ಸಾರಾಂಶ
ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆಯಿತು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಕ್ರೆಸ್ಟ್ರಾ
ನರಸಿಂಹರಾಜಪುರ: ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆಯಿತು.ಪಟ್ಟಣದ ಹಳೇ ಮಂಡಗದ್ದೆ ಸರ್ಕಲ್ ನಲ್ಲಿರುವ ರಂಭಾಪುರಿ ಮಠದ ಈಶ್ವರ ದೇವಸ್ಥಾನದಲ್ಲಿ ಕಲಾ ಮತ್ತು ಸುರಭಿ ಯುವಕ ಸಂಘದ ನೇತೃತ್ವವದಲ್ಲಿ ಮಹಾ ಶಿವರಾತ್ರಿ ನಡೆಯಿತು. ರುದ್ರಾಭಿಷೇಕ,ವಿಶೇಷ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.ನೂರಾರು ಭಕ್ತರು ಆಗಮಿಸಿ ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸಿದರು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಶಿವಮೊಗ್ಗದ ಗೀತಾ ಆರ್ಕೆಸ್ಟ್ರಾ ತಂಡದಿಂದ ಆರ್ಕೆಸ್ಟ್ರಾ ನಡೆಯಿತು.
ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ,ಮಹಾ ಮಂಗಳಾರತಿ, ವಿಶೇಷ ಪೂಜೆ, ತೀರ್ಥ ಪ್ರಸಾದ ನಡೆಯಿತು. ಅಗ್ರಹಾರದ ಲಲಿತ ಭಜನಾ ಮಂಡಳಿಯಿಂದ ಶಿವಸಹಸ್ರ ನಾಮ, ಕಲ್ಯಾಣಿ ವೃಷ್ಠಿಸ್ತವ, ಶಿವಾನಂದ ಲಹರಿ, ಶಿವ ಸಹಸ್ರನಾಮ. ಬಿಲ್ವಾಷ್ಟಕ ಮತ್ತು ಭಜನೆ ನಡೆಯಿತು.ನಾಗಲಾಪುರ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಮೆಣಸೂರು ಬಸವ ಕೇಂದ್ರದ ಸಮೀಪದ ಭದ್ರಾ ಹಿನ್ನೀರಿನ ತಟದಲ್ಲಿರುವ ಈಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು.ಕುದುರೆಗುಂಡಿಯ ಅಶ್ವಗುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಬುಧವಾರ ಶತ ರುದ್ರಾಭಿಷೇಕ ,ಮಹಾ ಪೂಜೆ,ಸಂಜೆ ಕಲ್ಪೋಕ್ತ ಪೂಜೆ ನಡೆಯಿತು.ಫೆಬ್ರವರಿ 27ರ ಗುರುವಾರ ರುದ್ರಹೋಮ, ಗಣ ಹೋಮ, ಮತ್ತು ಏಕ ದಶವಾರ ರುದ್ರಾಭಿಷೇಕ, ಮಹಾ ಪೂಜೆ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ.
ಮುತ್ತಿನಕೊಪ್ಪದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು.ಭದ್ರಾ ಹಿನ್ನೀರಿನ ತಟದಲ್ಲಿರುವ ಹೆಬ್ಬೆ ಭವಾನಿ ಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಿತು. ಯಡಗೆರೆ ರಾಮನಾಥೇಶ್ವರ ದೇವಸ್ಥಾನ,ಹಂತುವಾನಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಮಳಲಿ ಈಶ್ವರ ದೇವಸ್ಥಾನ, ಸೌತಿಕೆರೆಯ ಈಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು.