ಖಾಸಗಿ ಬಸ್ ನಿಲ್ದಾಣ ಸುಂಕ ಕಡಿಮೆ ಮಾಡಲು ಸಾರ್ವಜನಿಕರ ಒತ್ತಾಯ

| Published : Mar 08 2024, 01:53 AM IST

ಖಾಸಗಿ ಬಸ್ ನಿಲ್ದಾಣ ಸುಂಕ ಕಡಿಮೆ ಮಾಡಲು ಸಾರ್ವಜನಿಕರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಗುರುವಾದ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಅಧ್ಯಕ್ಷತೆಯಲ್ಲಿ ವಿವಿಧ ವಾರ್ಷಿಕ ಬಾಬುಗಳ ಹರಾಜು ನಡೆಯಿತು.

- ಪುರಸಭೆ ಸಭಾಂಗಣದಲ್ಲಿ ನಡೆದ ವಾರ್ಷಿಕ ಬಾಬ್ತುಗಳ ಬಹಿರಂಗ ಹರಾಜುಕನ್ನಡಪ್ರಭ ವಾರ್ತೆ, ಬೀರೂರು

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಗುರುವಾದ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಅಧ್ಯಕ್ಷತೆಯಲ್ಲಿ ವಿವಿಧ ವಾರ್ಷಿಕ ಬಾಬುಗಳ ಹರಾಜು ನಡೆಯಿತು.

ಹರಾಜು ಆರಂಭವಾಗುತ್ತಿದ್ದಂತೆ ಪಾಲ್ಗೊಂಡಿದ್ದ ಬಿಡ್‌ದಾರರು ಹರಾಜು ನಡೆಸುವ ಮುನ್ನ ಷರತ್ತಿನಂತೆ ಪುರಸಭೆಯಿಂದ ಅಂಗೀಕರಿಸಿರುವ ದರಪಟ್ಟಿಗಳ ಬೋರ್ಡಗಳನ್ನು ಬರೆಸಿದ್ದೀರಾ, ಎಲ್ಲಿ ಪ್ರಕಟಣೆ ಮಾಡಿದ್ದೀರಾ, ನಾವು ಹರಾಜಿಗೆ ಹೊಸಬರು, ಯಾವ ಮಾನದಂಡದಲ್ಲಿ ಹರಾಜು ಕೂಗಬೇಕು ಎಂದು ಬಿಡ್‌ದಾರ ಪುನೀತ್ ಅಧಿಕಾರಿಗಳನ್ನು ಪ್ರಶ್ನಿಸಿದಕ್ಕೆ ಧ್ವನಿಗೂಡಿಸಿದ ಸದಸ್ಯ ಬಿ.ಕೆ.ಶಶಿಧರ್ ಹರಾಜು ಪಡೆದವರು ಯಾವ ರೀತಿ ಸುಂಕ ವಸೂಲಿ ಮಾಡಬೇಕು ಅಧಿಕಾರಿಗಳು ಉತ್ತರಿಸಿ ನಂತರ ಹರಾಜು ನಡೆಸಿ ಎಂದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶಾಂತಲ, ಈ ಹಿಂದೆ ವಾರದ ಸಂತೆ ವರ್ತಕರಿಗೆ 30-40 ರು.ವಸೂಲಿ ಮಾಡಲು ನಿಗದಿ ಮಾಡಿತ್ತು, ಆದನ್ನು ಸದ್ಯ 35-45 ರು. ಗಳಿಗೆ ಹೆಚ್ಚಿಸಲಾಗಿದ್ದು, ಇದರಿಂದ ವರ್ತಕರು, ರೈತರು ಹಾಗೂ ಹರಾಜು ಪಡೆದ ಬಿಡ್ ದಾರಿಗೆ ಯಾವುದೇ ಅನ್ಯಾಯವಾಗಲ್ಲ ಎಂದು ಉತ್ತರ ನೀಡಿದರು.

ವಾರದ ಸಂತೆಯಲ್ಲಿ ಸುಂಕ ವಸೂಲಿ ಹರಾಜಿನಲ್ಲಿ ಒಟ್ಟು 7 ಜನ ಬಿಡ್ ದಾರರು ಭಾಗವಹಿಸಿದ್ದರು. ಈ ಹಿಂದೆ ಸಂತೆಯಲ್ಲಿ ಸುಂಕ ವಸೂಲಿ 3ಲಕ್ಷದ 61 ಸಾವಿರಕ್ಕೆ ಹರಾಜಾಗಿತ್ತು, ಈ ಬಾರಿ ಸರ್ಕಸ್ ಪ್ರಕಾಶ್ 3,70,500ಕ್ಕೆ ಬಿಡ್ ಮಾಡಿ ತಮ್ಮ ದಾಗಿಸಿಕೊಂಡರು.

ಪುರಸಭಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಸುಂಕ ವಸೂಲಿ ಈ ಹಿಂದೆ 86,500ಕ್ಕೆ ಹರಾಜಾಗಿತ್ತು, ಆದರೆ ಈ ಬಾರಿ ಶಶಿಧರ್ ಮಲ್ಲಪ್ಪ ಒಬ್ಬರೇ ಹರಾಜಿನಲ್ಲಿ ಪಾಲ್ಗೊಂಡಿದ್ದರಿಂದ ಪೈಪೋಟಿ ನಡೆಯಲಿಲ್ಲ. ನಂತರ ಸಭೆಯಲ್ಲಿ ಮಾತನಾಡಿದ ಬಿಡ್ ದಾರ ಶಶಿಧರ್, ಕೋರೊನಾ ಹಾವಳಿಯಿಂದ ಖಾಸಗಿ ಬಸ್ ಸೇವೆ ಅಷ್ಟಕ್ಕೆ ಅಷ್ಟೆಇದೆ. ಜೊತೆಗೆ ಖಾಸಗಿ ಬಸ್ ಸೇವೆ ಕಡಿಮೆಯಾಗಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿಯೋಜನೆಯಡಿ ಉಚಿತ ಪ್ರಯಾಣ ಹಿನ್ನಲೆಯಲ್ಲಿ ಪ್ರಯಾಣಿಕರು ಕೂಡ ಕಡಿಮೆಯಾಗಿದ್ದು, ನೀವು 1ಬಸ್ಸ್ ಗೆ 5 ರು. ಸುಂಕ ವಸೂಲಿ ಮಾಡಲು ಸೂಚಿಸಿದ್ದೀರ. ನಾವು ವಾರ್ಷಿಕ 86ಸಾವಿರ ಪುರಸಭೆಗೆ ಕಟ್ಟಿದರೇ ಹೇಗೆ ವಸೂಲಿಯಾಗುತ್ತದೆ ಎಂದರು. ಖಾಸಗಿ ಬಸ್ ನಿಲ್ದಾಣದ ಸುಂಕ ವಸೂಲಿ ಸ್ಥಿರೀಕರಣವನ್ನು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕಡಿಮೆ ಮಾಡಿದರೆ ಬಿಡ್ ದಾರರಿಗೆ ಅನೂಕೂಲವಾಗುತ್ತದೆ ಎಂದರು.

ಪುರಸಭಾ ವ್ಯಾಪ್ತಿಯ ದಿನವಹಿ ಹಂಗಾಮಿ ನೆಲಬಾಡಿಗೆ ವಸೂಲಿ ಮಾಡುವ ಹಕ್ಕಿಗೆ ಒಟ್ಟು 9ಜನ ಬಿಡ್‌ದಾರರು ಭಾಗವಹಿಸಿ, ಕಳೆದ ಬಾರಿ 3,12000 ಹರಾಜಾಗಿದ್ದ ನೆಲಬಾಡಿಗೆ ವಸೂಲಿ ಈ ಬಾರಿ ಪ್ರವೀಣ್ ಎನ್ನುವವರು 350000ಸಾವಿರಕ್ಕೆ ಬಿಡ್ ಮಾಡಿ ತಮ್ಮದಾಗಿಸಿಕೊಂಡರು.ಮೂರು ಮಾಂಸದ ಮಳಿಗೆಯಲ್ಲಿ ಕುರಿ, ಮೇಕೆ ಕತ್ತರಿಸಿ ಮಾರಾಟ ಮಾಡು ಮಾಡುವವರು ಸರ್ಕಾರ ಕುರಿ, ಮೇಕೆ ಕತ್ತರಿಸುವಾಗ ಪಶುವೈದ್ಯಾಧಿಕಾರಿಯಿಂದ ಯೋಗ್ಯವಾಗಿದೆ ಎಂದು ಪರೀಕ್ಷೆ ನಡೆಸಿ ಅನುಮತಿ ಪಡೆಯಬೇಕುಕೆಲ ಬಿಡ್‌ದಾರರ ಪಟ್ಟಿಗೆ ಉತ್ತರಿಸಿದ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಮುಂದಿನ ದಿನಗಳಲ್ಲಿ ಕುರಿ ಮೇಕೆ ಕತ್ತರಿಸುವ ಮುನ್ನ ಅಧಿಕಾರಿಗ ಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹರಾಜಿನಲ್ಲಿ ಪುರಸಭಾ ವ್ಯವಸ್ಥಾಪಕ ಪ್ರಕಾಶ್, ಕಂದಾಯ ಅಧಿಕಾರಿ ದೀಪಕ್ ಶಿಲ್ಪ, ಗಿರಿರಾಜ್, ವಿಶ್ವನಾಥ್ ಹಾಗೂ ನೂರಾರು ಬಿಡ್ ದಾರರು ಪಾಲ್ಗೊಂಡಿದ್ದರು.

7 ಬೀರೂರು 1

ಬೀರೂರು ಪುರಸಭೆ ಸಭಾಂಗಣದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಅಧ್ಯಕ್ಷತೆಯಲ್ಲಿ ವಾರ್ಷಿಕ ಬಾಬುಗಳ ಬಹಿರಂಗ ಹರಾಜು ನಡೆಯಿತು. ವ್ಯವಸ್ಥಾಪಕ ಪ್ರಕಾಶ್, ವಿಶ್ವನಾಥ್, ದೀಪಕ್ ಇದ್ದರು.