ನರಸಿಂಹರಾಜಪುರಕಸವನ್ನು ಮೂಲದಲ್ಲೇ ವಿಂಗಡಿಸಿ ಕೊಡುವ ಬಗ್ಗೆ ಸಾರ್ವಜನಿಕರಿಗೆ ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಮಾಹಿತಿ ನೀಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಷಯ ತಜ್ಞ ಶಶಿಕುಮಾರ್ ಹೇಳಿದರು.

- ಪಟ್ಟಣ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಸವನ್ನು ಮೂಲದಲ್ಲೇ ವಿಂಗಡಿಸಿ ಕೊಡುವ ಬಗ್ಗೆ ಸಾರ್ವಜನಿಕರಿಗೆ ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಮಾಹಿತಿ ನೀಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಷಯ ತಜ್ಞ ಶಶಿಕುಮಾರ್ ಹೇಳಿದರು.ಗುರುವಾರ ಪಟ್ಟಣ ಪಂಚಾಯಿತಿಯಲ್ಲಿ ಸ್ವಸಹಾಯ ಸಂಘದ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಐಇಸಿ ಕಾರ್ಯ ಕ್ರಮ ಮತ್ತು ಸ್ವ ಉದ್ಯೋಗದ ಸಾಲ ಸೌಲಭ್ಯ, ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 ರ ಕುರಿತು ಮಾಹಿತಿ ನೀಡಿದರು. ‌

ವಾಣಿಜ್ಯ ಸಂಕೀರ್ಣ, ಮನೆಗಳಿಂದ ಕಸ ಸಂಗ್ರಹವಾಗುತ್ತಿರುವ ಕಸ ಸಂಗ್ರಹಣೆಯಲ್ಲಿ ಪೌರ ಕಾರ್ಮಿಕರ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಎಸ್.ಡಬ್ಲ್ಯೂ ಎಂ ನಿಯಮ 2026 ರಂತೆ ಸಾರ್ವಜನಿಕರು ತ್ಯಾಜ್ಯವನ್ನು ಹಸಿ ತ್ಯಾಜ್ಯ , ಒಣ ತ್ಯಾಜ್ಯ , ಸ್ಯಾನಿಟರಿ ತ್ಯಾಜ್ಯ , ವಿಶೇಷ ತ್ಯಾಜ್ಯ ಎಂದು ವಿಂಗಡಿಸಬೇಕು. ಅಂದರೆ ಬಣ್ಣದ ಖಾಲಿ ಡಬ್ಬಗಳು, ಅವಧಿ ಮೀರಿದ ಔ಼ಷಧಿಗಳು, ಮಾತ್ರೆಗಳು ಮತ್ತು ಟಾನಿಕ್ ನ ಖಾಲಿ ಬಾಟಲ್ ಗಳು, ಬಲ್ಬ್ ಗಳು ಮೂಲದಲ್ಲೆ ವಿಂಗಡಿಸಿ ಕೊಡಬೇಕು.100 ಕೆಜಿಗಿಂತ ಹೆಚ್ಚಿನ ಕಸ ಉತ್ಪಾದನೆ ಮಾಡುವ ಕಲ್ಯಾಣ ಮಂಟಪದವರು ಮೂಲ ದಲ್ಲಿಯೇ ಹಸಿಕಸ, ಒಣಕಸ ವಿಂಗಡಿಸಿ ಕೊಡಬೇಕು. ಬಿ ಡಬ್ಲ್ಯೂಜಿ ಪ್ರಮಾಣ ಪತ್ರ ಪಡೆದು ಪಟ್ಟಣ ಪಂಚಾಯಿತಿ ವಾಹನಕ್ಕೂ ಕಸ ನೀಡಬಹುದು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಪಪಂ ಮುಖ್ಯಾಧಿಕಾರಿ ಆರ್. ವಿ.ಮಂಜುನಾಥ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ, ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕುಗಳು ವಿವಿಧ ಯೋಜನೆಯಡಿ ಸಾಲ ನೀಡುತ್ತಿದ್ದು ಇದನ್ನು ಸರಿಯಾದ ರೀತಿ ಉಪಯೋಗಿಸಿಕೊಳ್ಳಬೇಕು. ವಿವಿಧ ಯೋಜನೆಯಡಿ ಎಸ್.ಡಬ್ಲೂ ಎಂ ನಿಯಮ 2026 ಏಪ್ರಿಲ್ 1 ರಿಂದ ಜಾರಿಯಾಗಿದೆ. ಪಟ್ಟಣದಲ್ಲಿ ಹಸಿ, ಒಣ, ಸ್ಯಾನಿಟರಿ ಮತ್ತು ವಿಶೇಷ ತ್ಯಾಜ್ಯ ವಿಂಗಡಿಸಿ ನೀಡಿದರೆ ಪೌರ ಕಾರ್ಮಿಕರಿಗೆ ಕಸ ವಿಲೇವಾರಿ ಮಾಡಲು ಅನುಕೂಲ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಅಮರ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ 1 ಲಕ್ಷದ ವರೆಗೆ ಸಾಲ ವಿತರಣೆ ಮಾಡಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 50 ಸಾವಿರದ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್ ಡಬ್ಲ್ಯೂ ಎಂ ನಿಯಮ 2026 ನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ವಿಶೇಷ ಪಾತ್ರವಹಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಘನತ್ಯಾಜ್ಯ ವಸ್ತು ನಿರ್ವಹಣೆ ವಿಷಯ ತಜ್ಞ ಶಶಿಕುಮಾರ್ ರನ್ನು ಸನ್ಮಾನಿಸಲಾಯಿತು.

ಸ್ವಸಹಾಯ ಸಂಘದ ಸದಸ್ಯರಿಗೆ ಬಟ್ಟೆ ಬ್ಯಾಗ್ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಲಾಯಿತು.

ಕೆನರಾ ಬ್ಯಾಂಕ್ ನ ಫೀಲ್ಡ್ ಆಫೀಸರ್ ಚೇತನ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗುರುಮೂರ್ತಿ, ಸ್ವಚ್ಛ ಭಾರತ್ ಮಿಷನ್ ನ ಕಮ್ಯೂನಿಟಿ ಮೊಬೈಲೇಸರ್ ರಕ್ಷಿತಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಶಾಲ್ ಲೊಂಡೆ, ಪ್ರಾದೇಶಿಕ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಬಾನುಮತಿ, ಕಾರ್ಯದರ್ಶಿ ಶಿವರತ್ನ, ಸಮುದಾಯ ಸಂಘಟನಾ ಅಧಿಕಾರಿ ಶೃತಿ, ಸ್ನೇಹ ಇದ್ದರು.