ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ೧೯ರಂದು ಬೃಹತ್ ಹೋರಾಟ

| Published : Sep 12 2024, 01:54 AM IST

ಸಾರಾಂಶ

ಒಳ ಮೀಸಲಾತಿ ಜಾರಿ ಮಾಡುವುದರ ಕುರಿತು ಸುಪ್ರೀಂ ಕೋರ್ಟಿನ ತೀರ್ಪು ಉಲ್ಲೇಖಿಸಿ, ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಸೆ. ೧೯ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲು ಹಾವೇರಿಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಜಿಲ್ಲಾ ಮಾದಿಗರ ಸಮಾಜದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಾವೇರಿ: ಒಳ ಮೀಸಲಾತಿ ಜಾರಿ ಮಾಡುವುದರ ಕುರಿತು ಸುಪ್ರೀಂ ಕೋರ್ಟಿನ ತೀರ್ಪು ಉಲ್ಲೇಖಿಸಿ, ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಸೆ. ೧೯ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲು ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ಜಿಲ್ಲಾ ಮಾದಿಗರ ಸಮಾಜದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸೆ. ೧೯ರಂದು ಹಾವೇರಿಯ ಶ್ರೀ ಮುರುಘಾಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ನೂರಾರು ಹಲಗೆಗಳನ್ನು ಬಾರಿಸುತ್ತ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಎಲ್ಲ ಶಾಸಕರಿಗೂ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡ ತರಲು ಮನವಿ ಸಲ್ಲಿಸಲಾಗುವುದು. ಈ ಹೋರಾಟದಲ್ಲಿ ಜಿಲ್ಲೆಯಾದ್ಯಂತ ಸಾವಿರಾರು ಜನರನ್ನು ಸೇರಿಸಲು ನಿರ್ಧಾರ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಸಮಾಜದ ಮುಖಂಡರು ಭಾಗವಹಿಸಿ, ಸಲಹೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾದಿಗ ಸಮಾಜದ ವತಿಯಿಂದ ಹಾವೇರಿ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ರಾಮು ಮಾಳಗಿ ಹಾಗೂ ಬ್ಯಾಡಗಿ ಪುರಸಭೆಗೆ ಉಪಾದ್ಯಕ್ಷರಾಗಿ ಆಯ್ಕೆಯಾದ ಸುಭಾಸ್ ಡಿ. ಮಾಳಗಿ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಹಿರಿಯರಾದ ಡಿ.ಎಸ್. ಮಾಳಗಿ, ಪರಮೇಶ್ವರಪ್ಪ ಮೆಗಳಮನಿ, ಗವಿಸಿದ್ದಪ್ಪ ದ್ಯಾಮಣ್ಣನವರ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಅಶೋಕ್ ಮರಿಯಣ್ಣನವರ, ಮಾಲತೇಶ ಯಲ್ಲಾಪುರ, ಎಂ. ಆಂಜನೇಯ, ಕೃಷ್ಣ ಕರ್ಜಗಿ, ನಾಗರಾಜ ಹಾವನೂರ, ವಿಜಯಕುಮಾರ ಮಾಳಗಿ, ರಾಮು ಮಾಳಗಿ, ಮೈಲಪ್ಪ ದಾಸಪ್ಪನವರ, ಸಂತೋಷ ಗುಡ್ಡಪ್ಪನವರ, ರಮೇಶ ಜಾಲಿಹಾಳ, ಸುಭಾಸ್ ಬೆಂಗಳೂರು, ಶಿವಾನಂದ ನಾಗಮ್ಮನವರ, ಆನಂದ ಮರದೆಪ್ಪನವರ್, ರಾಜು ಮಾದರ, ನವೀನ್ ಸಿದ್ದಣ್ಣನವರ, ಹೋನಪ್ಪ ಮಾಳಗಿ, ಪ್ರೇಮಾ ಕಲಕೇರಿ, ರಾಮು ಗಾಳೆಪ್ಪನವರ, ಮಲ್ಲೇಶ ಯಲ್ಲೂರು, ಮುತ್ತುರಾಜ ಮಾದರ, ಫಕ್ಕಿರೇಶ್ ಕಡಕೋಳ, ಸುನೀಲ್ ದಂಡೆಮನವರ್ ಇತರರಿದ್ದರು.