ಪಿಯು ಫಲಿತಾಂಶ: ಕೋಲಾರ ಜಿಲ್ಲೆಗೆ 12ನೇ ಸ್ಥಾನ

| Published : Apr 12 2024, 01:06 AM IST

ಸಾರಾಂಶ

ಕೋಲಾರ ಜಿಲ್ಲೆ ಕಳೆದ ಬಾರಿ ಶೇ.೭೯.೨ ಫಲಿತಾಂಶದೊಂದಿಗೆ ೧೪ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಸುಧಾರಣೆಯೊಂದಿಗೆ ಉತ್ತಮ ಸಾಧನೆ ಮಾಡಿದ್ದು, ಶೇ.೮೬.೧೨ ಫಲಿತಾಂಶದೊಂದಿಗೆ ಜಿಲ್ಲೆ ೧೨ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆಯಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆ ಬರೆದ ೧೩೩೬೦ ಮಂದಿ ಹೊಸ ಅಭ್ಯರ್ಥಿಗಳಲ್ಲಿ ೧೧೫೦೫ ಮಂದಿ ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ೮೬.೧೨ ಫಲಿತಾಂಶ ಲಭ್ಯವಾಗಿದೆ. ವಿಜ್ಞಾನ ವಿಭಾಗದಲ್ಲಿ ನಗರದ ಮಹಿಳಾ ಸಮಾಜ ಕಾಲೇಜಿನ ಹೆಚ್.ಜಿ. ವಂದನಾ, ವಾಣಿಜ್ಯದಲ್ಲಿ ಬಂಗಾರಪೇಟೆ ಎಸ್‌ಡಿಸಿ ಕಾಲೇಜಿನ ನಿಕೇತನ ಹಾಗೂ ಕಲಾ ವಿಭಾಗದಲ್ಲಿ ಜಿ.ಎಂ. ಅರ್ಚನಾ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ. ಕೋಲಾರ ಜಿಲ್ಲೆಗೆ 12ನೇ ಸ್ಥಾನ

ಕೋಲಾರ ಜಿಲ್ಲೆ ಕಳೆದ ಬಾರಿ ಶೇ.೭೯.೨ ಫಲಿತಾಂಶದೊಂದಿಗೆ ೧೪ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಸುಧಾರಣೆಯೊಂದಿಗೆ ಉತ್ತಮ ಸಾಧನೆ ಮಾಡಿದ್ದು, ಶೇ.೮೬.೧೨ ಫಲಿತಾಂಶದೊಂದಿಗೆ ಜಿಲ್ಲೆ ೧೨ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆಯಾಗಿದೆ ಫಲಿತಾಂಶದಲ್ಲೂ ಶೇ.೬.೧೦ ರಷ್ಟು ಏರಿಕೆಯಾಗಿದೆ. ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಟಾಫರ್ ಆಗಿರುವ ನಗರದ ಮಹಿಳಾ ಸಮಾಜ ಕಾಲೇಜಿನ ಹೆಚ್.ಜಿ. ವಂದನಾ ೫೯೨ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ ಬಂಗಾರಪೇಟೆ ಎಸ್‌ಡಿಸಿ ಕಾಲೇಜಿನ ನಿಕೇತನ ೫೯೪ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದು, ಕಲಾ ವಿಭಾಗದಲ್ಲಿ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಜಿ.ಎಂ. ಅರ್ಚನಾ ೫೮೧ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ನಿಕೇತನ ರಾಜ್ಯದಲ್ಲಿ ೪ನೇ ಟಾಪರ್‌

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಟಾಫರ್ ಆಗಿರುವ ನಿಕೇತನ ರಾಜ್ಯಕ್ಕೆ ೪ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಕೆ. ಸಿದ್ದಾರ್ಥ ೫೯೦ ಅಂಕ ಹಾಗೂ ಕೆಜಿಎಫ್ ವಿಮಲ ಹೃದಯ ಪಿಯು ಕಾಲೇಜಿನ ಆರ್.ಭಾವನಾ ೫೮೯ ಅಂಕಗಳೊಂದಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.ವಿಜ್ಞಾನ ವಿಭಾಗದಲ್ಲಿ ನಗರದ ವಿದ್ಯಾಜ್ಯೋತಿ ಕಾಲೇಜಿನ ಎಂ.ತ್ರಿಷಾ ೫೯೧ ಅಂಕ, ಮಹಿಳಾ ಸಮಾಜ ಕಾಲೇಜಿನ ಪವನ್ ಸಾಯಿ ಎನ್ .ಆರ್ ಹಾಗೂ ರಾಕ್ ವ್ಯಾಲಿ ರೆಸಿಡೆನ್ಸಿಯಲ್ ಪಿಯು ಕಾಲೇಜಿನ ಆರ್.ಹನ್ಸಿಕಾ ೫೯೦ ಅಕಗಳೊಂದಿಗೆ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.ಕಲಾ ವಿಭಾಗದಲ್ಲಿ ಬಂಗಾರಪೇಟೆ ಬಾಲಕಿಯರ ಪಿಯು ಕಾಲೇಜಿನ ಹಿಮ ಬಿಂದು ೫೮೧ ಅಂಕಗಳೊಂದಿಗೆ ದ್ವಿತೀಯ ಹಾಗೂ ಇದೇ ಕಾಲೇಜಿನ ಕೆ.ಎನ್.ಸಂಗೀತಾ ೫೦ ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನದಲ್ಲಿ ಗ್ರಾಮೀಣರೇ ಮೇಲುಗೈ

ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದು, ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ ೧೦೪೭೮ ಮಂದಿ ಪೈಕಿ ೮೯೯೯ ಮಂದಿ ಉತ್ತೀರ್ಣರಾಗಿ ಶೇ.೮೫.೮೮ ಫಲಿತಾಂಶ ಬಂದಿದೆ ಆದರೆ ಗ್ರಾಮೀಣ ಭಾಗದಲ್ಲಿ ೨೮೮೨ ಮಂದಿ ಪರೀಕ್ಷೆ ಬರೆದಿದ್ದು, ೨೫೦೬ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೮೬.೯೫ ಫಲಿತಾಂಶ ಲಭ್ಯವಾಗಿದೆ.

ಕಲಾ ವಿಭಾಗದಲ್ಲಿ ೧೩೧೬ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೯೪೫ ಮಂದಿ ತೇರ್ಗಡೆಯಾಗಿದ್ದು, ೭೧.೮೧ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ೬೧೩೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೫೨೩೪ ಮಂದಿ ಉತ್ತೀರ್ಣರಾಗಿ ೮೫.೨೯ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ೫೯೦೭ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೫೩೨೬ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೯೦.೧೬ ಫಲಿತಾಂಶ ಬಂದಿದೆ.ಬಾಲಕಿಯರೇ ಮೇಲುಗೈ

ಒಟ್ಟಾರೆ ಫಲಿತಾಂಶದಲ್ಲೂ ಹೊಸ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆ ಬರೆದ ೮೦೯೬ ಬಾಲಕಿಯರಲ್ಲಿ ೬೭೯೯ ಮಂದಿ ತೇರ್ಗಡೆಯಾಗಿ ಶೇ.೮೩.೯೮ ಫಲಿತಾಂಶ ಬಂದಿದೆ. ಇದೇ ರೀತಿ ಬಾಲಕರು ೬೭೭೩ ಮಂದಿ ಪರೀಕ್ಷೆ ಬರೆದಿದ್ದು ೫೨೯೭ ಮಂದಿ ಉತ್ತೀರ್ಣರಾಗಿ ಶೇ.೭೮.೩೨ ಫಲಿತಾಂಶ ಪಡೆದಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.