ಹೇಮಾವತಿ ಒಕ್ಕಲಿಗರ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಷ್ಟೇ ಜಾಗೃತಿ ಮೂಡಿಸಿದರೂ ಸಿಗ್ನಲ್ ಜಂಪ್ ಹಾಗೂ ಅತಿ ವೇಗದ ಚಾಲನೆ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ. ಪಟ್ಟಣದ ಒಳಗೆ ಹಾಗೂ ಹೊರಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ಉಲ್ಲಂಘನೆ ಪತ್ತೆ ಹಚ್ಚಲಾಗುವುದು. ತಪ್ಪು ಮಾಡಿದ ವಾಹನ ಮಾಲೀಕರು ನೇರವಾಗಿ ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ತಡೆಯಲು ತಂತ್ರಜ್ಞಾನ ಆಧಾರಿತ ಕಣ್ಣಾವಲು ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಮೇ ತಿಂಗಳಿನಿಂದ ಪ್ರತಿ ವೃತ್ತದ ಸಿಗ್ನಲ್‌ಗಳಲ್ಲಿ ಕ್ಯಾಮೆರಾ ಅಳವಡಿಸಿ ದಂಡ ವಿಧಿಸಲಾಗುವುದು ಎಂದು ಸಂಚಾರಿ ಠಾಣೆಯ ಪಿಎಸ್‌ಐ ಚರಣ್ ಗೌಡ ತಿಳಿಸಿದರು.ಪಟ್ಟಣದ ಹೇಮಾವತಿ ಒಕ್ಕಲಿಗರ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಷ್ಟೇ ಜಾಗೃತಿ ಮೂಡಿಸಿದರೂ ಸಿಗ್ನಲ್ ಜಂಪ್ ಹಾಗೂ ಅತಿ ವೇಗದ ಚಾಲನೆ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ. ಪಟ್ಟಣದ ಒಳಗೆ ಹಾಗೂ ಹೊರಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ಉಲ್ಲಂಘನೆ ಪತ್ತೆ ಹಚ್ಚಲಾಗುವುದು. ತಪ್ಪು ಮಾಡಿದ ವಾಹನ ಮಾಲೀಕರು ನೇರವಾಗಿ ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಪ್ರಾಪ್ತ ವಯಸ್ಕರಿಗೆ ಬೈಕ್ ನೀಡುವ ಪೋಷಕರಿಗೆ ಕಿವಿಮಾತು ಹೇಳಿದ ಅವರು ಪರವಾನಗಿ ಇಲ್ಲದ ಮಕ್ಕಳಿಗೆ ವಾಹನ ನೀಡಿದಲ್ಲಿ ₹೨೫ ಸಾವಿರ ದಂಡ ವಿಧಿಸಲಾಗುವುದು. ಚಾಲನಾ ಪರವಾನಗಿ ಇಲ್ಲದವರು ಕೂಡಲೇ ಅದನ್ನು ಮಾಡಿಸಿಕೊಳ್ಳಬೇಕು. ವಾಹನ ವಿಮೆ ಇಲ್ಲದೆ ಅಪಘಾತ ಸಂಭವಿಸಿದರೆ ಲಕ್ಷಾಂತರ ರುಪಾಯಿಗಳನ್ನು ಮನೆಯಿಂದಲೇ ಭರಿಸಬೇಕಾಗುತ್ತದೆ. ಅಲ್ಲದೆ, ೧೫ ವರ್ಷ ಹಳೆಯ ವಾಹನಗಳಿಗೆ ಎಫ್‌ಸಿ ಮಾಡಿಸದೆ ರಸ್ತೆಗೆ ಇಳಿಸುವುದು ಕಾನೂನುಬಾಹಿರ ಎಂದು ಮಾಹಿತಿ ನೀಡಿದರು.ಮಹಿಳಾ ಮಂಡಳಿ ಅಧ್ಯಕ್ಷೆ ಮಮತಾ ಮಾತನಾಡಿ, ಮಹಿಳೆಯರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮಂಡಳಿಯ ಕಾರ್ಯದರ್ಶಿ ವೀಣಾ, ಖಜಾಂಚಿ ಕಲ್ಪನಾ, ನಿರ್ದೇಶಕಿಯರಾದ ಜಯಲಕ್ಷ್ಮಮ್ಮ, ಮೀನಾಕ್ಷಿ, ಭಾಗ್ಯ, ಗೀತಾ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.