ಗುದ್ದಲಿ ಹಿಡಿದು ಗುಂಡಿ ಮುಚ್ಚಿದ ಪಿಎಸ್ಐ

| Published : Jul 03 2024, 12:24 AM IST

ಸಾರಾಂಶ

ತನ್ನ ಸ್ವಂತ ಹಣದೊಂದಿಗೆ ಇತರರ ನೆರವನ್ನೂ ಪಡೆದು ಗುಂಡಿ ಮುಚ್ಚಲು ಬೇಕಾದ ಕಾಂಕ್ರೀಟು ವ್ಯವಸ್ಥೆ ಮಾಡಿದ್ದಾರೆ. ಬಳಿಕ ತಾವೇ ಗುದ್ದಲಿ ಹಿಡಿದು ಗುಂಡಿ ಮುಚ್ಚಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಕದ್ರಿ ಸಂಚಾರ ಠಾಣೆಯ ಪಿಎಸ್‌ಐ ಈಶ್ವರ ಸ್ವಾಮಿ ಅವರು ಕೈಯಾರೆ ಗುದ್ದಲಿ ಹಿಡಿದು ರಸ್ತೆ ಹೊಂಡಗಳನ್ನು ಮುಚ್ಚಿ ಸಂಚಾರ ಸುಗಮಗೊಳಿಸಿ ಕರ್ತವ್ಯದಲ್ಲೂ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಆಯಾ ಸರ್ಕಾರದ ಅಧಿಕಾರಿಗಳು ಮುತುವರ್ಜಿ ವಹಿಸಿ ಮಾಡಬೇಕಾದ ಕೆಲಸವನ್ನು ಈಶ್ವರ ಸ್ವಾಮಿ ಮಾಡಿ ಗಮನ ಸೆಳೆದಿದ್ದಾರೆ.

ಕೆಪಿಟಿ ವೃತ್ತದಲ್ಲಿ ಕರ್ತವ್ಯ ನಿರತರಾಗಿದ್ದ ಅವರು ಮಳೆಯಿಂದ ರಸ್ತೆಯಲ್ಲಿ ಉಂಟಾದ ಗುಂಡಿಗಳಿಂದ ವಾಹನ ದಟ್ಟಣೆ ಉಂಟಾಗುವುದನ್ನು ಗಮನಿಸಿದ್ದಾರೆ. ಮಳೆಗೆ ರಸ್ತೆಯ ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ಗುಂಡಿಗಳಾಗಿದ್ದವು. ಇದರಿಂದ ವಾಹನ ಸಂಚಾರದಲ್ಲಿ ಏರುಪೇರಾಗುತ್ತಿತ್ತು.

ಇದಕ್ಕೆ ಇತಿಶ್ರೀ ಹಾಡಲು ಮುಂದಾದ ಈಶ್ವರ ಸ್ವಾಮಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ತನ್ನ ಸ್ವಂತ ಹಣದೊಂದಿಗೆ ಇತರರ ನೆರವನ್ನೂ ಪಡೆದು ಗುಂಡಿ ಮುಚ್ಚಲು ಬೇಕಾದ ಕಾಂಕ್ರೀಟು ವ್ಯವಸ್ಥೆ ಮಾಡಿದ್ದಾರೆ. ಬಳಿಕ ತಾವೇ ಗುದ್ದಲಿ ಹಿಡಿದು ಗುಂಡಿ ಮುಚ್ಚಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.