ಸಾರಾಂಶ
ರೈತರ ಸಂಪೂರ್ಣ ಸಾಲ ಮನ್ನಾ, ಡಾ.ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ಡಿ.16ರಂದು ಸುವರ್ಣಸೌಧ ಎದುರು ಒಂದು ಲಕ್ಷಕ್ಕೂ ಅಧಿಕ ರೈತರೊಂದಿಗೆ ರಾಜ್ಯ ರೈತ ಸಂಘ ಏಕೀಕರಣದಿಂದ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ರೈತರ ಸಂಪೂರ್ಣ ಸಾಲ ಮನ್ನಾ, ಡಾ.ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ಡಿ.16ರಂದು ಸುವರ್ಣಸೌಧ ಎದುರು ಒಂದು ಲಕ್ಷಕ್ಕೂ ಅಧಿಕ ರೈತರೊಂದಿಗೆ ರಾಜ್ಯ ರೈತ ಸಂಘ ಏಕೀಕರಣದಿಂದ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.ಸೋಮವಾರ ಗುರ್ಲಾಪೂರ ಪ್ರವಾಸ ಮಂದಿರದಲ್ಲಿ ಜರುಗಿದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಕ್ಕರೆ ಕಾರ್ಖಾನೆಗಳಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪ್ರತಿ ಟನ್‌ಗೆ ಎಥೆನಾಲ್ ಹಾಗೂ ಅಬಕಾರಿ ಇಲಾಖೆಯಿಂದ ₹6 ಸಾವಿರ ಸಂದಾಯವಾಗುತ್ತಿದ್ದು, ಆ ತೆರಿಗೆ ಹಣದಲ್ಲಿ ರೈತರಿಗೆ ಒಂದು ಟನ್‌ಗೆ ಸರ್ಕಾರದಿಂದ ₹2 ಸಾವಿರ ಹಾಗೂ ಕಾರ್ಖಾನೆಗಳಿಂದ ₹4 ಸಾವಿರ ನೀಡಬೇಕೆಂಬ ಬೇಡಿಕೆ ಇದೆ. ಹಾಗಾಗಿ ಸರ್ಕಾರ ಕಬ್ಬು ಬೆಳೆಗಾರರಿಗೆ ಸ್ಪಂದಿಸಿ ಕೂಡಲೇ ಈ ಎರಡು ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ರಾಜು ಪವರ್, ತಾಲೂಕಾಧ್ಯಕ್ಷ ಈರಣ್ಣ ಸಸಾಲಟ್ಟಿ,ಮುಖಂಡರಾದ ಪ್ರಭು ತೇರದಾಳ, ವಾಸು ಪಂಡ್ರೋಳಿ, ಪದ್ಮನ್ನ ಉಂದ್ರಿ, ರವೀಂದ್ರ ನುಚ್ಚುಂಡಿ, ಅಪ್ಪಯ್ಯ ಕಿಲಾರಿ, ನಂದೇಪ್ಪ ನೇಸೂರ, ಶಿವಲಿಂಗ ಮುಲಿಮನಿ, ಈರಣ್ಣ ಪಾಟೀಲ, ಲಕ್ಕಪ್ಪ ಖಣದಾಳಿ ಇದ್ದರು.