ಸಂಕಷ್ಟದಲ್ಲಿರುವ ಸಂತ್ರಸ್ತರ ನೆರವಿಗೆ ಸರ್ಕಾರ ಶಾಶ್ವತ ಪರಿಹಾರ ನೀಡಿಲ್ಲ. ಜೊತೆಗೆ ಬಾಧಿತರು ಗುಣಮುಖರಾಗದೆ ಸಂಕಷ್ಟದಲ್ಲಿ ಇರುವ ಸಂತ್ರಸ್ತರಿಗೆ ಸರಿಯಾದ ಆರೋಗ್ಯ ಸೇವೆಗಳು ಸಹ ಸಿಗುತ್ತಿಲ್ಲ. ಆಹಾರ ಕಿಟ್ ಗಳನ್ನು ಸಹ ಸಕಾಲದಲ್ಲಿ ನೀಡದೆ

ಸಮಸ್ಯೆಯಾಗಿ ಉಳಿದಿರುವುದರಿಂದ ಇಂತಹ ಸಂದರ್ಭದಲ್ಲಿ ಇಮ್ಮಡಿ ಮಹದೇವಸ್ವಾಮಿಯವರಿಗೆ ಜಾಮೀನು ನೀಡಿರುವುದು ಭಾದಿತರಿಗೆ ಆತಂಕ ಕಾರಣವಾಗಿದೆ. ಹೀಗಾಗಿ ಅವರ ಜಾಮೀನು ರದ್ದುಗೊಳಿಸಿ ಸಂತ್ರಸ್ತರಿಗೆ ನೀಡಬೇಕಾಗಿರುವ ಪರಿಹಾರ, ನಿವೇಶನ ಮುಂತಾದ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಸಾಲೂರು ಮಠದ ಮುಂಭಾಗ ಪ್ರತಿಭಟನೆ:

ಮಲೆ ಮಾದೇಶ್ವರ ಬೆಟ್ಟದ ರಾಜಗೋಪುರದಿಂದ ಹೊರಟಂತ ಮೆರವಣಿಗೆ ವಿಷ ಪ್ರಸಾದದ ಸಂತ್ರಸ್ತರು ಸಾಲೂರು ಮಠದ ಮುಂಭಾಗ ತೆರಳಿ ಇಮ್ಮಡಿ ಮಹದೇವಸ್ವಾಮಿ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಇಮ್ಮಡಿ ಮಹದೇವಸ್ವಾಮಿಯವರ ಜಾಮೀನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪೆದ್ದನ ಪಾಳ್ಯ, ಮಣಿ ಹಾಗೂ ಷಣ್ಮುಖ, ಶಿವರಾಜ್ ಕುಮಾರ್, ರಾಜಮ್ಮ ಸೇರಿದಂತೆ ಬಿದರಳ್ಳಿ ಎಂಜಿ ದೊಡ್ಡಿ, ಮಾರ್ಟಳ್ಳಿ ಹಾಗೂ ವಿವಿಧ ಗ್ರಾಮದ ಮಹಿಳೆಯರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮನವಿ ಸಲ್ಲಿಸಿದ ಸಂತ್ರಸ್ತರು:

ಮಲೆ ಮಾದೇಶ್ವರ ಬೆಟ್ಟದಲ್ಲಿ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿ ಮಹದೇಶ್ವರ ಬೆಟ್ಟ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಅವರಿಗೆ ಸಂತ್ರಸ್ತರು ಮನವಿ ಸಲ್ಲಿಸಿದರು.

------------

17ಸಿಎಚ್‌ಎನ್‌12

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಮ್ಮಡಿ ಮಹದೇವಸ್ವಾಮಿ ವಿರುದ್ಧ ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರಿಂದ ಭಾರಿ ಪ್ರತಿಭಟನೆ ನಡೆಯಿತು.