ಸಾರಾಂಶ
ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಚಿತ್ರದ ಮೂಲಕ ಡಾ.ವಿಷ್ಣುವರ್ಧನ್ ಅವರನ್ನು ಕನ್ನಡ ಸಿನಿರಂಗಕ್ಕೆ ಕರೆತಂದು ಜನತೆಗೆ ಪರಿಚಯಿಸಿದರು. ಆ ಮೂಲಕ ಪ್ರಬುದ್ಧ ಕಲಾವಿದನನ್ನು ಸೃಷ್ಟಿಸಿದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಜನಮನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಸಾಹಸಸಿಂಹ ಪುಣ್ಯಸ್ಮರಣೆಯಲ್ಲಿ ನಾಗೇಂದ್ರ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಚಿತ್ರದ ಮೂಲಕ ಡಾ.ವಿಷ್ಣುವರ್ಧನ್ ಅವರನ್ನು ಕನ್ನಡ ಸಿನಿರಂಗಕ್ಕೆ ಕರೆತಂದು ಜನತೆಗೆ ಪರಿಚಯಿಸಿದರು. ಆ ಮೂಲಕ ಪ್ರಬುದ್ಧ ಕಲಾವಿದನನ್ನು ಸೃಷ್ಟಿಸಿದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಜನಮನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ಹೇಳಿದರು.ನಗರದ ಹೊರವಲಯದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ನಮ್ಮ ಜೈ ಕರುನಾಡ ವೇದಿಕೆಯಿಂದ ಆಯೋಜಿಸಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಷ್ಣುವರ್ಧನ್ ಅತ್ಯಂತ ಜನಪ್ರಿಯ ಕಾದಂಬರಿಗಳ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಕೌಟುಂಬಿಕ ಚಿತ್ರಗಳಲ್ಲಿ ಮನೋಜ್ಞ ಅಭಿನಯದಿಂದ ಜನಮನ ಗೆದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಮಹಾನ್ ನಟ ಎನಿಸಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ ಮಾತನಾಡಿ, ವಿಷ್ಣುವರ್ಧನ್ ಸ್ಮರಣೋತ್ಸವ ಸಮಾರಂಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಸ್ತುತ್ಯಾರ್ಹ ಸಂಗತಿ. ಎಲ್ಲ ಕನ್ನಡಪರ ಸಂಘಟನೆಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವ ಮೂಲಕ ಸಮಾಜಮುಖಿಯ ಸರಳತೆ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ, ಸಂಘಟನೆಯ ಟಿ.ಮಂಜುನಾಥ, ಅಖಂಡ ಕರವೇ ಸಂಸ್ಥಾಪಕ ಅಧ್ಯಕ್ಷ ಎಸ್.ಜಿ.ಸೋಮಶೇಖರ್, ರಾಜ್ಯಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಶರೀಫ್ ಸಾಬ್, ಬಸವರಾಜ್, ಚಂದ್ರಪ್ಪ, ಲಿಂಗಪ್ಪ, ಸಾಯಿ, ಸಾಗರ್, ಜಯಂತ್, ಅರುಣ್‌ಕುಮಾರ್, ಲೋಕೇಶ್, ಮಮತಾ, ನೇಹಾ, ಛಾಯಾಗ್ರಾಹಕ ವಿಜಯ್ ಕುಮಾರ, ಕೌಶಿಕ್‌ಗೌಡ, ತಿಪ್ಪೇಶ್, ಜಾಕೀರ್‌ಸಾಬ್, ಸೂರಿ ಸೇರಿದಂತೆ ಇನ್ನು ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಾಧಕರಾದ ಸಿಮ್ರಾನ್, ನಯನ, ಜಿ.ಎಸ್.ವಸಂತಕುಮಾರ, ಕ್ರೈಂ ಪೊಲೀಸ್ ಶಂಕರ್ ಆರ್.ಜಾಧವ್, ಎಸ್.ರಂಗಸ್ವಾಮಿರನ್ನು ಸನ್ಮಾನಿಸಲಾಯಿತು.- - - -30ಕೆಡಿವಿಜಿ40: ದಾವಣಗೆರೆಯಲ್ಲಿ ನಮ್ಮ ಜೈ ಕರುನಾಡ ವೇದಿಕೆಯಿಂದ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್ ರನ್ನು ಸನ್ಮಾನಿಸಲಾಯಿತು.