ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ: ಶಾಸಕ ವಜ್ಜಲ

| Published : Feb 05 2024, 01:54 AM IST

ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ: ಶಾಸಕ ವಜ್ಜಲ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ನಿಲಯದಲ್ಲಿರುವ ಮಕ್ಕಳಿಗೆ ಉತ್ತಮ ಆಹಾರ, ಶುದ್ಧ ಕುಡಿವ ನೀರು ಸೇರಿ ಸಮರ್ಪಕವಾಗಿ ಮೂಲಭೂತ ಸೌಲಭ್ಯ ನೀಡಬೇಕೆಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಶಾಸಕ ವಜ್ಜಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಸರ್ಕಾರ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದೆ ಎಂದು ಲಿಂಗಸಗೂರ ಶಾಸಕ ಮಾನಪ್ಪ.ಡಿ ವಜ್ಜಲ್ ಹೇಳಿದರು.

ಪಟ್ಟಣದ ನೂತನ ವಸತಿ ನಿಲಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ

ಮಾತನಾಡಿ, ಅದರಲ್ಲಿ ವಸತಿ ನಿಲಯದ ಯೋಜನೆ ಕೂಡ ಒಂದು. ವಸತಿ ನಿಲಯದಲ್ಲಿರುವ ಮಕ್ಕಳಿಗೆ ಉತ್ತಮ ಆಹಾರ, ಶುದ್ಧ ಕುಡಿವ ನೀರು ಸೇರಿ ಸಮರ್ಪಕವಾಗಿ ಮೂಲಭೂತ ಸೌಲಭ್ಯ ನೀಡಬೇಕೆಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಶಾಸಕ ವಜ್ಜಲ ಸೂಚಿಸಿದರು.

ಕಲ್ಯಾಣ ಕರ್ನಾಟಕದ ಮೈಕ್ರೋ ಅನುದಾನದಡಿ ವಸತಿ ನಿಲಯ ನಿರ್ಮಿಸಲಾಗಿದೆ. ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ಆರಂಭಿಸಲಾಗಿತ್ತು. ಈಗ ಸರ್ಕಾರ ಸ್ವಂತ ಕಟ್ಟಡ ನಿರ್ಮಿಸಿಕೊಡುವ ಮೂಲಕ ಶೈಕ್ಷಣಿಕಾ ಭಿವೃದ್ಧಿಗೆ ಅವಕಾಶ ಕಲ್ಪಿಸಿದೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದು ವಿದ್ಯಾವಂತರಾಗಿ ಉತ್ತಮ ನಾಗರಿಕರಾಗಬೇಕೆಂದರು.

ಸರ್ಕಾರದ ನಿಯಮಾನುಸಾರ ಇಲಾಖೆ ಅಧಿಕಾರಗಳು ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಸಬೇಕೆಂದು ಸೂಚಿಸಿದರು. ಆದರೆ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆ ವಿನಃ ದುರುಪಯೋಗ ಪಡಿಸಿಕೊಂಡರೆ ನಿಮ್ಮ ಜೊತೆಗೆ ಇರುವ ವಿದ್ಯಾರ್ಥಿಗಳ ಬಾಳು ಕೆಡಿಸಿದಂತಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವೇದಿಕೆ ಮೇಲೆ ತಹಸೀಲ್ದಾರ್‌ ಶಂಶಾಲಂ, ಇಒ ಅಮರೇಶ ಯಾದವ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಬಿ.ವೈ. ವಾಲ್ಮೀಕಿ, ತಾಲೂಕು ಬಿಸಿಎಂ ಅಧಿಕಾರಿ ರಮೇಶ ರಾಠೋಡ, ಬಿಜೆಪಿ ತಾಲೂಕು ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಗಿರಿಮಲ್ಲನಗೌಡ ಕರಡಕಲ್ಲ, ಮುದಗಲ್ ಘಟಕ ಅಧ್ಯಕ್ಷ ಸಣ್ಣ ಸಿದ್ದಯ್ಯ, ಮುಖಂಡರಾದ ಮಲ್ಲಪ್ಪ ಮಾಟೂರ, ಕರಿಯಪ್ಪ ಯಾದವ, ಸೇರಿ ಇನ್ನಿತರರು ಇದ್ದರು.