ಸಾರಾಂಶ
ಕನ್ನಡಪ್ರಭ ವಾರ್ತೆ ಮುನವಳ್ಳಿ ಶಿಂದೋಗಿ ಕ್ರಾಸ್‌ನಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯ ಸೈಪನ್ ಒಡೆದು ಎರಡು ವರ್ಷ ಕಳೆದರು ದುರಸ್ತಿ ಮಾಡದ ಹಿನ್ನಲೆಯಲ್ಲಿ ಸೋಮವಾರ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಬಿಜೆಪಿ ಮುಖಂಡ ವಿರೂಪಾಕ್ಷಿ ಮಾಮನಿ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಸ್ತೆ ಬಂದ್ ಆಗಿದ್ದರಿಂದ ಕೆಲಕಾಲ ಪ್ರಯಾಣಿಕರು ಪರದಾಡಬೇಕಾಯಿತು.
ಕನ್ನಡಪ್ರಭ ವಾರ್ತೆ ಮುನವಳ್ಳಿ
ಶಿಂದೋಗಿ ಕ್ರಾಸ್‌ನಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯ ಸೈಪನ್ ಒಡೆದು ಎರಡು ವರ್ಷ ಕಳೆದರು ದುರಸ್ತಿ ಮಾಡದ ಹಿನ್ನಲೆಯಲ್ಲಿ ಸೋಮವಾರ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಬಿಜೆಪಿ ಮುಖಂಡ ವಿರೂಪಾಕ್ಷಿ ಮಾಮನಿ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಸ್ತೆ ಬಂದ್ ಆಗಿದ್ದರಿಂದ ಕೆಲಕಾಲ ಪ್ರಯಾಣಿಕರು ಪರದಾಡಬೇಕಾಯಿತು.ಬಳಿಕ ಬಿಜೆಪಿ ನಾಯಕ ಮಾಂತೇಶ ಕವಟಗಿಮಠ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ನೀರಾವರಿ ನಿಗಮದ ಎಂಡಿ ಹಾಗೂ ಮುಖ್ಯ ಎಂಜಿನಿಯರ್‌ಗಳೊಂದಿಗೆ ಮಾತನಾಡಿದರು. ಇಗಾಗಲೇ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳಿಂದ ಅಂದಾಜು ವರದಿ ತಯಾರಿಸಿದ್ದು, ಇನ್ನು15 ದಿನದಲ್ಲಿ ₹ 9.5 ಕೋಟಿಯ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು.ಒಂದು ವೇಳೆ 15 ದಿನದಲ್ಲಿ ಟೆಂಡರ್ ಅಥವಾ ಕಾಮಗಾರಿ ಪ್ರಾರಂಭವಾಗದಿದ್ದರೆ ಧಾರವಾಡದ ಎಂಡಿಯವರ ಆಫೀಸ್ ಮುಂದೆ ರೈತರ ಸಹಯೋಗದಲ್ಲಿ ಧರಣಿ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟರು.
ಶಿಂದೋಗಿ, ಯಕ್ಕೇರಿ, ಹಿರೂರ, ಹಳ್ಳೂರ, ಬಂಡಾರಹಳ್ಳಿ, ತೆರೆದಕೊಪ್ಪ, ಬೊಚಬಾಳ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ವಿರೂಪಾಕ್ಷಿ ಮಾಮನಿ, ಜಗದೀಶ ಕೌಜಗೇರಿ, ಉಮೇಶ ದಂಡಿನ, ಶಿವಾನಂದ ಮೇಟಿ, ಸುಭಾಸ ಗಿದಿಗೌಡ, ಸಾವಿರಾರು ಎಕರೆ ಹೊಲಗಳಿಗೆ ಈ ಸೈಪನ್‌ನಿಂದ ರೈತರಿಗೆ ನೀರು ಒದಗಿಸಲಾಗುತ್ತಿತ್ತು. ಈ ಸೈಪಾನ್ ಒಡೆದಿದ್ದರಿಂದ ಎರಡು ವರ್ಷದಿಂದ ರೈತರ ಹೊಲಗಳಿಗೆ ನೀರು ಇಲ್ಲದೆ ಸರಿಯಾಗಿ ಬೆಳೆ ಇಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸೈಪನ್ ದುರಸ್ತಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ರೈತರು ಮನವಿ ಸಲ್ಲಿಸಿದ್ದರು. ಆದರೂ, ಅಧಿಕಾರಿಗಳು ಕ್ಯಾರೆ ಅಂದಿರಲಿಲ್ಲ. ಆದ ಕಾರಣ ಇಂದು ಈ ಪ್ರತಿಭಟನೆ ಕೈಗೊಳ್ಳಬೇಕಾಯಿತು ಎಂದರು.ಬಿಜಿಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ತಾಲೂಕ ಅಧ್ಯಕ್ಷ ಈರಣ್ಣ ಚಂದರಗಿ, ರಮೇಶ ಗೋಮಾಡಿ, ಶೇಖರ ಗೋಕಾಂವಿ, ಮಾಂತೇಶ ಕುರಬಟ್ಟಿ, ಸುರೇಶ ಕುರಬಟ್ಟಿ, ಮಲ್ಲಿಕಾರ್ಜುನ ರಡರಟ್ಟಿ, ಸುರೇಶ ಅಮಠೆ, ಮಡಿವಾಳಯ್ಯ ಹಿರೇಮಠ, ಅನೀಲ ಕದಂ, ಅಪ್ಪು ನುಗ್ಗಾನಟ್ಟಿ, ನೀರಾವರಿ ಇಲಾಖೆಯ ಅಧಿಕಾರಿಗಳಾದ ಮುದಿಗೌಡ್ರ ಹಾಗೂ ಇತರರು ಉಪಸ್ಥಿತರಿದ್ದರು. ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ದರ್ಮಟ್ಟಿ, ಪಿಎಸ್ಐ ಆನಂದ್ ಕೂಡ ಹಾಜರಿದ್ದರು.
;Resize=(128,128))
;Resize=(128,128))