ಶಿಕ್ಷಕರ ಕೊರತೆ ನೀಗಿಸುವಂತೆ ಪ್ರತಿಭಟನೆ

| Published : Jun 27 2024, 01:04 AM IST

ಶಿಕ್ಷಕರ ಕೊರತೆ ನೀಗಿಸುವಂತೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ವರ್ಷಗಳಿಂದ ಶಿಕ್ಷಕರ ಕೊರತೆ ಅನುಭವಿಸುತ್ತಿರುವ ತಾಲೂಕಿನ ಚಿಕ್ಕರೂಗಿ ಸರ್ಕಾರಿ ಪ್ರೌಢಶಾಲೆಗೆ ಪೋಷಕರು ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಅನೇಕ ವರ್ಷಗಳಿಂದ ಶಿಕ್ಷಕರ ಕೊರತೆ ಅನುಭವಿಸುತ್ತಿರುವ ತಾಲೂಕಿನ ಚಿಕ್ಕರೂಗಿ ಸರ್ಕಾರಿ ಪ್ರೌಢಶಾಲೆಗೆ ಪೋಷಕರು ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ತಾಲೂಕಿನ ಚಿಕ್ಕರೂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣ ಕುಂಠಿತವಾಗಿದೆ. ಹಲವು ವರ್ಷಗಳಿಂದ ಎಂ.ಎಂ.ಸಾಲೋಟಗಿ ಕ್ಲರ್ಕ್ ಅನಧಿಕೃತ ಗೈರು ಹಾಜರಿ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕೊರತೆ ಅನುಭವಿಸುತ್ತಿರುದನ್ನು ಗಮನಿಸಿ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಕಾರಣ ಪೋಷಕರು ಶಾಲೆಯ ಮುಂದೆ ವಿದ್ಯಾರ್ಥಿಗಳ ಜೊತೆಗೂಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸ್ಥಳಕ್ಕೆ ಬಿಇಒ ಭೇಟಿ:

ತಾಲೂಕಿನ ಚಿಕ್ಕರೂಗಿ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿರುವ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅವರು ಭೇಟಿ ಮಾಡಿ ಸಮಸ್ಯೆ ಆಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ ಕಾರಣ ಪ್ರತಿಭಟನೆ ಕೈ ಬಿಡಲಾಯಿತು.ನಂತರ ವಿದ್ಯಾರ್ಥಿಗಳಿಗೆ ಸ್ವತಃ ತಾವೇ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಬಿಇಒ ಕಚೇರಿ ಅಧೀಕ್ಷಕ ಸಂತೋಷ ಬಂದೆ, ಬಿ.ಆರ್.ಪಿ ಗಳಾದ ಎಫ್.ಆರ್.ಕಾಚೂರ, ವೈ.ಎಂ.ಬಿರಾದಾರ, ಪ್ರ.ದ.ಸಾ ಶ್ರೀಕಾಂತ ಹೂನಳ್ಳಿ, ಗ್ರಾಪಂ ಅಧ್ಯಕ್ಷ ಸಿದ್ದಗೊಂಡಪ್ಪಗೌಡ ಪಾಟೀಲ, ಉಪಾಧ್ಯಕ್ಷ ಅಶೋಕ ರತ್ನಾಕರ, ಸದಸ್ಯರಾದ ವಿಶ್ವನಾಥ್ ಚಂಡಕಿ, ದೇವಾನಂದ ಕಣ್ಣಿ, ವಿಠ್ಠಲಗೌಡ ಬಿರಾದಾರ, ಶಶಿಕಾಂತ್ ಚಂಡಕಿ, ಮುಖಂಡರಾದ ರವಿ ಪೂಜಾರಿ, ರಮೇಶ ಬನಸೋಡೆ, ಅಣ್ಣಾರಾಯ ರೊಟ್ಟಿ ,ಮಲ್ಕಣ್ಣ ಕಣಮೇಶ್ವರ, ಬಸವರಾಜ ಕುಂಬಾರ, ಮಲ್ಲೇಶಿ ಮಾಶಾಳ, ರಾವುತ್ ಕನ್ನೊಳ್ಳಿ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.