ನೀರಿಗಾಗಿ ಕೆಲಸ ಬಿಟ್ಟರೂ ಕುಡಿಯುವ ನೀರು ಸಿಗುತ್ತಿಲ್ಲ. ಇದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಸಾಕಷ್ಟು ತೊಂದರೆಯಾಗಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.
ಲಕ್ಷ್ಮೇಶ್ವರ: ಪಟ್ಟಣದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಆಶ್ರಯ ಕಾಲನಿಯಲ್ಲಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲವೆಂದು ಗುರುವಾರ ಪಟ್ಟಣದ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ವಿರುಪಾಕ್ಷಪ್ಪ ಹಡಪದ ಮಾತನಾಡಿ, ಕಳೆದ 20 ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ಪುರಸಭೆಯ ಅಧಿಕಾರಿಗಳಿಗೆ ಕುಡಿಯುವ ನೀರು ಯಾಕೆ ಬರುತ್ತಿಲ್ಲ ಎಂದು ಕೇಳಿದರೆ, ಮೋಟರ್ ಸುಟ್ಟಿದೆ. ಕರೆಂಟ್ ಇಲ್ಲ, ಪೈಪ್ ಒಡೆದು ಹೋಗಿದೆ. ಮಷಿನ್ ರಿಪೇರಿ ಇದೆ ಎಂದು ಸಬೂಬು ಹೇಳುತ್ತಾರೆ ಎಂದರು.ಪಟ್ಟಣದ ಗಡ್ಡದೇವರಮಠ ಆಶ್ರಯ ಬಡಾವಣೆಯಲ್ಲಿ ಬಡವರು, ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಪ್ರತಿನಿತ್ಯ ದುಡಿದು ಬದುಕು ಸಾಗಿಸಬೇಕು. ನೀರಿಗಾಗಿ ಕೆಲಸ ಬಿಟ್ಟರೂ ಕುಡಿಯುವ ನೀರು ಸಿಗುತ್ತಿಲ್ಲ. ಇದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಸಾಕಷ್ಟು ತೊಂದರೆಯಾಗಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ. ಕುಡಿಯುವ ನೀರಿಗಾಗಿ ಕೊಡ ಹಿಡಿದು ನೀರು ಸಿಗುವ ಕಡೆಗೆ ಅಲೆಯುವುದು ಮಾಮೂಲಿಯಾಗಿದೆ. ಇಷ್ಟಾದರೂ ಪುರಸಭೆಯವರು ತಿಂಗಳಿಗೊಮ್ಮೆ ಕುಡಿಯುವ ನೀರು ಕೊಡುತ್ತಾರೆ. ಇದರಿಂದ ರೋಸಿ ಹೋಗಿ ಪುರಸಭೆಗೆ ಮುತ್ತಿಗೆ ಹಾಕಲು ಇಲ್ಲಿಗೆ ಬಂದಿದ್ದೇವೆ ಎಂದರು.
ಈ ವೇಳೆ ಮಂಜುನಾಥ ಬಳಗಾನೂರ, ಭಾಷಾಸಾಬ್ ಬೂದಿಹಾಳ, ಕಿರಣ ಬಳಗಾನೂರ, ಎಚ್.ಎ. ಬಹಾದ್ದೂರ, ವೈ.ಎಂ. ನಾಲಬಂದ, ಚನ್ನವ್ವ ಕಮತದ, ದಾವಲಭಿ ಬಾಗಲಕೋಟ, ನಿರ್ಮಲಾ ಹೊಸಮನಿ, ಸಾಹೇರಾ ಗುಡಗೇರಿ, ಮಲ್ಲವ್ವ ಗಡದವರ, ಜೈತುನಬಿ ದೊಡ್ಡಮನಿ, ನೀಲವ್ವ ಮಾವನೂರ, ವಿನೋದಾ ಬೋರೆ, ನಿಂಗವ್ವ ಇದ್ದರು. ಮಳೆಯಿಂದ ಬಿದ್ದ ಗಿಡ- ಮರಗಳ ಸ್ವಚ್ಛತಾ ಕಾರ್ಯಗದಗ: ನಗರದಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಬಿದ್ದ ಗಿಡ- ಮರಗಳ ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಅವರ ಮಾರ್ಗದರ್ಶನದಲ್ಲಿ ನಗರಸಭೆ ಪರಿಸರ ಅಭಿಯಂತರ ಆನಂದ್ ಬದಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾಂದರ ಕೈಗೊಂಡರು.ಈ ವೇಳೆ ಸಿಬ್ಬಂದಿಗಳಾದ ಸಿ.ಆರ್. ಹಾದಿಮನಿ, ಸಣ್ಣಪ್ಪ ಬೋಳಮ್ಮನವರ, ಹೇಮೇಶ ಯಟ್ಟಿ, ಕೆಂಚಪ್ಪ ಪೂಜಾರ, ಅರ್ಜುನ ದೊಡ್ಡಮನಿ, ಪರಶುರಾಮ ಪೂಜಾರ, ಮಹೇಶ ಐನಾಪುರ, ಜಯಪ್ಪ ದೊಡ್ಡಮನಿ, ಮುತ್ತು ಚಲವಾದಿ, ವಿಶ್ವನಾಥ್ ದೊಡ್ಡಮನಿ ಹಾಗೂ ಇತರರು ಇದ್ದರು.