8ನೇ ವಾರ್ಡ್ ನಲ್ಲಿ ಲಾರಿ ಚಾಲಕರಾದ ಮನ್ಸೂರ್ ಅವರಿಗೆ ಸೇರಿದ ಕೋಳಿಯೊಂದನ್ನು ನಾಯಿಗಳು ಹಿಡಿದು ಸಾಯಿಸಿದೆ.
ಕನ್ನಡಪ್ರಭ ವಾರ್ತೆ ಸರಗೂರು
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿ ಇದ್ದರೂ ನಿಯಂತ್ರಣ ಮಾಡಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣ ವ್ಯಾಪ್ತಿಯ ಎಲ್ಲ ವಾರ್ಡಿನಲ್ಲೂ ನಿತ್ಯವೂ 15 ರಿಂದ 20 ಬೀದಿ ನಾಯಿಗಳು ಗುಂಪು ಗುಂಪಾಗಿ ಒಟ್ಟೊಟ್ಟಿಗೆ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಮಕ್ಕಳು, ಮಹಿಳೆಯರು, ವಯಸ್ಸಾದವರು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಅಂದರೆ ನಾಯಿಗಳು ಸಹ ಬಸ್ ಗಳಲ್ಲಿ ಬೇರೆ ಗ್ರಾಮಗಳಿಗೆ ಹೋಗುತ್ತಿರಬೇಕು ಎನ್ನುವಂತಿದೆ.
8ನೇ ವಾರ್ಡ್ ನಲ್ಲಿ ಲಾರಿ ಚಾಲಕರಾದ ಮನ್ಸೂರ್ ಅವರಿಗೆ ಸೇರಿದ ಕೋಳಿಯೊಂದನ್ನು ನಾಯಿಗಳು ಹಿಡಿದು ಸಾಯಿಸಿದೆ. ಇದನ್ನು ಸಾರ್ವಜನಿಕರು ಅಟ್ಟಾಡಿಸಿ ಸತ್ತಿರುವ ಕೋಳಿಯನ್ನು ರಕ್ಷಿಸಿ ಇದನ್ನು ಚರಂಡಿಗೆ ಬೀಸಾಡಿದರು. ಇದೆ ರೀತಿ 7ನೇ ವಾರ್ಡ್ ನಲ್ಲಿ ಅಂಗಡಿ ಮುಂಬಾಗ ಪತ್ರಿಕೆಯ ವಿತರಕರು, ಪತ್ರಿಕೆಯನ್ನು ಅಂಗಡಿಯ ಡೋರಿನ ಚಿಲಕಕ್ಕೆ ಹಾಕಿ ಬೇರೆ ಅಂಗಡಿ ಕಡೆ ಹೋದಾಗ ನಾಯಿಗಳು ಸೇರಿ ಪತ್ರಿಕೆಯನ್ನು ಚೂರು ಚೂರು ಮಾಡಿರುತ್ತವೆ. ಒಟ್ಟಾರೆ ಎಲ್ಲ ಬೀದಿಗಳಲ್ಲಿ ನಾಯಿಗಳ ಸಂತಾನ ಜಾಸ್ತಿಯಾಗಿದ್ದು, ಒಂದೊಂದು ನಾಯಿ ಮರಿಗಳು ಆರರಿಂದ ಏಳು ಮರಿಗಳು ಹಾಕಿರುತ್ತವೆ. ಎಲ್ಲಿ ಹೋದರು ನಾಯಿಮರಿಗಳ ಸಂತತಿ ಜಾಸ್ತಿಯಾಗಿದೆ. ಇದಕ್ಕೆ ಪರಿಹಾರವೇನು ? ಎಂಬುದು ತಿಳಿಯುತ್ತಿಲ್ಲ.ನಾಯಿ ಗುಂಪನ್ನು ನೋಡಿದರೆ ದೊಡ್ಡವರಿಗೆ ತಲೆ ಜುಮ್ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಮಕ್ಕಳ ಗತಿ ಏನು ಎಂಬುದು ಸಂಶಯಾಸ್ಪದ. ಇದರ ಬಗ್ಗೆ ಪ್ರಾಣಿ ಪ್ರಿಯರು ತಿಳಿದುಕೊಳ್ಳಬೇಕಾದ ವಿಚಾರವಾಗಿದೆ.
ಕೆಲವು ವಾರ್ಡ್‌ಗಳಲ್ಲಿ ಕೋತಿಗಳ ಕಾಟಕೋತಿಗಳು ಕೆಲವು ವಾರ್ಡ್ ಗಳಲ್ಲಿ ಮನೆ ಮನೆ ಒಳಗೆ ನುಗ್ಗಿ ಮನೆಯಲ್ಲಿದ್ದ ಪದಾರ್ಥಗಳನ್ನು ಹೊತ್ತು ಒಯ್ಯುತ್ತಿವೆ, ಇದರಿಂದಾಗಿ ಬಾರಿ ಹಿಂಸೆ ನೀಡುತ್ತಿವೆ,
ಇಲ್ಲಿನ ಬಸ್ ನಿಲ್ದಾಣದಲ್ಲಿ ಹಾಗೂ ರಸ್ತೆಗಳಲ್ಲಿ ಮಕ್ಕಳು, ದೊಡ್ಡವರ ಮೇಲೆ, ಆಡು ಕುರಿಗಳ, ಹಸು ಕರುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಾಳುಗಳಾಗುವಂತೆ ಮಾಡಿವೆ,ಇದಲ್ಲದೆ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ತೆರಳುವವರಂತೂ ಬೀದಿ ನಾಯಿಗಳಿಂದ ಜೀವ ಕೈಯಲ್ಲಿ ಹಿಡಿದು ಕೆಲವರು ದೊಣ್ಣೆ, ಕಡ್ಡಿಗಳನ್ನು ಹಿಡಿದು ನಡೆದಾಡುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಭಯ ಬೀತರಾಗಿದ್ದಾರೆ.
ಪ್ರಯಾಣಿಕರು ದೂರದ ಊರುಗಳಿಗೆ ತೆರಳಲು ಬೆಳಗಿನ ಜಾವ ಬಸ್ ನಿಲ್ದಾಣಕ್ಕೆ ಬಂದಾಗ ಬೀದಿ ನಾಯಿಗಳ ಹಿಂಡನ್ನು ಕಂಡು ಬೆಚ್ಚಿ ಬೀಳುವಂತಾಗಿದೆ.ಅಧಿಕಾರಿಗಳು, ಜನಪ್ರತಿಗಳ ನಿರ್ಲಕ್ಷ್ಯ
ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡುವಂತೆ ಹಲವಾರು ಬಾರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರು, ಸದಸ್ಯರು ತಿಳಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ಜನಪ್ರತಿನಿದಿಗಳು ತಮ್ಮ ವೈಯಕ್ತಿಕ ಕೆಲಸಗಳಿಗೆ ಪಪಂಯಲ್ಲಿ ಹೆಚ್ಚು ಒತ್ತು ನೀಡುವುದರಿಂದ ಇಂತಹ ಅನೇಕ ಸಮಸ್ಯೆಗಳು ಗೌಣವಾಗುತ್ತಿದ್ದು, ಜನಸಾಮಾನ್ಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಗಲಾದರೂ ಸಂಬಂಧಪಟ್ಟವರು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.ಹಾಗೂ ಆಯಾಯ ರಸ್ತೆಗಳಲ್ಲಿ ಪತ್ರಿಕೆ ವಿತರಿಸುವ ಹುಡುಗರನ್ನು ಅಟ್ಟಾಡಿಸಿಕೊಂಡು ಬಂದು ಬಿದ್ದು ಬಂದಿದ್ದಾರೆ, ಈ ರೀತಿ ಹಲವಾರು ಬಾರಿಯಾಗಿ ಪತ್ರಿಕೆ ವಿತರಿಸಲು ಯಾರು ಬರುವುದಿಲ್ಲ, ಹಾಗೂ ಸಾರ್ವಜನಿಕರು ಬೈಕ್ ನಲ್ಲಿ ಹೋಗುವಾಗ ಬೈಕ್ ನ್ನೆ ಹಿಮ್ಮೆಟ್ಟಿಕೊಂಡು ಬರುತ್ತವೆ, ಈ ಸಂಬಂಧ ಪ್ರಾಣಿ ದಯಾ ಸಂಘದವರು ಈ ಬಗ್ಗೆ ನಾಯಿಗಳನ್ನು ಸಾಯಿಸಬೇಡಿ ಎನ್ನುತ್ತಾರೆಂದು ನೊಂದ ಸಾರ್ವಜನಿಕರು ಹೇಳುತ್ತಾರೆ, ಆದ್ದರಿಂದ ಈ ಸಮಸ್ಯೆಯ ಬಗ್ಗೆ ಪರಿಹಾರವೇನು ಎನ್ನುತ್ತಿದ್ದಾರೆ.
------------ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನರ ಮೇಲೆ ದಾಳಿ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಲು ಟೆಂಡರ್ ಪ್ರಕ್ರಿಯೆಗೆ ಆಹ್ವಾನಿಸಿದೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಚರ್ಚೆ ಮಾಡಿ ಅವುಗಳನ್ನು ಶಸ್ತ್ರ ಚಿಕಿತ್ಸೆ ಮುಖಾಂತರ ಇದನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.ಎಸ್.ಕೆ. ಸಂತೋಷ್ ಕುಮಾರ್, ಮುಖ್ಯಾಧಿಕಾರಿ, ಪಪಂ, ಸರಗೂರು
----------