ಸಾರ್ವಜನಿಕ ಆಸ್ಪತ್ರೆ ವೈದ್ಯರು ಉತ್ತಮ ಕರ್ತವ್ಯ ನಿರ್ವಹಿಸಬೇಕು: ತಮ್ಮಯ್ಯ

| Published : Feb 14 2024, 02:19 AM IST

ಸಾರ್ವಜನಿಕ ಆಸ್ಪತ್ರೆ ವೈದ್ಯರು ಉತ್ತಮ ಕರ್ತವ್ಯ ನಿರ್ವಹಿಸಬೇಕು: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೈಫ್‌ ಲೈನ್‌ ಫೀಡ್ಸ್‌ ಸಂಸ್ಥೆ ಜಿಲ್ಲಾಸ್ಪತ್ರೆಗೆ ನೀಡಿರುವ ಸುಮಾರು 10 ಲಕ್ಷ ರು. ಗಳ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಶಾಸಕ ತಮ್ಮಯ್ಯ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೀಳರಿಮೆ ಬರದಂತೆ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಲೈಫ್‌ ಲೈನ್‌ ಫೀಡ್ಸ್‌ ಸಂಸ್ಥೆ ಜಿಲ್ಲಾಸ್ಪತ್ರೆಗೆ ನೀಡಿರುವ ಸುಮಾರು 10 ಲಕ್ಷ ರು. ಗಳ ಪೀಠೋಪಕರಣ ಹಸ್ತಾಂತರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೀಳರಿಮೆ ಬರದಂತೆ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಕರೆ ನೀಡಿದರು.ಲೈಫ್‌ ಲೈನ್‌ ಫೀಡ್ಸ್‌ ಸಂಸ್ಥೆ ಜಿಲ್ಲಾಸ್ಪತ್ರೆಗೆ ನೀಡಿರುವ ಸುಮಾರು 10 ಲಕ್ಷ ರು. ಗಳ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು 170 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಇನ್ನೆರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮೆರಿಟ್‌ ಆಧಾರದಲ್ಲಿ ನೇಮಕವಾಗಿ ಬಂದಿರುವುದರಿಂದ ಅವರಲ್ಲಿ ನಂಬಿಕೆ ಇಟ್ಟು ಸಾರ್ವಜನಿಕರು ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದರು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಮೆಡಿಕಲ್‌ ಕಾಲೇಜಿಗೆ ಬಸ್ಸನ್ನು ಕೊಡುಗೆ ನೀಡಿರುವ ಲೈಫ್‌ ಲೈನ್ ಸಂಸ್ಥೆ ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಲ್ಕದ ವೆಚ್ಚ ಭರಿಸುವಲ್ಲಿ ಮುಂದಾಗಿದ್ದು, ನಿಸ್ವಾರ್ಥ ಸೇವೆ ಸಲ್ಲಿಸಿ ಸಮಾಜದ ಆಸ್ತಿ ಆಗಿರುವ ಕಿಶೋರ್‌ಕುಮಾರ್ ಹೆಗಡೆಯವರಿಗೆ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸಿದರು. ಕಳೆದ 35 ವರ್ಷಗಳಿಂದ ಒಡನಾಡಿಯಾಗಿರುವ ಕಿಶೋರ್‌ಕುಮಾರ್ ಹೆಗಡೆ ಐಡಿಎಸ್‌ಜಿ ಸರ್ಕಾರಿ ಕಾಲೇಜಿಗೆ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆಂದು ಹೇಳಿದರು. ಲೈಫ್‌ ಲೈನ್ ಫೀಡ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ಕುಮಾರ್ ಹೆಗಡೆ ಮಾತನಾಡಿ, ಓರ್ವ ಸರ್ಕಾರಿ ಅಧಿಕಾರಿ ಖಾಸಗಿಯವರ ಬಳಿ ಬಂದು ಸೌಲಭ್ಯ ಕೇಳುವ ಅಗತ್ಯತೆ, ಅವಶ್ಯಕತೆ ಇರುವುದಿಲ್ಲ. ಆದರೂ ಜಿಲ್ಲಾಸರ್ಜನ್‌ ಡಾ. ಮೋಹನ್‌ ಕುಮಾರ್‌ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದನ್ನು ಅಭಿನಂದಿಸಿದರು. ಜಿಲ್ಲಾ ಸರ್ಜನ್‌ ಡಾ. ಮೋಹನ್‌ಕುಮಾರ್ ಮಾತನಾಡಿ, ಹಾಲಿ ಇದ್ದ 44 ಮಂಚಗಳನ್ನು ದುರಸ್ಥಿ ಮಾಡಿ, ಬಣ್ಣ ಬಳಿದು ವಾಪಸ್ ನೀಡಿದ್ದು ವಾರ್ಡ್‌ಗಳಲ್ಲಿ ಇಡಲಾಗಿದೆ. ಬೆಡ್‌ಸೈಡ್ ಲಾಕರ್ 85, ಗಾಡ್ರೇಜ್ ಬೀರು 3, ರ್‍ಯಾಕ್‌ಗಳು 11, ವೀಲ್‌ಚೇರ್ 2, ಸ್ಟ್ರಕ್ಚರ್ 3, ಲಗೇಜ್ ಫ್ಯಾನ್ 3, ಟ್ರೀಟ್‌ಮೆಂಟ್ ಸ್ಟ್ಯಾಂಡ್ 2 ಮುಂತಾದವುಗಳನ್ನು ದುರಸ್ಥಿ ಮಾಡಿಕೊಟ್ಟಿದ್ದಾ ರೆಂದು ಹೇಳಿದರು. ಈ ಸಂದರ್ಭದಲ್ಲಿ ಲೈಫ್‌ಲೈನ್ ಫೀಡ್ಸ್ ಸಂಸ್ಥೆ ಆಡಳಿತಾಧಿಕಾರಿ ಸುಬ್ರಮಣ್ಯ, ಜನರಲ್ ಮ್ಯಾನೇಜರ್‌ ಗಣೇಶ್‌ ಕಾಮತ್, ಶಮಿ, ರವಿ ಹಾಗೂ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಜಲಜಾಕ್ಷಿ ಸ್ವಾಗತಿಸಿದರು.

13 ಕೆಸಿಕೆಎಂ 4ಲೈಫ್‌ ಲೈನ್‌ ಫೀಡ್ಸ್‌ ಸಂಸ್ಥೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸುಮಾರು 10 ಲಕ್ಷ ರು.ಗಳ ಪೀಠೋಪಕರಣ ಕೊಡುಗೆಯಾಗಿ ನೀಡಿತು. ಶಾಸಕ ಎಚ್‌.ಡಿ. ತಮ್ಮಯ್ಯ, ಲೈಫ್‌ ಲೈನ್‌ ಫೀಡ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ಕುಮಾರ್‌ ಹೆಗಡೆ, ಜಿಲ್ಲಾ ಸರ್ಜನ್‌ ಡಾ.ಮೋಹನ್‌ಕುಮಾರ್‌ ಇದ್ದರು.