ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬುವುದು ಅವಶ್ಯ-ಡಾ. ಬಳಿಗಾರ

| Published : Jun 17 2024, 01:31 AM IST

ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬುವುದು ಅವಶ್ಯ-ಡಾ. ಬಳಿಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜಮುಖಿಯಾಗಿಸಲು ಸಮುದಾಯ, ಕುಟುಂಬದ ಪ್ರೀತಿ ವಿಶ್ವಾಸ ಹಾರೈಕೆ ಬೆಂಬಲ ಅವಶ್ಯವಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯರಾದ ಡಾ. ವಿಜಯಕುಮಾರ ಬಳಿಗಾರ ತಿಳಿಸಿದರು.

ಹಾವೇರಿ:ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜಮುಖಿಯಾಗಿಸಲು ಸಮುದಾಯ, ಕುಟುಂಬದ ಪ್ರೀತಿ ವಿಶ್ವಾಸ ಹಾರೈಕೆ ಬೆಂಬಲ ಅವಶ್ಯವಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯರಾದ ಡಾ. ವಿಜಯಕುಮಾರ ಬಳಿಗಾರ ತಿಳಿಸಿದರು.

ನಗರದ ಶ್ರೀ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವರ ಸಹಯೋಗದಲ್ಲಿ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸ್‌ಎಬಿಲಿಟಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಾನಸಿಕ ಅಸ್ವಸ್ಥರು ಮತ್ತು ಪೋಷಕರಿಗೆ ಪುನಶ್ಚೇತನ ಕುರಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಅಸ್ವಸ್ಥತೆಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದಾಗ ಗುಣಮುಖರಾಗಲು ಸಾಧ್ಯವಿದೆ. ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಿದೆ. ಪೋಷಕರು ಇಂಥ ಶಿಬಿರದ ಸದುಪಯೋಗ ಪಡೆದುಕೊಂಡು ಮಾನಸಿಕ ಅಸ್ವಸ್ಥರು ಸಮಾಜದಲ್ಲಿ ಎಲ್ಲರಂತೆ ಬಾಳಿ ಬದುಕಲು ಪ್ರೋತ್ಸಾಹ ನೀಡಬೇಕು ಎಂದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ. ಆರ್. ಹಾವನೂರು ಮಾತನಾಡಿ, ಮಾನಸಿಕ ರೋಗಿಗಳು ಸಮಾಜದಲ್ಲಿ ಗೌರವಯುತವಾಗಿ ಬಾಳಲು ಅನುಕೂಲ ಮಾಡಿಕೊಡಬೇಕಿದೆ, ಇದು ನಮ್ಮೆಲ್ಲರ ಜವಾಬ್ದಾರಿ ಎಂದರು. ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಆಶು ನದಾಫ್ ಕಲಚೇತನರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಹಾಗೂ ಅನುದಾನಗಳ ಕುರಿತು ವಿವರಿಸಿದರು.

ವಸಂತ ಮೊಕ್ತಾಲಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ರಕ್ಷಣಾಧಿಕಾರಿ ಶಿಲ್ಪಾ ಸಿದ್ಧಮ್ಮನವರ ಭಾಗವಹಿಸಿದ್ದರು. ಎಪಿಡಿ ಸಂಸ್ಥೆಯಲ್ಲಿ ಕಾರ್ಯನಿವರ್ಹಿಸುತ್ತಿರುವ ಸಂತೋಷ್ ಎಸ್., ಪ್ರಭಾಕರ ಬಾರಕೇರ, ನವ್ಯಶ್ರೀ, ಮಂಜುಳಾ.ಹಾವೇರಿ ತಾಲೂಕು ಸಂಯೋಜಕಿ ಸುಧಾ, ಚಂದ್ರಪ್ಪ ಇತರರು ಇದ್ದರು.