ಸಾರಾಂಶ
ವಿಜಯಪುರ:ಈ ಶತಮಾನದ ಸಂತ ಸಿದ್ಧೇಶ್ವರ ಸ್ವಾಮೀಜಿಯವರು ಇಷ್ಟಪಡುತ್ತಿದ್ದ ಪ್ರಕೃತಿಯ ವಾತಾವರಣದಂತೆ 4ಎಕರೆಯಲ್ಲಿ ಆಶ್ರಮ ನಿರ್ಮಿಸಲಾಗಿದ್ದು, ಆಶ್ರಮಕ್ಕೆ ಸುತ್ತೂರು ಮಠದ ದೇಶಿ ಕೇಂದ್ರ ಸ್ವಾಮೀಜಿಗಳು ಗುರುದೇವಾಶ್ರಮ, ಗುರುದೇವಪುರ ಎಂದು ನಾಮಕರಣ ಮಾಡಿದ್ದಾರೆ. ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಗುರುದೇವ ಕೋಲ್ಡ್ ಚೈನ್ ಸ್ಟೋರೇಜ್ ಮಾಲೀಕ ವಿಠ್ಠಲಗೌಡ ಬಿರಾದಾರ ಈ ವಿಶ್ರಾಂತಿಧಾಮ ನಿರ್ಮಿಸಿದ್ದಾರೆ. ಶ್ರೀಗಳು ಈ ಹಿಂದೆ ಹಲವಾರು ಬಾರಿ ಭೇಟಿ ನೀಡಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರಂತೆ. ಹೀಗಾಗಿ ಅವರ ಆಶಯದಂತೆ ಗುರುದೇವಪುರ ಎಂದು ಹೆಸರಿಟ್ಟು ಅದಕ್ಕೆ ಗುರುದೇವ ಆಶ್ರಮಮೆಂದು ನಾಮಪಕರಣ ಮಾಡಲಾಗಿದೆ. ಶ್ರೀಗಳ ಆಶಯದಂತೆ ಆಶ್ರಮದಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಸಿರಿಧಾನ್ಯ, ನೈಸರ್ಗಿಕವಾಗಿ ಹಣ್ಣುಗಳು ಬೆಳೆಯುವುದು, ಹೂವಿನ ತೋಟ ನಿರ್ಮಾಣ, ವನಸ್ಪತಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಮಾಡಲಾಗುತ್ತಿದೆ ಎಂದು ವಿಠ್ಠಲ ಬಿರಾದಾರ ತಿಳಿಸಿದ್ದಾರೆ. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಅಮೃತಾನಂದ ಶ್ರೀ ಹಾಗೂ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.