ಸರ್ಕಾರಿ ಯೋಜನೆಗಳ ಯಶಸ್ಸಿಗೆ ಸಾರ್ವಜನಿಕರು ಕೈ ಜೋಡಿಸಿ: ನ್ಯಾಯಾಧೀಶ ಬಸವರಾಜ ತಳವಾರ

| Published : Sep 22 2024, 01:52 AM IST

ಸರ್ಕಾರಿ ಯೋಜನೆಗಳ ಯಶಸ್ಸಿಗೆ ಸಾರ್ವಜನಿಕರು ಕೈ ಜೋಡಿಸಿ: ನ್ಯಾಯಾಧೀಶ ಬಸವರಾಜ ತಳವಾರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಕೈಜೋಡಿಸಬೇಕಿದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು. ಗುಂಡ್ಲುಪೇಟೆಯಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತಾ ಜಾಥಾಗೆ ಚಾಲನೆ ಬಳಿಕ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಕೈಜೋಡಿಸಬೇಕಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ “ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತಾ ಜಾಥಾಗೆ ಚಾಲನೆ ಬಳಿಕ ಮಾತನಾಡಿದರು.

ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ ಆದರೆ ಕೇವಲ ಇಲಾಖೆಗಳಿಂದಲೇ ಯೋಜನೆ ಯಶಸ್ವಿಯಾಗಲು ಸಾಧ್ಯವಾಗಲ್ಲ. ಸಾರ್ವಜನಿಕರ ಸಹಕಾರ ಇದ್ದರೆ ಸರ್ಕಾರದ ಯೋಜನೆ ಸಫಲವಾಗಲಿವೆ ಎಂದು ಪ್ರತಿಪಾದಿಸಿದರು.

ಗಾಂಧೀಜಿ ಅವರ ೧೫೦ನೇ ಜನ್ಮ ದಿನದ ಅಂಗವಾಗಿ ಅಂದಿನ ಕೇಂದ್ರ ಸರ್ಕಾರ ೨೦೧೪ ಅ.೨ರಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಅಭಿಯಾನ ಕಾರ್ಯರೂಪಕ್ಕೆ ಬರುತ್ತಿದೆ. ನಮ್ಮ ಮನೆ ಸುತ್ತ ಮುತ್ತ ಸ್ವಚ್ಛತೆಯಾದರೆ ಸಾಲದು ಸಾರ್ವಜನಿಕ ಸ್ಥಳಗಳು ಕೂಡ ಸ್ವಚ್ಛತೆಯಾದರೆ ಅಭಿಯಾನಕ್ಕೊಂದು ಅರ್ಥ ಬರಲಿದೆ ಎಂದರು.

ಸ್ವಚ್ಛತೆ ಎಲ್ಲಿ ಇರುತ್ತದೋ ಅಲ್ಲಿ ಆರೋಗ್ಯ ಇರಲಿದೆ. ಪರಿಸರ ಕಾಪಾಡುವ ಜೊತೆಗೆ ಸ್ವಚ್ಛತೆಗೂ ಆದ್ಯತೆ ನೀಡಿದರೆ ಈ ಅಭಿಯಾನ ಖಂಡಿತ ಯಶಸ್ಸು ಕಾಣಲಿದೆ ಹಾಗಾಗಿ ಸಾರ್ವಜನಿಕರ ಪಾತ್ರ ಇರಲಿ ಎಂದರು. ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಶಿವಕುಮಾರ ಜಿ.ಜೆ, ಅಪರ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶೆ ಕಾಂತಮ್ಮ ಎ.ಎನ್,ಪುರಸಭೆ ಸದಸ್ಯರಾದ ಎಲ್.ನಿರ್ಮಲ, ಶ್ರೀನಿವಾಸ್ (ಕಣ್ಣಪ್ಪ), ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್‌, ಸರ್ಕಾರಿ ಸಹಾಯಕ ಅಭಿಯೋಜಕ ಪಿ.ಸಿ.ರೇವಣ್ಣ, ಮಹಮದ್ ವಸಿಂಮುಲ್ಲಾ, ವಕೀಲರ ಸಂಘದ ಕಾರ್ಯದರ್ಶಿ ಎಂ.ಬೀರೇಗೌಡ, ಸ್ವಯಂ ಸೇವಕಿ ನಾಗೇಂದ್ರ ಹಾಗೂ ವಕೀಲರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಿದ್ದರು.