ಅನಂತಮೂರ್ತಿ ಹೆಗಡೆ ಕ್ಷಮೆ ಯಾಚಿಸದಿದ್ದರೆ ಪ್ರತಿಭಟನೆ: ವಿ.ಎನ್. ನಾಯ್ಕ ಬೇಡ್ಕಣಿ

| Published : Feb 06 2025, 11:46 PM IST

ಅನಂತಮೂರ್ತಿ ಹೆಗಡೆ ಕ್ಷಮೆ ಯಾಚಿಸದಿದ್ದರೆ ಪ್ರತಿಭಟನೆ: ವಿ.ಎನ್. ನಾಯ್ಕ ಬೇಡ್ಕಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ವರ್ಷಗಳ ಹಿಂದೆ ಅನಂತಮೂರ್ತಿ ಹೆಗಡೆ ಎಂಬ ಹೆಸರನ್ನೇ ನಾವು ಕೇಳಿರಲಿಲ್ಲ. ದಿಢೀರ್‌ ಆಗಿ ಶಾಸಕ ಆಗಬೇಕು, ಎಂಪಿ ಆಗಬೇಕು, ಜನಪ್ರತಿನಿಧಿಯಾಗಬೇಕು ಎಂಬ ಆತುರದಲ್ಲಿ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ವಿ.ಎನ್. ನಾಯ್ಕ ಬೇಡ್ಕಣಿ ತಿಳಿಸಿದರು.

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಕುರಿತು ಬಿಜೆಪಿ ಪ್ರಮುಖ ಅನಂತಮೂರ್ತಿ ಹೆಗಡೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಈ ಹೇಳಿಕೆ ಕುರಿತು ಅವರು ಕ್ಷಮೆ ಯಾಚಿಸದಿದ್ದಲ್ಲಿ ನಾವು ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಪ್ರಮುಖ ವಿ.ಎನ್. ನಾಯ್ಕ ಬೇಡ್ಕಣಿ ಎಚ್ಚರಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ಅನಂತಮೂರ್ತಿ ಹೆಗಡೆ ಎಂಬ ಹೆಸರನ್ನೇ ನಾವು ಕೇಳಿರಲಿಲ್ಲ. ದಿಢೀರ್‌ ಆಗಿ ಶಾಸಕ ಆಗಬೇಕು, ಎಂಪಿ ಆಗಬೇಕು, ಜನಪ್ರತಿನಿಧಿಯಾಗಬೇಕು ಎಂಬ ಆತುರದಲ್ಲಿ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೇನು ಪ್ರಥಮವಲ್ಲ. ಆದರೆ ಈ ಸಾರಿ ರಾಜ್ಯದ 224 ಶಾಸಕರ ಮೇಲೆ ಆರೋಪ ಮಾಡಿದ್ದಾರೆ. ಈ ರಾಜ್ಯದ ಜನತೆ ಇಟ್ಟಂತ ವಿಶ್ವಾಸವನ್ನು ಪ್ರಶ್ನಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಆರ್. ನಾಯ್ಕ, ಘಟಕ ಅಧ್ಯಕ್ಷ ಮಾರುತಿ ಕಿಂದ್ರಿ, ಪಪಂ ನಾಮನಿರ್ದೇಶಿತ ಸದಸ್ಯರಾದ ಕೆ.ಟಿ. ಹೊನ್ನೆಗುಂಡಿ, ಕಿರಣ ಕಾನಡೆ, ಮುಖಂಡರಾದ ಸೀತಾರಾಮ ಗೌಡ, ಉಮೇಶ ನಾಯ್ಕ ಕಡಕೇರಿ, ಬಾಲಕೃಷ್ಣ ನಾಯ್ಕ, ನಟರಾಜ ಜಿಡ್ಡಿ, ಅಣ್ಣಪ್ಪ ನಾಯ್ಕ ಶಿರಳಗಿ ಮುಂತಾದವರಿದ್ದರು.9ರಂದು ಕುಮಟಾದಲ್ಲಿ ಉಚಿತ ಮೆಗಾ ಆರೋಗ್ಯ ಶಿಬಿರ

ಕುಮಟಾ: ಕುಮಟಾ ಲಯನ್ಸ ಕ್ಲಬ್ ಸ್ಥಾಪನೆಗೊಂಡು ೪೯ ವರ್ಷಗಳಾಗಿ ಸುವರ್ಣ ಮಹೋತ್ಸವ ವರ್ಷದ ಹೊಸ್ತಿಲಲ್ಲಿದ್ದು, ಈ ಪ್ರಯುಕ್ತ ಸಾವಿರಾರು ಜನರಿಗೆ ಪ್ರಯೋಜನಕಾರಿಯಾಗುವಂತೆ ವಿಶೇಷ ಮೆಗಾ ಅರೋಗ್ಯ ಶಿಬಿರವನ್ನು ಪಟ್ಟಣದ ಗಿಬ್ ಆರ್.ಪಿ. ಹಾಲ್‌ನಲ್ಲಿ ಫೆ. ೯ರಂದು ಬೆಳಗ್ಗೆ ೯.೩೦ರಿಂದ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಮಂಗಲಾ ನಾಯಕ ತಿಳಿಸಿದರು.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಂಗಳೂರಿನ ಕುಂಟಿಕಾನದ ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಹಯೋಗದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಯಾವುದೇ ಆರೋಗ್ಯ ಸಮಸ್ಯೆಗೆ ಉಚಿತ ತಪಾಸಣೆ ಹಾಗೂ ಸಲಹೆ ನೀಡಲಾಗುವುದು. ಶಿಬಿರಾರ್ಥಿಗಳು ತಮ್ಮ ಆರೋಗ್ಯ ಕುರಿತ ಹಿಂದಿನ ವೈದ್ಯಕೀಯ ತಪಾಸಣೆ ಹಾಗೂ ಸಲಹೆಯ ದಾಖಲೆಗಳಿದ್ದರೆ ತರಬಹುದು ಎಂದರು.ಲಯನ್ ಎಚ್.ಎನ್. ನಾಯ್ಕ ಮಾತನಾಡಿ, ತಜ್ಞ ವೈದ್ಯರು ಶಿಬಿರದಲ್ಲಿ ಕ್ಯಾನ್ಸರ್ ಮುಂತಾದ ಕುರಿತು ಜಾಗೃತಿ- ಮಾಹಿತಿ ನೀಡಲಿದ್ದಾರೆ. ಇಸಿಜಿ, ಆರ್‌ಬಿಎಸ್, ಬಿಪಿ ತಪಾಸಣೆ ಜತೆಗೆ ಕ್ಯಾನ್ಸರ್ ರೋಗ ಪತ್ತೆಗಾಗಿ ಮ್ಯಾಮೋಗ್ರಫಿ, ಪಿಎಪಿ ಸ್ಮೀಯರ್ ಇನ್ನಿತರ ಟೆಸ್ಟಗಳನ್ನು ಉಚಿತವಾಗಿ ಮಾಡಿಕೊಡಲಾಗುವುದು. ೩೦ಕ್ಕೂ ಹೆಚ್ಚು ನುರಿತ ತಜ್ಞರು, ಸಿಬ್ಬಂದಿ ತಪಾಸಣೆ ನಡೆಸಿಕೊಡಲಿದ್ದಾರೆ. ಲಘು ಉಪಹಾರ ವ್ಯವಸ್ಥೆಯೂ ಇದೆ ಎಂದರು.ಎಜೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಂಕುರ ಸಾವಂತ, ಲಯನ್ಸ್ ಮಾಜಿ ಡಿಸ್ಟ್ರಿಕ್ಟ್‌ ಗವರ್ನರ್ ಡಾ. ಗಿರೀಶ ಕುಚಿನಾಡ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಪದಾಧಿಕಾರಿಗಳಾದ ಎಸ್.ಎಸ್. ಹೆಗಡೆ, ಎಂ.ಕೆ. ಶಾನಭಾಗ, ಆನಂದ ಹೆಗಡೆ, ವಿಷ್ಣು ಪಟಗಾರ, ಗಣೇಶ ನಾಯ್ಕ ಇದ್ದರು.